ಮೂಲ ದೈವಾರಾಧನೆ ಅಭಿಯಾನ – ನ್ಯಾಯದಾನ -ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು

Share this

ಮನದ ಮಾತು 

ಪ್ರತಿಯೊಬ್ಬ ದೈವ ಆರಾಧಕನಿಗೂ ತನ್ನ ಮನದ ಮಾತಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ – ಉಪಯೋಗಿಸಿ
ದೈವಾರಾಧನೆ ಜಾಗತಿಕ ಮಟ್ಟದ ಅತಿ ಶೀಘ್ರ ನ್ಯಾಯದಾನ ವ್ಯವಸ್ಥೆ – ನಮ್ಮ ಪೂರ್ವಜರ ಕೊಡುಗೆ
ದೈವವನ್ನು ಪ್ರತಿಯೊಬ್ಬ ತನ್ನ ಮನದಲ್ಲಿ ಪ್ರತಿಷ್ಠೆ ಮಾಡಿದರೆ ಮಾತ್ರ ಬಾಹ್ಯ ಪ್ರತಿಷ್ಠೆ ಫಲ ನೀಡುವುದು
ದೈವ ಯಾರೇ ತಪ್ಪು ಮಾಡಿದರು ಅವನನ್ನು ಶಿಕ್ಷಿಸಿ ಸರಿದಾರಿಯಿಯಲ್ಲಿ ನಡೆಯುವಂತೆ ಮಾಡುವ ಅತ್ಯದ್ಭುತ ಶಕ್ತಿ
ದೈವಾರಾಧನೆ ಸರಿದಾರಿಯಲ್ಲಿ ಮುನ್ನಡೆಸಲು – ಪಟ್ಟ , ಗುತ್ತು , ಗಡಿ ,ಬಾರಿಕೆ , ಇತ್ಯಾದಿ ಪೂರಕ ವ್ಯವಸ್ಥೆ
ದೈವ ಮಾಯಜ್ಞಾನ ಮೂಲಕ ತಪ್ಪು ಮಾಡಿದವನಿಗೆ ಯಜಮಾನನ ಅಣುಮತಿ ಮೇರೆಗೆ ಶಿಕ್ಷೆ ಪ್ರಕಟಣೆ ಮಾಡುತ್ತದೆ
ದೈವಕ್ಕೆ ಮೊರೆ ಹತ್ತು ಪದಗಳಿಗೆ ಮೀರಿ ಅಪ್ರಸ್ತುತ
ದೈವದ ಅಪ್ಪಣೆ ಇಪ್ಪತ್ತು ಪದಗಳಿಗೆ ಮೀರಿದರೆ – ದೈವದ ನುಡಿಕಟ್ಟು ಪದ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ
ದೈವದ ನೇಮ ಕಟ್ಟುಪಾಡಿಗೆ ಸೀಮಿತವಲ್ಲ – ಅದು ಪೂರಕ ವ್ಯವಸ್ಥೆ ಮಾತ್ರ
ದೈವದ ನೇಮ ಇಂದು ಪಟ್ಟ ಗುತ್ತು ಬಾರಿಕೆಯವರಿಗೆ ಸನ್ಮಾನ ವೇದಿಕೆಯಾಗಿರುವುದು – ದಾರಿ ತಪ್ಪಿದ ದುರಂತ
ಸಮಾಜದ ದುಷ್ಟ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಶಿಕ್ಷೆಗೆ ಒಳಪಡಿಸುವುದೇ- ಪಟ್ಟ ಗುತ್ತು ಬಾರಿಕೆಗೆ ನಿಜವಾದ ಸನ್ಮಾನ
ದೈವಾರಾಧನೆಯಲ್ಲಿ ವಾದ ವಿವಾದಕ್ಕೆ ಅವಕಾಶ ನಿಷಿದ್ಧ
ದೈವದ ಪುಷ್ಪದ ನುಡಿ ಮಾತ್ರ ಈ ಕಾಲಕ್ಕೆ ಸೂಕ್ತ
ಪಟ್ಟ, ಗುತ್ತು, ಬಾರಿಕೆ, ಪರಿಚಾರಕರು , ದೈವ ಪಾತ್ರಿಗಳು ,ಪಾರಿ ಹೇಳುವವರು , ದೈವಕ್ಕೆ ನೇಮ ಮಾಡುವವರು , ದೈವದ ನಂಬಿಕೆ ಇರುವವರು , ಜ್ಯೋತಿಷ್ಯರು , ತಂತ್ರಿಗಳು – ಒಟ್ಟಾರೆ ಸಮಸ್ತರು – ಉನ್ನತ ಶಿಖರದಲ್ಲಿ ಇದ್ದ ದೈವಾರಾಧನೆ ಮೌಲ್ಯ – ತನ್ನ ಮೌಲ್ಯವನ್ನು ಪಾತಾಳದಿಂದ ಮೇಲೆಕ್ಕೆ ಎತ್ತಲು ಶತ ಪ್ರಯತ್ನ ಮಾಡೋಣ –

 

 

See also  ಮೂಲ ದೈವಾರಾಧನೆ ಅಭಿಯಾನ – ನ್ಯಾಯದಾನ

Leave a Reply

Your email address will not be published. Required fields are marked *

error: Content is protected !!! Kindly share this post Thank you