ದೈವ ಬಲದೊಂದಿಗೆ ಜನಬಲ ಪೂರಕ
ದೈವ ಬಲವಿಲ್ಲದ ಜನಬಲ ಮಾರಕ
ದೈವ ಬಲದ ಮಹತ್ವ ತಿಳಿಯೆಂದ ————————————————— ಅವ್ಯಕ್ತ
ಜನ ಬಲದ ಮಾತಿಗೆ ಪ್ರಧಾನಿ ಬದ್ದ
ದೈವ ಬಲದ ಮಾತಿಗೆ ಅರಸು ಬದ್ದ
ಜನ ಬಲದ ಮಾತಿಗೆ ಅರಸ ಬದ್ಧನಾಗುವನೆ ———————————— ಅವ್ಯಕ್ತ
ತಪ್ಪಿನ ಸಮರ್ಥನೆ ವಾದಕ್ಕೆ ಮೂಲ
ತಪ್ಪಿನ ಒಪ್ಪಿಗೆ ಏಕತೆಗೆ ಮೂಲ
ವಾದ ವಿವಾದ ಅರಿವಿನ ಕೊರತೆಯೆಂದ ——————————————— ಅವ್ಯಕ್ತ
ಅಕಾಲಿಕ ಮರಣಕ್ಕೆ ಸ್ಪಂದಿಸುವ ಇಷ್ಟಮಿತ್ರರು
ಅಕಾಲಿಕ ರೋಗಕ್ಕೆ ಸ್ಪಂದಿಸುವ ಇಷ್ಟಮಿತ್ರರು
ಆರ್ತಿಕ ಸಂಕಷ್ಟಕ್ಕೆ ಸ್ಪಂದಿಸುತಿಲ್ಲ ಏಕಯ್ಯ ——————————- ಅವ್ಯಕ್ತ
ಬದುಕಿನ ಶಿಕ್ಷಣ ಜಾತಿ
ಉದ್ಯೋಗ ಶಿಕ್ಷಣ ವಿದ್ಯೆ
ನಾವು ಅರಿತು ಬಾಳೋಣ ——————————————————– ಅವ್ಯಕ್ತ
ಅರಸನಿಗೆ ಸಲಹೆಗಾರರು ದೈವ ದೇವರು
ಪ್ರಧಾನಿಗೆ ಸಲಹೆಗಾರರು ನ್ಯಾಯಾಂಗ ರಾಷ್ಟ್ರಪತಿ
ಅರಸ ಪ್ರಧಾನಿ ಸಲಹೆಗೆ ಸ್ಪಂದಿಸುತಿಹರೆ ———————————— ಅವ್ಯಕ್ತ
ಪ್ರಜಾ ಪದ್ಧತಿ ಜನ ಬೆಂಬಲ ಪ್ರತೀಕ
ಅರಸು ಪದ್ಧತಿ ದೈವದೇವರ ಬೆಂಬಲ ಪ್ರತೀಕ
ಅಳಿವು ಸೋಲು ಅರಸು ಪದ್ದತಿಗೆ ಇಲ್ಲವೆಂದ ————————- ಅವ್ಯಕ್ತ
ಜನ ಬೆಂಬಲ ಕಳೆದುಕೊಂಡ ಪ್ರಧಾನಿ ಮನೆಗೆ
ದೈವದೇವರ ಬೆಂಬಲ ಕಳೆದುಕೊಂಡ ಅರಸ ಸ್ಮಶಾನಕ್ಕೆ
ಪ್ರಧಾನಿ ಅರಸರಲ್ಲಿ ಯಾರ ಆಡಳಿತ ಒಳಿತಯ್ಯ ———————– ಅವ್ಯಕ್ತ
ಪ್ರಜಾ ಪದ್ದತಿಯಲ್ಲಿ ನ್ಯಾಯ ಅನ್ಯಾಯ ತೀರ್ಮಾನ ಬಲುಕಷ್ಟ
ಅರಸು ಪದ್ದತಿಯಲ್ಲಿ ಕೇವಲ ಬೆರಳೆಣಿಕೆ ನಿಮಿಷ ಮಾತ್ರ
ಅಂದಿನ ವಿದ್ಯೆರಹಿತ ಬುದ್ದಿಜೀವಿಗಳ ಬದುಕು ಲೇಸೆಂದ —————- ಅವ್ಯಕ್ತ
ಸ್ವಜಾತಿ ಭಯೋತ್ಪದಕರ ಸಂಖ್ಯೆ ಏರು ಗತಿಯಲ್ಲಿಹುದಯ್ಯ
ದೇವರ ಪೂಜೆ ಜಪತಪ ಬೋಧನೆ ಸಾಲದಯ್ಯ
ಸ್ವಜಾತಿ ನಿಗ್ರಹ ದಳ ರಚನೆ ಅನಿವಾರ್ಯವೆಂದ ————- ಅವ್ಯಕ್ತ
ಸಮಾನತೆ ಬೋದಿಪ ವಿದ್ಯಾ ಸಮುಸ್ತೆಗಳು
ಅಸಮಾನತೆ ಸೃಷ್ಟಿಸುವ ದೈವ ದೇವಸ್ಥಾನಗಳ
ದೇವಾ ಪರಾಕಾಯದೊಳು ಬಂದು ರಕ್ಷಿಸೆಂದ —————————————————- ಅವ್ಯಕ್ತ
ಜಾತಿ ಪಾಠ ಓದಿ ಅಳವಡಿಸದಿದ್ದೊಡೆ
ನನ್ನ ಜಾತಿಯ ಹೆಸರು ಪೇಳುತಿರೆ
ಮಾನವ ಕುಲಕ್ಕೆ ಜಾತಿಗೆ ಅವಮಾನವೆಂದ ——————————————————– ಅವ್ಯಕ್ತ
ಅನ್ಯರ ಕಿಸೆ ತುಂಬುವ ವಾಟ್ಸಪ್ಪ್ ಫೇಸ್ಬುಕ್ ಬಳಕೆದಾರರೆ
ನಿನ್ನ ಕಿಸೆ ಬರಿದುಮಾಳ್ಫ ವಾಟ್ಸಪ್ಪ್ ಫೇಸ್ಬುಕ್ ಬಳಕೆದಾರರೆ
ನಿನ್ನ ಕಿಸೆ ವಾಟ್ಸಪ್ಪ್ ಫೇಸ್ಬುಕ್ ತುಂಬಿಸಲು ತಿಳಿಯೆಂದ ……………………………ಅವ್ಯಕ್ತ
ಉದ್ಯೋಗ ಉದ್ಯಮಕ್ಕೆ ಬುಲೆಟಿನ್ ಉದಯ
ಅರಿತು ಉದ್ಯೋಗ ಉದ್ಯಮಕ್ಕೆ ತೊಡಗಿದರೆ
ಬದುಕು ನಿತ್ಯ ಸುಖದ ಸುಪ್ಪತ್ತಿಗೆಯೆಂದ ………………………………………………ಅವ್ಯಕ್ತ
ಗ್ರಾಮ ಹರಟೆ ವಾಟ್ಸಪ್ಪ್
ತಾಲೂಕು ಹರಟೆ ಫೇಸ್ಬುಕ್
ಜಗದಿ ಹರಟೆ ವೆಬ್ಬೆಂದ …………………………………………………………………ಅವ್ಯಕ್ತ
ದೇಹದ ರೋಗಕ್ಕೆ ವೈದ್ಯರು ಇರುವವರಯ್ಯ
ಆತ್ಮನ ರೋಗಕ್ಕೆ ದೇವರು ಇರುವವರಯ್ಯ
ಅರಿತು ಬಾಳಿದವನಿಗೆ ನೆಮ್ಮದಿ ಬಾಳೆಂದ —————————————– ಅವ್ಯಕ್ತ
ಭೂತ ಲೋಕದ ತಪ್ಪು ತಿದ್ದುತಿಹುದು ಅಂದು
ಭೂತ ವ್ಯಕ್ತಿ ತಪ್ಪು ತಿದ್ದುತಿಹುದು ಇಂದು
ಭೂತದ ಮೂಲ ಸ್ವರೂಪ ಜನರ ಅಂಬೋಣ ——————– ಅವ್ಯಕ್ತ
ಧನದ ಮೂಲಕ ತೋರ್ಪಡಿಸುವ ಭಕ್ತಿ ಶ್ರದ್ದೆ ಇಂದು
ಮನದ ಮೂಲಕ ತೋರ್ಪಡಿಸುವ ಭಕ್ತಿ ಶ್ರದ್ದೆ ಅಂದು
ಭಕ್ತಿ ಶ್ರದ್ದೆಯ ಮರ್ಮ ಮನ ಮುಟ್ಟುವಂತೆ ಪೆಳೆಂದ ————– ಅವ್ಯಕ್ತ
ಸೇವೆ ಮಾಯವಾಗಿ ವ್ಯಾಪಾರ
ವ್ಯಾಪಾರ ಮಾಯವಾಗಿ ದರೋಡೆ
ಸೇವಾ ಬದುಕು ಬೇಕೆಂದ ——————————————- ಅವ್ಯಕ್ತ
ಅರಿಯದೆ ಮಾತನಾಡುವವರ ಜಗದಿ
ಅರಿತು ಮಾತನಾಡುವವರು ಇದ್ದೊಡೆ
ಮೂಖನಾಗಿ ದೇವರರಂತೆ ಬದುಕೆಂದ —————————- ಅವ್ಯಕ್ತ
ಪಟ್ಟದ ಅರಸು ಇದ್ದ ಸಭೆ ರಣರಂಗವಾದೊಡೆ
ಅರಸನ ಮಾತಿಗೆ ಬೆಲೆ ತೆತ್ತು ಪಾಲಿಸದಿದ್ದೊಡೆ
ದೈವ ದೇವರ ಮಾಯಾ ಶಕ್ತಿ ಧರೆಗಿಳಿಯುವುದೆಂದ ————— ಅವ್ಯಕ್ತ
ದೇವರಲ್ಲಿ ಭಿಕ್ಷೆಗಾಗಿ ದೇವಾಲಯಕ್ಕೆ ಬರುತಿಹರು
ದೇವಾಲಯಕ್ಕೆ ಬಂದು ಅಧಿಕಾರ ಚಲಾಯಿಸಿದರೆ
ದೇವರು ಕೊಡುವ ಭಿಕ್ಷೆ ವಿಷವಾದೀತು —————————— ಅವ್ಯಕ್ತ
ದೈವ ದೇವರ ಸೇವಾ ಒಕ್ಕೂಟಗಳ ಉದಯ
ವೃತ್ತಿ ವ್ಯಾಪಾರ ಸೇವಾ ಒಕ್ಕೂಟಗಳ ಉದಯ
ರಾಜಕಾರಿಣಿಗಳ ಸೇವಾ ಒಕ್ಕೂಟಗಳ ಕೃಪೆಯೆಂದ ——————- ಅವ್ಯಕ್ತ
ಸೇವಾ ಒಕ್ಕೂಟಗಳ ವ್ಯಾಪ್ತಿ ವಿಸ್ತರಿಸಿದೊಡೆ
ನರಕ ಮಾನವ ಬಾಳು ಮಾಯವಾಗಿ
ಸುಖ ಶಾಂತಿ ನೆಮ್ಮದಿ ಲಭಿಸುವುದೆಂದ ——————————– ಅವ್ಯಕ್ತ