ಮನೆ ಡೈರೆಕ್ಟರಿ ಮತ್ತು ಬುಲೆಟಿನ್ – House directory and Bulletin

ಶೇರ್ ಮಾಡಿ

ಮನೆ ಕಟ್ಟುವವರಿಗೆ ಭಿನ್ನವಾದ , ಯಾರು ಕೂಡ ಇಲ್ಲಿಯವರೆಗೆ ಕಟ್ಟದ ಮನೆಯನ್ನು ಕಟ್ಟುವ ಇಂಗಿತ ಇರುತದೆ. ಆದರೆ ಒಬ್ಬ ವ್ಯಕ್ತಿಯಲ್ಲಿರುವ ಕಲೆ ಹಾಕಿದ ಎಲ್ಲ ಅನುಭವಗಳು ತನ್ನ ಸೀಮಿತ ವ್ಯಾಪ್ತಿಯ ಸಂಕೇತವಾಗಿ ಮನೆ ನಿರ್ಮಾಣವಾಗುತದೆ. ನಾವು ಇಂದು ಮನೋವೇಗದಲ್ಲಿ ಒನ್ಲೈನಿನಲ್ಲಿ ಮುನ್ನುಗ್ಗುತಿದ್ದರು , ಊರಿನಲ್ಲಿ ರಾಜ್ಯದಲ್ಲಿ ದೇಶದಲ್ಲಿ ಒಟ್ಟಾರೆ ಈ ಜಗದಿ ನಿರ್ಮಾಣವಾಗಿರುವ ಕನಿಷ್ಠ ಮನೆಗಳು ಮಾತ್ರ ನಮಗೆ ನೋಡುವ ಅವಕಾಶ ಇದ್ದು – ಇದಕ್ಕೆ ಬದಲಾಗಿ ಎಲ್ಲಾ ಮನೆಗಳು ಬೆರಳ ತುದಿಯಲ್ಲಿ ನೋಡುವ ಅವಕಾಶ ಸಿಗುತಿದ್ದರೆ ಜನಸಾಮಾನ್ಯರಿಗೆ ಎಷ್ಟೋ ಪ್ರಯೋಜನವಾಗುತಿತ್ತು.. ಇನ್ನು ಮತ್ತೊಂದು ದೃಷ್ಟಿಕೋನದಲ್ಲಿ ನೋಡುವುದಾದರೆ – ಮನೆ ಕಟ್ಟಿದ ಪ್ರತಿಯೊಬ್ಬನಿಗೂ ಗರಿಷ್ಠ ಜನರು ಬರಬೇಕು ಮತ್ತು ನೋಡಬೇಕೆಂಬ ಇಚ್ಛೆ ಇದ್ದೆ ಇರುತದೆ – ಆದರೆ ಅದನ್ನು ಈಡೇರಿಸುವುದು ಕಷ್ಟ ಸಾಧ್ಯ
ಪ್ರತಿಯೊಬ್ಬನಲ್ಲಿ ಮನೆಮಾಡಿರುವ ಎಲ್ಲಾ ದುಗುಡಗಳ ನಿವಾರಣೆಗಾಗಿ – ಮನೆ ಡೈರೆಕ್ಟರಿ ಮತ್ತು ಬುಲೆಟಿನ್ ಪರಿಹಾರದತ್ತ ದಾಪುಗಾಲು ಹಾಕುತಿದೆ. ಆದುದರಿಂದ ಮನೆ ಕಟ್ಟಿದವರು ಮುಂದಕ್ಕೆ ಮನೆ ಕಟ್ಟಿ ಗ್ರಹಪ್ರವೇಶ ಮಾಡುವವರು – ಕನಿಷ್ಠ ಬೆರಳೆಣಿಕೆ ಮನೆಯ ಭಾವಚಿತ್ರಗಳನ್ನು ಈ ವೇದಿಕೆಯಲ್ಲಿ ಹಾಕುವ ಸಂಕಲ್ಪ ಮಾಡಿದರೆ – ನಮ್ಮ ಮನೆಯನ್ನು ಜಗದ ಪ್ರತಿಯೊಬ್ಬನಿಗೆ ನೋಡುವ ಅವಕಾಶ ಸಿಕ್ಕಿ – ನಮ್ಮ ದುಗುಡ ದೂರವಾಗಿ ಇಚ್ಚಿಸಿದ ಬಯಕೆ ಈಡೇರಿ – ಸಂತಸದ ಬದುಕು ನಮ್ಮ ಪಾಲಿಗೆ ತನ್ನಿಂದ ತಾನೇ ಒದಗಿಬರಲಿದೆ.
ಈ ವೇದಿಕೆಯನ್ನು ಸದ್ಬಳಕೆ ಮಾಡುವತ್ತ ನಾವೆಲ್ಲ ಗಮನಹರಿಸೋಣ

See also  ಸ್ವಾವಲಂಬಿ ಮತ್ತು ಸಂತುಷ್ಟ ದೇವಾಲಯ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?