
ಹುಟ್ಟುಹಬ್ಬದ ಅಭಿಯಾನ – ವೈಯಕ್ತಿಕ ಸಂಭ್ರಮದಿಂದ ಜಾಗತಿಕ ಸೇವೆಯವರೆಗೆ!
ಹುಟ್ಟುಹಬ್ಬವೆಂದರೆ ಕೇವಲ ಕೇಕ್ ಕತ್ತರಿಸಿ, ಉಡುಗೊರೆ ವಿನಿಮಯ ಮಾಡಿಕೊಂಡು ಸಂಭ್ರಮಿಸುವ ದಿನವಲ್ಲ; ಅದು ವ್ಯಕ್ತಿಯ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸುವ, ಪ್ರತಿಭೆಯನ್ನು ಪ್ರೋತ್ಸಾಹಿಸುವ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಸುವರ್ಣಾವಕಾಶವಾಗಬೇಕು.
ಹುಟ್ಟುಹಬ್ಬದ ಅಭಿಯಾನದ ಮುಖ್ಯ ಉದ್ದೇಶಗಳು:
ಪ್ರತಿಯೊಬ್ಬ ವ್ಯಕ್ತಿಯ ಹುಟ್ಟುಹಬ್ಬವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿ, ಅವರ ಸಾಧನೆ, ವ್ಯಕ್ತಿತ್ವ, ಆಸಕ್ತಿ ಮತ್ತು ಸೇವೆಯನ್ನು ವಿಶ್ವಕ್ಕೆ ತಿಳಿಸುವುದು.
ಪ್ರತಿಯೊಬ್ಬರಿಗೂ ತಮ್ಮ ಜೀವನದ ಅನುಭವ, ಪ್ರತಿಭೆ ಮತ್ತು ಸಾಧನೆಗಳನ್ನು ಪರಿಚಯಿಸಿಕೊಳ್ಳಲು ವೇದಿಕೆ ಕಲ್ಪಿಸುವುದು.
ಸಕಲ ಸ್ವಉದ್ಯೋಗಿಗಳು, ಉದ್ಯಮಿಗಳು, ಕಲಾವಿದರು ಮತ್ತು ಸೇವಾದಾರರಿಗೆ ವ್ಯಾಪಾರ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
ಡಿಜಿಟಲ್ ತಂತ್ರಜ್ಞಾನ ಬಳಸಿ ಅತ್ಯಾಧುನಿಕ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸುವುದು.
ಉಡುಗೊರೆಗಳ ಬದಲಿಗೆ ಜ್ಞಾನ, ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಮಾನವಸೇವೆಗೆ ಗರಿಷ್ಠ ಅವಕಾಶ ನೀಡುವುದು.
ದುಂದುವೆಚ್ಚ, ಆಹಾರ ವ್ಯರ್ಥ ಮತ್ತು ಅನಗತ್ಯ ಆಡಂಬರಗಳಿಗೆ ಕಡಿವಾಣ ಹಾಕುವುದು.
ಹಿರಿಯ ನಾಗರಿಕರ ಅನುಭವವನ್ನು ಅಳವಡಿಸಿಕೊಂಡು, ಉತ್ತಮ ಸಂಪ್ರದಾಯಗಳನ್ನು ಉಳಿಸಿ, ಕುರುಡು ಅನುಕರಣೆಯನ್ನು ತ್ಯಜಿಸುವುದು.
ಪ್ರತಿಯೊಂದು ಹುಟ್ಟುಹಬ್ಬವನ್ನು ದೀಪಾವಳಿಯಂತೆ ಜ್ಞಾನ, ಪ್ರೀತಿ, ಸೇವೆ ಮತ್ತು ಸಂತೋಷದ ಬೆಳಕಿನಿಂದ ಆಚರಿಸುವುದು.
ನಮ್ಮ ಸಂಕಲ್ಪ: ಪ್ರತಿಯೊಂದು ಜನ್ಮದಿನವೂ ಒಬ್ಬ ವ್ಯಕ್ತಿಯ ಬದುಕನ್ನು ಬೆಳಗಿಸುವುದರ ಜೊತೆಗೆ, ಹತ್ತು ಜನರ ಬದುಕಿಗೆ ಅವಕಾಶ, ನೂರು ಜನರಿಗೆ ಪ್ರೇರಣೆ, ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುವಂತಾಗಲಿ.
ಹುಟ್ಟುಹಬ್ಬ ಒಂದು ದಿನದ ಸಂಭ್ರಮವಲ್ಲ; ಅದು ಜೀವನಪೂರ್ತಿ ಮಾನವೀಯತೆ ಬೆಳಗಿಸುವ ಅಭಿಯಾನವಾಗಲಿ!