ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ನೇ ವರ್ಷದ ಸಾಮೂಹಿಕ 🪔 ಶ್ರೀ ವರಮಹಾಲಕ್ಷ್ಮಿ ಪೂಜೆ

Share this

 

ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿರುವ ಇಚಿಲಂಪಾಡಿ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಶ್ರಾವಣ ಶುಕ್ಲ ಪಕ್ಷ ಕರ್ಕಾಟಕ ಮಾಸ ೨೦ ಸಲುವ ತಾರೀಕು 05-08-2022 ನೇ ಶುಕ್ರವಾರ ಬೆಳಿಗ್ಗೆ ಗಂಟೆ 9.00 ರಿಂದ ಪ್ರಗತಿ ಬಂಧು ಸ್ವ-ಸಹಾಯ ಸಂಘ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಚಿಲಂಪಾಡಿ ಒಕ್ಕೂಟ ಹಾಗೂ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇವುಗಳ ಸಹಭಾಗಿತ್ವದಲ್ಲಿ ನಡೆಯಲಿರುವುದು.

ಕಾರ್ಯಕ್ರಮದ ವಿವರ

ಬೆಳಿಗ್ಗೆ ಗಂಟೆ 9-00 ಶ್ರೀ ವರಮಹಾಲಕ್ಷ್ಮಿ ಪೂಜೆ ಆರಂಭ
ಮಧ್ಯಾಹ್ನ ಗಂಟೆ 12-00 ಕ್ಕೆಮಹಾಪೂಜೆ ,ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ

ವಿಶೇಷ ಸೂಚನೆ

ಪೂಜೆ ಮಾಡಿಸುವವರು ರೂ 200.00ನ್ನು ಕೊಟ್ಟು ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ
ಭಕ್ತಾದಿಗಳು ಹೂ -ಹಿಂಗಾರ ,ತುಳಸಿ ಇತ್ಯಾದಿಗಳನ್ನು ತರಬೇಕಾಗಿ ವಿನಂತಿ
ವೃತಧಾರಿಗಳು ಸೀರೆಯನ್ನೇ ಧರಿಸಿ ಬರಬೇಕಾಗಿ ವಿನಂತಿ
ವೃತಧಾರಿಗಳು 1 ಲೋಟ 1 ಹರಿವಾಣ 1ಚಮಚ ತರಬೇಕಾಗಿ ವಿನಂತಿ

See also  ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ,ಇಚ್ಲಂಪಾಡಿ ಇದರ ವತಿಯಿಂದ 38 ನೇ ವರ್ಷದ 🪔 ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ

Leave a Reply

Your email address will not be published. Required fields are marked *

error: Content is protected !!! Kindly share this post Thank you