Ichilampady Ullakulu Home House Campaign
ಇಚಿಲಂಪಾಡಿ ಉಳ್ಳಾಕುಲು ಮನೆ ಮನೆ ಅಭಿಯಾನ
ದೈವ ದೇವರ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಹುಟ್ಟಿಸುವ ಕಾರ್ಯಕ್ರಮ ಊರಿನಿಂದ ಹಿಡಿದು ಜಾಗತಿಕ ಮಟ್ಟದವರೆಗೆ ಅತಿ ಶೀಘ್ರದಲ್ಲಿ ಆಗಬೇಕಾದ ಅವಶ್ಯಕತೆಗೆ ಪೂರಕವಾಗಿ – ಇಚಿಲಂಪಾಡಿ ಉಳ್ಳಾಕುಲು ಮನೆ ಮನೆ ಅಭಿಯಾನ ೨೨.೧೧. ೨೦೨೦ ಆದಿತ್ಯವಾರದಂದು ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ ಇಚ್ಲಂಪಾಡಿ ಬೀಡಿನಿಂದ – ಕ್ಷೇತ್ರದ ದೈವ ದೇವರ ಭಕುತರಿಂದ ಶುಭಾರಂಭಗೊಳ್ಳಲಿದೆ. ದೈವ ಮತ್ತು ದೇವರ ಬಗ್ಗೆ ಮನೆ ಮನೆ ಅಭಿಯಾನ ನಮ್ಮ ಸೇವೆ- ಅದು ಒಂದು ಹೆಜ್ಜೆ ಮುಂದುವರಿದು ಮನ ಮನ ಅಭಿಯಾನಕ್ಕೆ ಚಾಲನೆ ಸಿಕ್ಕಿ – ನಿತ್ಯ ನಿರಂತರ ಬದುಕಿನುದ್ದಕ್ಕೂ ದೈವ ದೇವರ ಅರಿವು ನಮ್ಮಲ್ಲಿ ಜಾಗ್ರತವಾದಾಗ ಸನ್ಮಾರ್ಗದಲ್ಲಿ ಮುನ್ನಡೆಯಲು ದೇವರಿಂದ ಸಂಪೂರ್ಣ ಅನುಗ್ರಹ , ಸರ್ವ ರೀತಿಯ ಸಂಕಷ್ಟಗಳಿಂದ ನೆರಳಿನಂತೆ ನಮ್ಮ ರಕ್ಷಣೆಗೆ ದೈವ ಸಹಕಾರ ಸಿಕ್ಕಿ – ಕಲಿಯುಗದಲ್ಲಿ ಸ್ವರ್ಗ ನಮ್ಮದಾಗುತದೆ.
ಹಲಸಿನ ಮರದ ಎಲೆಯಷ್ಟು ಹೆಣಸುಡದ ಸ್ಥಳವನ್ನು ಅರಸುತ್ತಾ ಬಂದ ಉಲ್ಲಾಕುಲುಗೆ ಸಿಕ್ಕ ಏಕಮಾತ್ರ ಸ್ಥಳ ಇಚಿಲಂಪಾಡಿ – ಇಲ್ಲಿ ನೆಲೆಯಾಗಿ ನಿಂತು – ಉಳ್ಳಾಕುಲು ಮೂಲವೆಂಬ ಪ್ರಖ್ಯಾತಿ ಪಡೆದು – ಅನ್ಯ ಸ್ಥಳದಲ್ಲಿ ಅಂಗಳದಲ್ಲಿ ಕುಣಿಯುವ ಹಳ್ಳಾತಯ ದೈವ ಇಲ್ಲಿ ಅಂಗಾಯಿಯಲ್ಲಿ ಕುಣಿಯುತ್ತೆನೆಂಬ ಅಭಯ – ಮೂಲ ಸ್ಥಳವಾದ ಇಲ್ಲಿ ಜೀರ್ಣೋದ್ದಾರವಾಗಿ ಅಭಿವೃದ್ಧಿ ಹೊಂದುವುದು – ಉಳ್ಳಾಕುಲು ನೆಲೆ ನಿಂತ ಪ್ರತಿ ಕ್ಷೇತ್ರದ ಮನದಾಳದ ಇಂಗಿತ – ನಾವು ಒಂದಾಗಿ ನಿಂತು ತನು ಮನ ಧನ ಸಹಕಾರದೊಂದಿಗೆ – ಕೆಲವೇ ಸಮಯದಲ್ಲಿ ಜೀರ್ಣೋದಾರವಾಗಿ ಪ್ರತಿಷ್ಠೆ ಬ್ರಹ್ಮಕಲಸಕ್ಕೆ ದ್ರಡ ಸಂಕಲ್ಪ ಮಾಡೋಣ – ಅವ್ಯಕ್ತವಾಗಿ ಮನೆ ಮನೆ ಭೇಟಿ ಮನ ಮನ ಭೇಟಿ ಮಾಡುತಿರುವ ನನಗೆ ಕ್ಷಮೆಯಿರಲಿ – ಶಕ್ತಿಮೀರಿ ಮನೆ ಮನೆ ಭೇಟಿ ಸಂಕಲ್ಪ ನನ್ನದಾಗಿದೆ.
ನಮ್ಮ ಪೂರ್ವಜರು ನಮ್ಮ ಯೋಗ ಕ್ಷೇಮ ನೋಡುವ ಜವಾಬ್ದಾರಿ – ಮನೆ ದೈವ ಊರಿನ ದೈವ ಗುತಿನ ದೈವ ಅರಸು ದೈವಗಳಿಗೆ ಕೊಟ್ಟಿದ್ದು ಅವುಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ – ಮಾಡೋಣ
ಅರಸು ದೈವ ಅರಸು ವ್ಯಾಪ್ತಿಯ ಸರ್ವ ಶ್ರೇಷ್ಠ ನ್ಯಾಯಾಲಯ
ದೈವದ ಬಗ್ಗೆ ಸ್ಪಷ್ಟ ಅರಿವು ಅಂದರೆ – ಯಾರು ಎಲ್ಲಿ ಹೇಗೆ ತಪ್ಪು ಮಾಡಿದರೆ – ಶಿಕ್ಸಿಸಿ ಸನ್ಮಾರ್ಗಕ್ಕೆ ತಳ್ಳುವ ಅವ್ಯಕ್ತ ಶಕ್ತಿ
ದೈವದ ಕಣ್ಣಿನಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ
ದೇಶದ ಕಾನೂನನ್ನು ಮುರಿದು ಬದುಕಬಹುದು – ದೈವದ ಕಾನೂನು ನೂರಕ್ಕೆ ನೂರು ಪಾಲನೆ – ಜೀವಂತ ನಿದರ್ಶನಗಳಿವೆ
ಗಂಡ ಹೆಂಡತಿ ಮಕ್ಕಳು ತಾಯಿ ತಂದೆ ಯಾರೇ ಆಗಲಿ ದಾರಿ ತಪ್ಪಿದರೆ ದೈವಕ್ಕೆ ಮೊರೆ ಹೋಗಿ – ಎಲ್ಲವು ದೂರ ದೂರ
ದೈವಕ್ಕೆ ಪ್ರಥಮ ಆದ್ಯತೆ – ಶ್ರದ್ದೆ ಭಕ್ತಿ ನಂಬಿಕೆ – ಅನುಸರಿಸೋಣ
ಪ್ರಕೃತಿ ಆರಾಧನೆ ದೈವಾರಾಧನೆಯನ್ನು ಅವಲಂಬಿಸಿರುವುದನ್ನು ಸ್ಮರಿಸೋಣ
ಹುಟ್ಟು ಸಾವು ಬದುಕು ರೋಗ ರುಜಿನ – ಕಾಲಚಕ್ರಕ್ಕೆ ದೈವ ದೇವರ ಮೇಲೆ ಆರೋಪ ಪಟ್ಟಿ ಸಲ್ಲಿಸುವುದನ್ನು ನಿಲ್ಲಿಸೋಣ
ದೈವ ದೇವರಿಗೇ ಒಂದು ಕೈಯಿಂದ ಕೊಟ್ಟರೆ ಹತ್ತು ಕೈಯಿಗಳಿಂದ ನಮಗೆ ಕೊಡುತಾರೆ ಎಂಬ ಹಿರಿಯರ ಮಾತುಗಳು ನೆನಪಿರಲಿ
ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಅಂತಿಮಘಟ್ಟ – ನಾವೆಲ್ಲರೂ ಒಂದಾಗಿ ಅತಿ ಶೇಘ್ರದಲ್ಲಿ ಮುಗಿಸಿ ದೈವ ದೇವರ ಕೃಪೆಗೆ ಪಾತ್ರರಾಗೋಣ
ಸೂಚನೆ ; ರೂಪಾಯಿ ೫೦೦೦ ಮತ್ತು ಅದಕ್ಕಿಂತ ಮೇಲ್ಪಟ್ಟು ಧನಸಹಾಯ ನೀಡುವವರ ಒಂದು ಭಾವಚಿತ್ರವನ್ನು – ಅವ್ಯಕ್ತಬುಲ್ಲೆಟಿನ್ ವೆಬ್ನಲ್ಲಿ ಡೊನೊರ್ಸ್ ಬುಲೆಟಿನ್ ಇಚಿಲಂಪಾಡಿ ಉಳ್ಳಾಕುಲು – ನೀಡಿದ ಹಣದ ವಿವರಣೆಯೊಂದಿಗೆ ಪ್ರಕಟಿಸಲಾಗುವುದು