ಇಚ್ಲಂಪಾಡಿ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 22-09-2025 ಸೋಮವಾರದಂದು, ವರ್ಷಂಪ್ರತಿ ನಡೆಯುವಂತೆ ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ಆರಂಭಗೊಳ್ಳಲಿದೆ. ಬೆಳಿಗ್ಗೆ 8.00 ಗಂಟೆಗೆ ದೇವತಾ ಪ್ರಾರ್ಥನೆ, ಗಣಹೋಮ ಹಾಗೂ ಘಟ ಸ್ಥಾಪನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಪ್ರತಿದಿನ ರಾತ್ರಿ 8.00 ಗಂಟೆಗೆ ವೈಭವದಿಂದ ನಡೆಯಲಿದ್ದು, 01-10-2025 ಬುಧವಾರದವರೆಗೆ ಮುಂದುವರಿಯಲಿದೆ. ಇದೇ ದಿನ ಬೆಳಿಗ್ಗೆ 8.30ರಿಂದ 10.30ರವರೆಗೆ ಮಹಾಪೂಜೆ ನೆರವೇರಿಸಿ ನಂತರ ಕ್ಷೇತ್ರದಲ್ಲಿ ಆಯುಧಪೂಜೆ ನಡೆಯಲಿದೆ.ಅದೇ ರೀತಿ, 02-10-2025 ಗುರುವಾರ ಬೆಳಿಗ್ಗೆ 8.30ಕ್ಕೆ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮ ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಆಡಳಿತ ಸಮಿತಿ ವಿನಂತಿಸಿದೆ.
