ಜೈನರ ಅಭಿಯಾನ -ಕಣಿಯೂರು ಬಸದಿ

Share this

ಉದ್ದೇಶಗಳು
೧. ಕನಿಷ್ಠ ವಾರಕ್ಕೆ ಒಮ್ಮೆ ಬಸದಿಯಲ್ಲಿ ಪಂಚನಮಸ್ಕಾರ ಮಂತ್ರ ೧೦೮ ಸಲ ಪಠಣ ಮತ್ತು ಬಸದಿ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುವುದು
೨. ಪ್ರತಿ ಜೈನರ ಭಾವಚಿತ್ರ ಸಹಿತ ಯಾ ರಹಿತ – ಅವರ ಪರಿಚಯ/ ಜೀವನ ಚರಿತ್ರೆ ೫೦ ಪದಗಳ ಮಿತಿಯೊಂದಿಗೆ ಉಚಿತ ಪ್ರಕಟಣೆ
೩. ವಿಭಿನ್ನ ಅಭಿಯಾನಗಳಲ್ಲಿ ಗರಿಷ್ಠ ಜೈನರಿಗೆ ಮನೆಯಿಂದಲೇ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವುದು
೪. ಮೊಬೈಲ್ ಸದ್ಬಳಕೆಗೆ ವಿಪುಲ ಅವಕಾಶಗಳನ್ನು ಒದಗಿಸುವುದು
೫. ನಮ್ಮನ್ನು ಅಗಲಿದ ನಮ್ಮವರನ್ನು ಅಮರರನ್ನಾಗಿಸುವ ಅತಿ ಉತ್ತಮ ವೇದಿಕೆ ಇಲ್ಲಿ ಲಭ್ಯವಾಗಲಿದೆ
೬. ನಾವು ಮಾಡುವ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯತೆ
೭. ಪರಿಚಯ / ಜೀವನ ಚರಿತ್ರೆ ೫೦ ಪದಗಳಿಗಿಂತ ಹೆಚ್ಚು ಬರೆಯಲು ಇಚ್ಚಿಸುವವರು ನಿಗದಿತ ಕನಿಷ್ಠ ಶುಲ್ಕ ಪಾವತಿಸಬೇಕು
೮. ಪ್ರತಿ ಊರಿನ ಜೈನರ ಅಭಿಯಾನ ಪ್ರಾರಂಭಿಸಲು ಅವಕಾಶವಿದೆ
೯. ಅನ್ಯರ ಬಗ್ಗೆ ನಿರಂತರ ಮಾತನಾಡುವ ನಾವು ಅನ್ಯರಿಗೆ ಸ್ಥಾನ ಮಾನ ಘನತೆ ಗೌರವ ಸಿಗುವಂತೆ ಮಾಡೋಣ

ಅಭಿಯಾನ – ನಮ್ಮೆಲ್ಲರ ಕಾರ್ಯಕ್ರಮ – ನಮ್ಮ ಅಭಿವುದ್ಧಿ ನಮ್ಮಿಂದ ಮಾತ್ರ ಸಾಧ್ಯ – ಅರಿತು ಬಾಳೋಣ

ಅನುಷ್ಠಾನ
೧. ಪ್ರತಿ ಬಸದಿ ಹೆಸರಿನ್ಲಲಿ ಯಾ ಸ್ಥಳದಲ್ಲಿ ಹೆಸರಿನಲ್ಲಿ ಜೈನರ ಅಭಿಯಾನದ ರಚನೆ
೨. ಒಬ್ಬರು ಗೌರವ ಅಧ್ಯಕ್ಷರು , ಅಧ್ಯಕ್ಷರು , ಉಪಾಧ್ಯಕ್ಷರು , ಕಾರ್ಯದರ್ಶಿ , ಉಪಕಾರ್ಯದರ್ಶಿ , ಖಜಾಂಜಿ , ಸಂಚಾಲಕರು , ಇಬ್ಬರು ವರದಿಗಾರರು – ಇದ್ದರೆ ಅನುಷ್ಠಾನ ಸುಲಲಿತ
೩. ಕನಿಷ್ಠ ೫ ಜನರಿಗೆ ಆನ್ಲೈನ್ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದು
೪. ವ್ಯಾಪ್ತಿಯಲ್ಲಿ ಅಗಲಿದವರ ಭಾವಚಿತ್ರ ಸಹಿತ ಇಲ್ಲದಿದ್ದರೆ ರಹಿತ ೫೦ ಪದಗಳಿಗೆ ಸೀಮಿತವಾಗಿ ಆನ್ಲೈನ್ ಪ್ರಕಟಣೆಗೆ ಪ್ರಥಮ ಆದ್ಯತೆ
೫. ವ್ಯಾಪ್ತಿಯ ಡೈರೆಕ್ಟರಿ ಶೀಘ್ರ ಪ್ರಕಟಣೆ
೬. ಪ್ರತಿ ಈಗ ಇರುವ ವ್ಯಕ್ತಿಯ ಪರಿಚಯ ಜೀವನ ಚರಿತ್ರೆ ಭಾವಚಿತ್ರ ಸಹಿತ ಯಾ ರಹಿತ ಪ್ರಕಟಣೆ – ಮೊಬೈಲ್ ಸಂಖೆ ಅಪೇಕ್ಷಿಸಿದವರಿಗೆ ಮಾತ್ರ ಪ್ರಕಟಣೆ
೭.ವಿಶೇಷ ಶುಲ್ಕ ಪಾವತಿಸಿದವರಿಗೆ ಸಲಹೆಗಾರರು ಮತ್ತು ಗೌರವ ಸಲಹೆಗಾರರ ಹೆಸರು ಪ್ರಕಟಿಸಲಾಗುವುದು
೮. ಸಮಗ್ರ ಅತಿ ಶೀಘ್ರ ಜೈನರ  ಅಭಿವೃದ್ಧಿ ದೃಷ್ಟಿಕೋನದ ಸಲಹೆಗೆ ಮುಕ್ತ ಅವಕಾಶವಿದೆ.
೯. ಮನದ ಮಾತು ಪ್ರಕಟಣೆಗೆ ಕನಿಷ್ಠ ಶುಲ್ಕದಲ್ಲಿ ಅವಕಾಶ 

Leave a Reply

Your email address will not be published. Required fields are marked *

error: Content is protected !!! Kindly share this post Thank you