ದೇವರ ನಿಷ್ಠಾವಂತ ಸೇವಕ ದೈವ
ನಡೆದಾಡುವ ದೇವರ ಸೇವಕ ದೈವ
ದೈವದ ಕೋಪ ದೋಷ ನಿನ್ನಸಂಪಾದನೆ ……………………………………ಅವ್ಯಕ್ತ
ಮನ ಮನೆಯಲ್ಲಿದ್ದ ದೈವ ನಾನು
ಬೀಡು ಅರಮನೆಯಲ್ಲಿದ್ದ ದೈವ ನಾನು
ಹೊರದಬ್ಬಿ ಜೈಲಿನಲ್ಲಿಟ್ಟರೆ ನಿನ್ನ ಕಾಯುವುದೆಂತು
ಮನ ಮೈದಾನದ ದೈವಸ್ಥಾನ ದೈವಕ್ಕೆ
ಬೆಳ್ಳಿಬಂಗಾರ ವಜ್ರವೈಡೂರ್ಯ ದೈವಸ್ಥಾನ ಸಲ್ಲ
ದೈವದ ಬಯಕೆ ಭಕುತರ ಬಯಕಯಗಳೆಂದ ………………………………..ಅವ್ಯಕ್ತ
ಸನ್ಮಾರ್ಗಿಗಳನ್ನು ಮಾತ್ರ ರಕ್ಷಿಪ
ದುರ್ಮಾರ್ಗಿಗಳನ್ನು ಮಾತ್ರ ಶಿಕ್ಷಿಪ
ಅವ್ಯಕ್ತ ಶಕ್ತಿಯೇ ದೈವವೆಂದ ………………………………………………….ಅವ್ಯಕ್ತ
ದೈವದ ಮರ್ಮವ ಅರಿಯದೆ
ಪ್ರತಿಷ್ಠೆ ದೈವಾರಾಧನೆ ಮಾಳ್ಪಪೊಡೆ
ಮೂಢನಂಬಿಕಿಗೆ ಸಂಪತ್ತು ಪೋಲೆಂದ …………………………………………ಅವ್ಯಕ್ತ
ಮೂರು ದಶಕಗಳ ಉಪವಾಸದ ದೈವ
ತನ್ನ ಮುಂದಿನ ಯಜಮಾನನ ರಕ್ಷಿಸೆ
ಶ್ರದ್ದೆ ನಂಬಿಕೆ ಸನ್ಮಾರ್ಗ ಸಾಕೆಂದ ……………………………………………..ಅವ್ಯಕ್ತ
ಒಡೆದ ಮನೆ ಕುಟುಂಬ ಊರು ಮಿಲನಕ್ಕೆ
ದೈವದ ಉಗ್ರ ಸ್ವರೂಪ ಜಗದಿ ಪ್ರದರ್ಶನ
ಪೂರ್ವಜರು ದೈವಕ್ಕೆ ಕೊಟ್ಟೆ ಆದೇಶದ ಪಾಲನೆಯೆಂದ …………………………ಅವ್ಯಕ್ತ
ತ್ಯಾಗಿಗಳ ರಕ್ಷಿಪರು ಶ್ರಾವಕರು ಸಂಸಾರಿಗಳು
ಶ್ರಾವಕರ ಸಂಸಾರಿಗಳ ರಕ್ಷಿಪರು ದೈವಗಳು
ದೈವಗಳ ಸ್ಥಾನಮಾನ ತ್ಯಾಗಿಗಳಿಗೆ ಬೇಡವೆಂದ ………………………………..ಅವ್ಯಕ್ತ
ಸನ್ಮಾರ್ಗದಿ ನಡೆಯುವ ಮಾನವ ಬಂದುಗಳ
ದೈವ ದೇವರು ಕೈಹಿಡಿದು ಮುನ್ನಡೆಸುತಿಹರು
ದೈವ ದೇವರ ಕೋಪಕ್ಕೆ ತುತ್ತಾಗದಿರು …………………………………………..ಅವ್ಯಕ್ತ
ವೇದಿಕೆಗೆ ಸೀಮಿತವಾದ ಪಾಠ ಬೋಧನೆ ಭಾಷಣ
ಬದುಕಿಗೆ ಅಪಕ್ವವಾದ ಪಾಠ ಬೋಧನೆ ಭಾಷಣ
ದೈವ ದೇವರ ಪ್ರಜಾಪದ್ಧತಿ ಬದುಕಿನ ಸಮಾಧಿಯೆಂದ ……………………………ಅವ್ಯಕ್ತ