ದೊಂಪದ ಬಲಿ ಪ್ರತಿ ಊರಿನ ಜಾತ್ರೆ – ಗ್ರಾಮಕ್ಕೆ ಒಂದು , ಎರಡು ಯಾ ಮೂರು ದೊಂಪದಬಲಿ ಇರುವ ಗ್ರಾಮಗಳು ಇರುವ ಸಾಧ್ಯತೆ ಇದೆ. ಈ ಜಾತ್ರೆ ಕರಾವಳಿಯ ಸಂಪ್ರದಾಯ – ಚಾಚು ತಪ್ಪದೆ ಏನು ಮಾಡುತಿದ್ದರೋ ಅದನ್ನು ಮಾಡಿಕೊಂಡು ಹೋಗುತ್ತಾ ಇದ್ದೇವೆ. ಇದರ ಅಂದಿನ ಮೂಲ ಉದ್ದೇಶಕ್ಕೆ ಮತ್ತು ನಾವು ಇಂದು ಆಚರಣೆ ಮಾಡುವುದಕ್ಕೆ ಉತ್ತರ ದಕ್ಷಣದಷ್ಟು ವಿಮುಖವಾಗಿ ಸಾಗುತಿದೆ. ಸಕಲವೂ ಹೊಂದಾಣಿಕೆ ಮಾಡುತ ಮುಂದೆ ಮುಂದೆ ಸಾಗಿ ನಾಟಕವೆಂಬ ಹಣೆಪಟ್ಟಿ – ಮೂಢನಂಬಿಕೆ – ದುಂದುವೆಚ್ಚ – ವ್ಯಾಪಾರ ದರೋಡೆಗಳಿಗೆ ಮೂಲ , ಇತ್ಯಾದಿ ಕುಖ್ಯಾತಿ – ದೈವಾರಾಧನೆ ಪವಿತ್ರ ಕೆಲಸಕ್ಕೆ ಜ್ಞಾನದ ಬೆಳಕು ಹರಿಸಿ ಮೂಲ ದ್ಯೇಯೋದ್ದೇಶ ನಮ್ಮ ಪಾಲಿಗೆ ಸಿಕ್ಕಿ ನೆಮ್ಮದಿ ಬದುಕಿಗೆ ಪುಟ್ಟ ಪ್ರಯತ್ನ.
ಅಧ್ಯಕ್ಷನಿಲ್ಲದೆ ನಡೆಯುವ ಗ್ರಾಮಪಂಚಾಯತಿನಂತೆ ಇಂದು ಜಾತ್ರೆ ನಡೆಯುವುದನ್ನು ನಿಲ್ಲಿಸಿ ಭಾಮಾ ಯಾ ಗಡಿ ಆಗಿ ಮಾತ್ರ ಜಾತ್ರೆ ಮುಂದುವರಿಕೆ
ಪ್ರತಿ ಮನೆಯವನಿಗೂ ಪ್ರಶ್ನಿಸುವ ಹಕ್ಕು ಇದ್ದು -ಒಮ್ಮತ ಬರದಿದ್ದರೆ ದೈವಕ್ಕೆ ಮೊರೆ ಮೂಲಕ ಪರಿಹಾರ
ಪ್ರತಿ ದೈವಗಳ ಸ್ಥಾನ ಮಾನ ಸರಿ ಇದ್ದರೆ ಮಾತ್ರ ನೇಮ ನಡಾವಳಿ – ಸರಿ ಇಲ್ಲದಿದ್ದರೆ ಸರಿ ಮಾಡಿ ನೇಮ ನಡಾವಳಿ
ಪ್ರಕೃತಿಯಿಂದ ರಕ್ಷಣೆ ಮತ್ತು ಮಾನವರಿಂದ ಮಾನವರ ರಕ್ಷಣೆ ಉದ್ದೇಶ – ದೈವಕ್ಕೆ ಮೊರೆ ಅತ್ಯಗತ್ಯ
ಕನಿಷ್ಠ ಒಂದು ವಾರದ ಕಟ್ಟುನಿಟ್ಟಿನ ವ್ರತ ನಿಯಮ ಪಾಲನೆ ಊರು ಗುತ್ತು ಬಾರಿಕೆ ಯಜಮಾನನಿಂದ ಅನಿವಾರ್ಯ
ದೊಂಪದ ಬಲಿ ಊರಿನ ಮನೆ ಬಾಗಿಲಿನ ಬಹಿರಂಗ ನ್ಯಾಯಾಲಯ – ವೆಚ್ಚರಹಿತ ಅತಿಶೀಘ್ರ ನ್ಯಾಯದಾನ – ಅರಿವು ಮುಟ್ಟಿಸೋಣ
ನ್ಯಾಯಕ್ಕಾಗಿ ಊರಿನ ಬದಲು ಅನ್ಯ ದೊಂಪದ ಬಲಿ ಮೊರೆ – ನಾವು ನಮ್ಮ ಕ್ಷೇತ್ರಕ್ಕೆ ಮಾಡುವ ಅವಮಾನ
ದೊಂಪದ ಬಲಿ ದೈವಾರಾಧನೆ ಬಗ್ಗೆ ಅರಿವು ಮುಟ್ಟಿಸುವ ಮನೆ ಬಾಗಿಲಿನ ಪಾಠಶಾಲೆ
ದೈವಾರಾಧನೆ ಗುತ್ತು ಬಾರಿಕೆಯವರಿಗೆ ಸನ್ಮಾನ ಮಾಡುವ ವೇದಿಕೆಯಲ್ಲ – ಅಪರಾಧಿ ಯಾರೇ ಆಗಿದ್ದರು ಶಿಕ್ಷಿಸುವ ವೇದಿಕೆ – ಸನ್ಮಾರ್ಗಿಗಳಿಗೆ ಮಾತ್ರ ಈ ಊರು ಮೀಸಲು ಎಂದು ಸಾರುವ ಪವಿತ್ರ ಕ್ಷೇತ್ರ
ಯಜಮಾನ ಪರಿಚಾರಕರ ವ್ರತ ನಿಯಮ ಪ್ರತಿ ಮನೆಯವರಿಗೂ ಕಡ್ಡಾಯ
ತಪ್ಪು ಮಾಡಿದವ ತಪ್ಪು ಒಪ್ಪಿಕೊಂಡು ಸನ್ಮಾರ್ಗಿಯಾಗದಿದ್ದರೆ – ಯಜಮಾನ ದೈವಕ್ಕೆ ಮೊರೆ ಹೋಗದಿದ್ದರೆ – ಅವನಿಗೂ ಪಾಪದ ಪಾಲು ಕಟ್ಟಿಟ್ಟ ಬುತ್ತಿ
ಅರಸು , ಸೀಮೆ ಅರಸು , ಗುತ್ತು , ಸೀಮೆ ಗುತ್ತು , ಬಾರಿಕೆ – ನ್ಯಾಯಾಂಗ ವೇದಿಕೆಯ ಬೇರೆ ಬೇರೆ ಮೆಟ್ಟಿಲು – ಅರಿವಿರಲಿ
ಬಾಹ್ಯ ಆಡಂಬರದ ವೇದಿಕೆ ಇಂದು – ಆಂತರಿಕ ಮೌಲ್ಯಗಳ ಅಭಿವೃದ್ಧಿಯ ವೇದಿಕೆ ಅಂದು – ನಮಗೆ ಎಚ್ಚರಿಕೆ ಗಂಟೆ
ದೈವಾರಾಧನೆ ಬಗ್ಗೆ ಕೀಳರಿಮೆ – ನಮ್ಮ ಅಜ್ಞಾನದ ಸಂಕೇತ
ಮೂಲ ದೈವಾರಾಧನೆ ಬಗ್ಗೆ ಅರಿವು ಮುಟ್ಟಿಸಲು ಪ್ರತಿ ಊರಿನಲ್ಲಿ ದೈವಾರಾಧಕರ ಒಕ್ಕೂಟ ಅನಿವಾರ್ಯ
ಪ್ರಕೃತಿಯೊಂದಿಗೆ ಬದುಕುವುದೇ ದೈವಾರಾಧನೆ ಮತ್ತು ದೇವರಾದನೆ
ಈ ನಿಟ್ಟಿನಲ್ಲಿ ಸಮಗ್ರ ಚಿಂತನ ಮಂಥನ ಅನುಷ್ಠಾನ ಅನಿವಾರ್ಯ