ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಲು ಪಶ್ಚಿಮ ಘಟ್ಟದ ನೈಸರ್ಗಿಕ ಸೌಂದರ್ಯದ ಮಡಿಲಲ್ಲಿ ಅಲಂಕೃತವಾಗಿದೆ. ಈ ಕ್ಷೇತ್ರದ ಇತಿಹಾಸವು ಸುಮಾರು ೩೬೦ ವರ್ಷ ಹಿಂದುಗಡೆಗೆ ತಲುಪುತ್ತದೆ.
ಸುಮಾರು 70 ವರ್ಷಗಳ ಹಿಂದೆ, ಶ್ರಿಮಾನ್ ಕೃಷ್ಣಪ್ಪ ಗೌಡ ಮಿತ್ತಂಡೇಲು ಅವರು ಈ ದೇವಸ್ಥಾನವನ್ನು ಕಾಡಿನ ಮಧ್ಯದಲ್ಲಿ ಶಿಥಿಲಾವಸ್ಥೆಯಲ್ಲಿ ಕಂಡು, ತಮ್ಮ ನಿಷ್ಠೆಯಿಂದ ವ್ರತ ನಿಯಮಗಳನ್ನು ಪಾಲಿಸಿ ಪೂಜೆ ಪುನಸ್ಕಾರಗಳನ್ನು ಪ್ರಾರಂಭಿಸಿದರು. ತದನಂತರ ಈ ದೇವಸ್ಥಾನದಲ್ಲಿ ಬ್ರಾಹ್ಮಣ ಪುರೋಹಿತರಿಂದ ಪೂಜಾ ಕಾರ್ಯಗಳು ನಡೆಯಲಾರಂಭಿಸಿತು.
2006-07 ರ ಇಸವಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು. 2009ರಲ್ಲಿ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯಿತು. ಆ ಸಮಯದಿಂದ ನಿತ್ಯ ಪೂಜೆ, ಸಂಕ್ರಮಣ ಪೂಜೆ, ಭಜನೆ ಸೇವೆ, ಶಿವರಾತ್ರಿಯ ವಿಶೇಷ ಕಾರ್ಯಕ್ರಮಗಳು, ಯುಗಾದಿ ಪೂಜೆ, ವಾರ್ಷಿಕ ಜಾತ್ರೋತ್ಸವ ಮತ್ತು ಕ್ರೀಡಾ ಕೂಟಗಳು ಸಂಪ್ರದಾಯಬದ್ಧವಾಗಿ ಆಯೋಜಿಸಲಾಗುತ್ತಿದೆ.
ಕ್ಷೇತ್ರದಲ್ಲಿ ಮಹಾಗಣಪತಿ, ನಾಗಬ್ರಹ್ಮ ಸೇರಿದಂತೆ ಚಾಮುಂಡೇಶ್ವರಿ, ಗುಳಿಗ, ಪಂಜುರ್ಲಿ, ಕಲ್ಲುರ್ಟಿ ದೈವಗಳನ್ನು ಪರಿವಾರ ದೈವಗಳಾಗಿ ಆರಾಧಿಸಲಾಗುತ್ತಿದೆ.
ನಿತ್ಯ ಪೂಜಾ ವಿಧಾನಗಳು ಸುಸೂತ್ರವಾಗಿ ನಿರ್ವಹಿಸಲಾಗುತ್ತಿದ್ದು, ಭಕ್ತರ ಇಚ್ಛಾಸಿದ್ಧಿಗಳನ್ನು ಈ ಸ್ಥಳದ ದೇವರು ನೆರವೇರಿಸುತ್ತಿದ್ದಾರೆ. ದೇವಸ್ಥಾನದಲ್ಲಿ ದೈನಂದಿನ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.
ಪ್ರತಿಷ್ಠಾ ದಿನದಲ್ಲಿ ವಾರ್ಷಿಕ ಮಹೋತ್ಸವ, ಮಹಾಶಿವರಾತ್ರಿಯ ವಿಶೇಷ ಕಾರ್ಯಕ್ರಮ, ನಾಗರಪಂಚಮಿ, ದೀಪಾವಳಿ, ಮತ್ತು ಪತ್ತನಾಜೆ ದಿನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಸದಾ ಭಕ್ತರ ಮನಸು ಆನಂದದಿಂದ ತುಂಬಿಸುತ್ತವೆ.
Thank you so much Girish nair for this article.