
ಇಚ್ಲಂಪಾಡಿ ಬೀಡು:ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಶ್ರೀ ಉಳ್ಳಾಕ್ಲು ಸೇವಾ ಸಮಿತಿ, ಇಚ್ಲಂಪಾಡಿ-ಬೀಡು ಸಹಯೋಗದಲ್ಲಿ ಪರಂಪರೆಯಾಗಿ ನಡೆದುಬರುವ ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ನೇಮೋತ್ಸವವು ಈ ವರ್ಷವೂ ಅದ್ದೂರಿಯಾಗಿ, ಭಕ್ತಿಭಾವಪೂರ್ಣವಾಗಿ ಏಪ್ರಿಲ್ 9, 2025ರಿಂದ ಏಪ್ರಿಲ್ 16, 2025ರ ವರೆಗೆ ಶ್ರೀ ಉಳ್ಳಾಕ್ಲು ದೈವಸ್ಥಾನ, ಮಾಡ -ಇಚ್ಲಂಪಾಡಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಕಾರ್ಯಕ್ರಮಗಳು
🔹 09-04-2025 (ಬುಧವಾರ) – ಗೊನೆ ತರುವುದು
ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆಯಾಗಿ ಈ ದಿನ ಗೊನೆ ತರುವ ಕಾರ್ಯ ನಡೆಯಲಿದೆ.
🔹 10-04-2025 (ಗುರುವಾರ) – ಗೊನೆ ಮುಹೂರ್ತ
ಬೆಳಿಗ್ಗೆ 9.30: ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಗೊನೆ ಮುಹೂರ್ತ ಪೂಜೆ ನೆರವೇರಲಿದೆ.
🔹 13-04-2025 (ಆದಿತ್ಯವಾರ) – ಧ್ವಜಾರೋಹಣ ಮತ್ತು ನೇಮೋತ್ಸವ
ಬೆಳಿಗ್ಗೆ 7.00: ಶ್ರೀ ಉಳ್ಳಾಕ್ಲು ದೈವಸ್ಥಾನ, ಮಾಡ -ಇಚ್ಲಂಪಾಡಿಯಲ್ಲಿ ದೇವತಾ ಪ್ರಾರ್ಥನೆ, ಶುದ್ಧಿ ಕಲಶ, ಗಣಪತಿ ಹೋಮ
ಸಾಯಂಕಾಲ 6.00: ಧ್ವಜಾರೋಹಣ (ಉತ್ಸವದ ಅಧಿಕೃತ ಪ್ರಾರಂಭ)
ನಂತರ ಭಂಡಾರ ತೆಗೆಯುವ ಕಾರ್ಯಕ್ರಮ, ಕುದುರೆಮುಖ ಮತ್ತು ಉದ್ರಾಂಡಿ ದೈವಗಳ ನೇಮೋತ್ಸವ.
🔹 14-04-2025 (ಸೋಮವಾರ) – ಬಿಸು ಕಾಣಿಕೆ
ಬೆಳಿಗ್ಗೆ 6.30: ಭಕ್ತಾದಿಗಳಿಂದ ಬಿಸು ಕಾಣಿಕೆ ಸಮರ್ಪಣೆ
🔹 15-04-2025 (ಮಂಗಳವಾರ) – ಶ್ರೀ ಉಳ್ಳಾಕ್ಲು ದೈವದ ನೇಮೋತ್ಸವ
ಮಧ್ಯಾಹ್ನ 1.00: ಶ್ರೀ ಉಳ್ಳಾಕ್ಲು ದೈವಕ್ಕೆ ಎಣ್ಣೆ ವೀಳ್ಯ ಸಮರ್ಪಣೆ
ಅಪರಾಹ್ನ 3.00: ಶ್ರೀ ಉಳ್ಳಾಕ್ಲು ದೈವದ ನೇಮೋತ್ಸವ (ವಿಶೇಷ ಧಾರ್ಮಿಕ ವಿಧಿ)
🔹 16-04-2025 (ಬುಧವಾರ) – ಹಳ್ಳತ್ತಾಯ, ಪನ್ಯಾಡಿತ್ತಾಯ, ಪೊಟ್ಟ ದೈವಗಳ ನೇಮೋತ್ಸವ
ಮಧ್ಯಾಹ್ನ 1.00: ಶ್ರೀ ಹಳ್ಳತ್ತಾಯ ದೈವಕ್ಕೆ ಎಣ್ಣೆ ವೀಳ್ಯ ಸಮರ್ಪಣೆ
ಅಪರಾಹ್ನ 3.00: ಶ್ರೀ ಹಳ್ಳತ್ತಾಯ, ಪನ್ಯಾಡಿತ್ತಾಯ, ಪೊಟ್ಟ ದೈವಗಳ ನೇಮೋತ್ಸವ
ರಾತ್ರಿ 9.00: ಚೌಕಿ ಪೂಜೆ
ರಾತ್ರಿ 9.15: ಅನ್ನಸಂತರ್ಪಣೆ – ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ
ರಾತ್ರಿ 9.30: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದಶಾವತರ ಯಕ್ಷಗಾನ ಮಂಡಳಿ, ಮೂಲ್ಕಿ, ದ.ಕ.
ಇವರಿಂದ ಪ್ರಸಿದ್ಧ ಯಕ್ಷಗಾನ ಬಯಲಾಟ-“ಪರಕೆದ ಪಲ್ಲೆಂಕಿ”
ಭಕ್ತಾಧಿಗಳೆಲ್ಲರೂ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೈವ -ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.
