ನಿರಂತರ ನಂದಾದೀಪ ಸೇವೆ

ಶೇರ್ ಮಾಡಿ

ಪ್ರಸ್ತುತ ಬಸದಿಗಳು , ದೇವಾಲಯಗಳು – ತಮ್ಮ ದಿನ ನಿತ್ಯ ನಿರ್ವಹಣೆಗೆ ಆರ್ಥಿಕ ಮುಗ್ಗಟ್ಟು ಎದುರಿಸುತಿದ್ದು – ಶಾಶ್ವತ ಪರಿಹಾರ ಚಿಂತನೆಯ ಫಲಶ್ರುತಿ – ನಿರಂತರ ನಂದಾದೀಪ ಸೇವೆಯನ್ನು – ಬಸದಿ ಮತ್ತು ದೇವಾಲಯಗಲ್ಲಿ ಅನುಷ್ಠಾನಕ್ಕೆ ತಂದಾಗ – ಕಾಲಕ್ರಮೇಣ ಆರ್ಥಿಕ ಸಂಕಷ್ಟ ದೂರವಾಗುವುದರ ಜೊತೆಗೆ – ಭಕ್ತರ ಮತ್ತು ದೇವಾಲಯಗಳ ಸಂಬಂಧ ಗಟ್ಟಿಯಾಗಿ – ದೇವರ ಅಭಯ ಆಶೀರ್ವಾದ ನಿರಂತರ ನಮ್ಮ ಪಾಲಿಗೆ ದೊರೆತು ಬದುಕು ಪಾವನವಾಗಲಿದೆ ಎಂಬುದು ಜನಾಭಿಪ್ರಾಯದ ಚಿಂತನ ಮಂಥನ ಅನುಷ್ಠಾನದ ವೇದಿಕೆ ನಮ್ಮ ಮುಂದೆ ಇದೆ . ನಾವು ಇಲ್ಲಿ ನಂದಾದೀಪ ಸೇವೆಗೆ ಬಸದಿ ಹಾಗು ದೇವಾಲಯಗಳ ಹೆಸರುಗಳನ್ನೂ ಪ್ರಕಟಿಸಲಿದ್ದೇವೆ. ನಿಮ್ಮ ಒಂದು ಪುಟವನ್ನು ತೆರೆಯಲಿದ್ದು – ಅದರಲ್ಲಿ ದಾನಿಗಳ ಹೆಸರನ್ನು ಪ್ರಕಟಿಸುವುದರಿಂದ – ಈ ಪುಣ್ಯ ಕೆಲಸ ಪ್ರಪಂಚದ ಮೂಲೆ ಮೂಲೆಗೂ ತಲುಪಲಿದೆ. ದಯಮಾಡಿ ಸಹಕರಿಸಲು ಕೋರುತ್ತಿದ್ದೇವೆ.

ದೇವಾಲಯ ಮತ್ತು ಬಸದಿಗಳಲ್ಲಿ ನಂದಾದೀಪ ಸೇವೆ ಯಾಕೆ ಬೇಕು
ನಂದಾದೀಪ ಸೇವೆ ವಾರಕ್ಕೊಂದು , ತಿಂಗಳಿಗೊಂದು, ವರುಷಕ್ಕೊಂದು, ಹುಟ್ಟಿದ ತಾರೀಕು, ಮದುವೆ ದಿನ , ಪಟ್ಟಾಭಿಷೇಕ ದಿನ ಮತ್ತು ವಿಶೇಷ ಹಬ್ಬದ ದಿನಗಳಲ್ಲಿ ಭಕ್ತರು ಪೂಜಾ ವಿಭಾಗದಲ್ಲಿ ಅತ್ಯುತ್ತಮ ಈ ಸೇವೆಯನ್ನು ಮಾಡುವುದು ಒಳಿತು.
ನಿರಂತರ ನಂದಾದೀಪ ಸೇವೆ ನೂತನ ಪೂಜಾ ವಲಯದ ಆವಿಸ್ಕಾರ – ಭಕ್ತರೆಲ್ಲರೂ ಭಾಗವಹಿಸುವ ಏಕಮಾತ್ರ ಪೂಜೆ
ನಮ್ಮ ಧಾರ್ಮಿಕ ಆರ್ಥಿಕ ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿ ಬೆಂಗಾವಲಾಗಿ ಸಹಕರಿಸಲಿದೆ
ಒಂದು ದೇವಾಲಯ ಮತ್ತು ಬಸದಿಗಳಲ್ಲಿ ಮಾಡುವ ಸರ್ವಸೇವೆಯಿಂದ ಎಸ್ಟೊಪಾಲು ನಂದಾದೀಪ ಸೇವೆ ಶ್ರೇಷ್ಠವೆಂದು ಬಲ್ಲವರು ಹೇಳುತ್ತಾರೆ.
ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ನಂದಾದೀಪ ಸೇವೆ ಮಾಡಲು ಸಾಧ್ಯತೆ
ಭಕ್ತರಿಗೂ, ಬಸದಿಗೂ ಅರ್ಚಕರಿಗೂ, ಅಪರಿಮಿತ ಪ್ರಯೋಜನವಾಗಲಿದೆ.
ನಂದಾದೀಪ ಸೇವೆ ಪೂಜಾ ಪದ್ದತಿಯ ಮೂಲ ಎಂಬುದು ಬಲ್ಲವರ ಅನುಭವದ ಮಾತು
ಈ ಪೂಜೆಯಲ್ಲಿ ಬಡವ ಶ್ರೀಮಂತ ಎಂಬ ಭೇದವಿಲ್ಲ
ಜಾತಿಯ ಒಳಗೆ ಮೇಲು ಕೀಳು ಭಿನ್ನತೆಗೆ ಅವಕಾಶವಿಲ್ಲ
ಕನಿಷ್ಠ ಒಂದು ಪೂಜೆಯಿಂದ ನಿರಂತರ ಪೂಜೆಯ ಫಲ ಲಭ್ಯತೆ
ನಂದಾದೀಪ ಸೇವೆ -ಸುಖ ಶಾಂತಿ ನೆಮ್ಮದಿಗಾಗಿ – ಬದುಕಿಗೆ ವಿಮೆ
ಆಂತರಿಕ ಆಡಂಬರದ ಜೀವನಕ್ಕೆ ನಾಂದಿ – ಬಾಹ್ಯ ಆಡಂಬರ ಜೀವನಕ್ಕೆ ಇತಿಶ್ರೀ
ಏಕಮಾತ್ರ ಸಾಮೂಹಿಕ ಪೂಜೆ -ಇದು ದೇವರ ಅಂಬೋಣ
ಕನಿಷ್ಠ ಅರ್ಚಕರಿಂದ ದೇವಾಲಯ ಬಸದಿಗಳಲ್ಲಿ ಈ ಸೇವೆ ಸಾಧ್ಯತೆ
ಪ್ರಯಾಣದ ವೆಚ್ಚ ಸಮಯದ ಪೋಲು, ನಗಣ್ಯವಾಗಿ ನಮ್ಮೆಲ್ಲರ ಪ್ರಯಾಣ ಸುಖಮಯವಾಗಲಿದೆ
ನಂದಾದೀಪ ಅಥವಾ ಏಕಾದೀಪ ಸೇವೆ ವಿಶೇಷ ಮಹತ್ವ ಹೊಂದಿದೆ.
ನಂದಾದೀಪ ಸೇವೆಯನ್ನು ಎತ್ತಿಹಿಡಿದ ಇಂಗ್ಲೆಂಡ್ ಮೂಲದ ಟ್ರಾನ್ಸಿಡೆಂಟಲ್ ಮೆಡಿಸಿನ್
ನಂದಾದೀಪವನ್ನು ಬೆಳಗಿಸುವುದು ಅಜ್ಞಾನವನ್ನು ದೂರ ಮಾಡುವ ಮತ್ತು ಜ್ಞಾನಪ್ರಕಾಶವನ್ನು ತಂದುಕೊಡುವ ಸಂಕೇತವಾಗಿದೆ. ಇದು ದೇವರ ಕೃಪೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ನಂದಾದೀಪ ಸೇವೆಯು ಹಲವು ಧಾರ್ಮಿಕ ಆಚರಣೆಗಳಲ್ಲಿ, ಹಬ್ಬಗಳಲ್ಲಿ, ಪೂಜಾ ವಿಧಿಗಳಲ್ಲಿ ಮತ್ತು ವಿಶೇಷ ದಿನಗಳಲ್ಲಿ ಅತಿಹೆಚ್ಚು ಮಹತ್ವ ಹೊಂದಿದೆ.
ನಂದಾದೀಪ ಬೆಳಗಿಸುವ ಮೂಲಕ ಮನಸ್ಸಿನಲ್ಲಿ ಶಾಂತಿ, ಸಮಾಧಾನ ಮತ್ತು ಆಧ್ಯಾತ್ಮಿಕ ಶಕ್ತಿ ಉಂಟಾಗುತ್ತದೆ.
ನಂದಾದೀಪ ಸೇವೆಯು ದೇವರ ಸಾನಿಧ್ಯವನ್ನು ಹೆಚ್ಚಿಸುತ್ತದೆ ಮತ್ತು ಪೂಜೆಯ ಸ್ಥಳವನ್ನು ಪವಿತ್ರವಾಗಿ ಮಾಡುತ್ತದೆ
ದೀಪದ ಬೆಳಕು ಅಜ್ಞಾನವನ್ನು ದೂರವಿಟ್ಟು ಜ್ಞಾನ ಮತ್ತು ಜಾಗೃತಿಯನ್ನು ತರುವಂತೆ ಬಿಂಬಿಸುತ್ತದೆ.
ನಂದಾದೀಪವನ್ನು ಸಮೂಹವಾಗಿ ಬೆಳಗಿಸುವುದು ಅಥವಾ ಹಬ್ಬಗಳಲ್ಲಿ ಈ ಸೇವೆಯನ್ನು ಮಾಡುವುದು ಸಮಾಜದ ಒಗ್ಗಟ್ಟಿನ ಮತ್ತು ಸಮಾನತೆಯ ಸಂಕೇತವಾಗಿದೆ.
ಕೆಲ ಕುಟುಂಬಗಳಲ್ಲಿ, ನಂದಾದೀಪವನ್ನು ಬೆಳಗಿಸುವುದು ಪಿತೃಗಳ ಪರಂಪರೆ ಮತ್ತು ಸಂಪ್ರದಾಯಗಳನ್ನು ಪಾಲಿಸುವ ಉದ್ದೇಶದಿಂದ ಮಾಡಲಾಗುತ್ತದೆ.
ಇದು ಮನೆಯ ಹಾಗೂ ಕುಟುಂಬದ ಆರೋಗ್ಯ, ಸಮೃದ್ಧಿ, ಸೌಹಾರ್ದತೆ ಮತ್ತು ಶ್ರೇಯಸ್ಸಿಗೆ ಕಾರಣವೆಂದು ಭಾವಿಸಲಾಗುತ್ತದೆ.
ಈ ಕಾರಣಗಳಿಂದ, ನಂದಾದೀಪ ಸೇವೆ ನಮ್ಮ ಸಂಸ್ಕೃತಿಯಲ್ಲಿ ಮತ್ತು ಧಾರ್ಮಿಕ ಜೀವನದಲ್ಲಿ ಮಹತ್ವದ ಸ್ತಾನವನ್ನು ಹೊಂದಿದೆ.

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?