ಜೈನರ ಅಭಿಯಾನ ನಿಡ್ವಾಳ ಬಸದಿ

Share this

ನಾವು ಜೈನರು ತ್ಯಾಗದ ಶಿಖರದ ಮೇಲೆ ಕುಳಿತವರು – ಸುಮಾರು ೪೫ ಲಕ್ಷ ಜೈನರು ಜಗತ್ತಿನಲ್ಲಿ ಇರುವವರು – ಕೇವಲ ಒಂದು ರೂಪಾಯಿ ಒಂದು ಬಸದಿ ಜೀರ್ಣೋದ್ದಾರ , ಶುದ್ಧ ಸಂಪ್ರೋಕ್ಷಣಕ್ಕೆ ದಾನಮಾಡಿದರೆ – ೪೫ ಲಕ್ಷ ಸಂಗ್ರಹ ಸಾಧ್ಯತೆ ಇದೆ – ರೂಪಾಯಿ ೧೦ ದಾನಮಾಡಿದರೆ , ೧೦೦ ದಾನಮಾಡಿದರೆ, ೧೦೦೦ ದಾನಮಾಡಿದರೆ – ಆಗುವ ಮೊತ್ತವನ್ನು ಒಮ್ಮೆ ಚಿಂತನ ಮಂಥನ ಮಾಡಿ ಅನುಷ್ಠಾನ ಮಾಡಿದರೆ – ನಾವು ಜೈನರಾಗಿ ಹುಟ್ಟಿದಕ್ಕೆ ಸಾರ್ಥಕ ಆಗಬಹುದು ಎನ್ನುವ ಬಲ್ಲವರ ಮಾತಿಗೆ ಬೆಲೆ ಕೊಡೋಣ . ಇದು ಆಗದಿದ್ದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಮ್ಮ ಭಾರತೀಯ ಜೈನ ಮಿಲನ ಈ ದೃಷ್ಟಿಯಲ್ಲಿ ಚಿಂತಿಸಿದರೆ – ಕೆಲವೇ ಸಮಯದಲ್ಲಿ – ಮನೆ ಮನೆಯಲ್ಲಿ ಮನ ಮನದಲ್ಲಿ – ಮಿಲನ ಹೆಮ್ಮರವಾಗಿ ಬೆಳೆಯಬಹುದು ಎಂಬುವುದು ನಮ್ಮೆಲ್ಲರ ಅಂಬೋಣ – ಅನುಷ್ಠಾನಕ್ಕಾಗಿ ಪಂಚನಮಸ್ಕಾರ ಮಂತ್ರದ ಪಠಣದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ.

ಉದ್ದೇಶಗಳು

. ಕನಿಷ್ಠ ವಾರಕ್ಕೆ ಒಮ್ಮೆ ಬಸದಿಯಲ್ಲಿ ಪಂಚನಮಸ್ಕಾರ ಮಂತ್ರ ೧೦೮ ಸಲ ಪಠಣ ಮತ್ತು ಬಸದಿ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುವುದು
. ಪ್ರತಿ ಜೈನರ ಭಾವಚಿತ್ರ ಸಹಿತ ಯಾ ರಹಿತಅವರ ಪರಿಚಯ/ ಜೀವನ ಚರಿತ್ರೆ ೫೦ ಪದಗಳ ಮಿತಿಯೊಂದಿಗೆ ಉಚಿತ ಪ್ರಕಟಣೆ
. ವಿಭಿನ್ನ ಅಭಿಯಾನಗಳಲ್ಲಿ ಗರಿಷ್ಠ ಜೈನರಿಗೆ ಮನೆಯಿಂದಲೇ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವುದು
. ಮೊಬೈಲ್ ಸದ್ಬಳಕೆಗೆ ವಿಪುಲ ಅವಕಾಶಗಳನ್ನು ಒದಗಿಸುವುದು
. ನಮ್ಮನ್ನು ಅಗಲಿದ ನಮ್ಮವರನ್ನು ಅಮರರನ್ನಾಗಿಸುವ ಅತಿ ಉತ್ತಮ ವೇದಿಕೆ ಇಲ್ಲಿ ಲಭ್ಯವಾಗಲಿದೆ
. ನಾವು ಮಾಡುವ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯತೆ
. ಪರಿಚಯ / ಜೀವನ ಚರಿತ್ರೆ ೫೦ ಪದಗಳಿಗಿಂತ ಹೆಚ್ಚು ಬರೆಯಲು ಇಚ್ಚಿಸುವವರು ನಿಗದಿತ ಕನಿಷ್ಠ ಶುಲ್ಕ ಪಾವತಿಸಬೇಕು
. ಪ್ರತಿ ಊರಿನ ಜೈನರ ಅಭಿಯಾನ ಪ್ರಾರಂಭಿಸಲು ಅವಕಾಶವಿದೆ
. ಅನ್ಯರ ಬಗ್ಗೆ ನಿರಂತರ ಮಾತನಾಡುವ ನಾವು ಅನ್ಯರಿಗೆ ಸ್ಥಾನ ಮಾನ ಘನತೆ ಗೌರವ ಸಿಗುವಂತೆ ಮಾಡೋಣ

ಅಭಿಯಾನನಮ್ಮೆಲ್ಲರ ಕಾರ್ಯಕ್ರಮನಮ್ಮ ಅಭಿವುದ್ಧಿ ನಮ್ಮಿಂದ ಮಾತ್ರ ಸಾಧ್ಯಅರಿತು ಬಾಳೋಣ

ಅನುಷ್ಠಾನ
. ಪ್ರತಿ ಬಸದಿ ಹೆಸರಿನ್ಲಲಿ ಯಾ ಸ್ಥಳದಲ್ಲಿ ಹೆಸರಿನಲ್ಲಿ ಜೈನರ ಅಭಿಯಾನದ ರಚನೆ
. ಒಬ್ಬರು ಗೌರವ ಅಧ್ಯಕ್ಷರು , ಅಧ್ಯಕ್ಷರು , ಉಪಾಧ್ಯಕ್ಷರು , ಕಾರ್ಯದರ್ಶಿ , ಉಪಕಾರ್ಯದರ್ಶಿ , ಖಜಾಂಜಿ , ಸಂಚಾಲಕರು , ಇಬ್ಬರು ವರದಿಗಾರರುಇದ್ದರೆ ಅನುಷ್ಠಾನ ಸುಲಲಿತ
. ಕನಿಷ್ಠ ಜನರಿಗೆ ಆನ್ಲೈನ್ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದು
. ವ್ಯಾಪ್ತಿಯಲ್ಲಿ ಅಗಲಿದವರ ಭಾವಚಿತ್ರ ಸಹಿತ ಇಲ್ಲದಿದ್ದರೆ ರಹಿತ ೫೦ ಪದಗಳಿಗೆ ಸೀಮಿತವಾಗಿ ಆನ್ಲೈನ್ ಪ್ರಕಟಣೆಗೆ ಪ್ರಥಮ ಆದ್ಯತೆ
. ವ್ಯಾಪ್ತಿಯ ಡೈರೆಕ್ಟರಿ ಶೀಘ್ರ ಪ್ರಕಟಣೆ
. ಪ್ರತಿ ಈಗ ಇರುವ ವ್ಯಕ್ತಿಯ ಪರಿಚಯ ಜೀವನ ಚರಿತ್ರೆ ಭಾವಚಿತ್ರ ಸಹಿತ ಯಾ ರಹಿತ ಪ್ರಕಟಣೆಮೊಬೈಲ್ ಸಂಖೆ ಅಪೇಕ್ಷಿಸಿದವರಿಗೆ ಮಾತ್ರ ಪ್ರಕಟಣೆ
.ವಿಶೇಷ ಶುಲ್ಕ ಪಾವತಿಸಿದವರಿಗೆ ಸಲಹೆಗಾರರು ಮತ್ತು ಗೌರವ ಸಲಹೆಗಾರರ ಹೆಸರು ಪ್ರಕಟಿಸಲಾಗುವುದು
. ಸಮಗ್ರ ಅತಿ ಶೀಘ್ರ ಜೈನರ  ಅಭಿವೃದ್ಧಿ ದೃಷ್ಟಿಕೋನದ ಸಲಹೆಗೆ ಮುಕ್ತ ಅವಕಾಶವಿದೆ.
. ಮನದ ಮಾತು ಪ್ರಕಟಣೆಗೆ ಕನಿಷ್ಠ ಶುಲ್ಕದಲ್ಲಿ ಅವಕಾಶ 

Leave a Reply

Your email address will not be published. Required fields are marked *

error: Content is protected !!! Kindly share this post Thank you