Avyaktha vachanagalu

Share this

ಬಸ್ ನಿಲ್ದಾಣಗಳ ಅಂದಿನ ಸೌಚಾಲಯ
ಮಿನಿ ವಿಧಾನಸೌಧಗಳ ಇಂದಿನ ಸೌಚಾಲಯ
ಸ್ವಚ್ಛ ಭಾರತಕ್ಕೆ ಕೊಡಲಿ ಏಟೆಂದ ……………………………………………………….ಅವ್ಯಕ್ತ

ಜನಾಭಿಪ್ರಾಯ ಪ್ರಜಾಪ್ರಭುತ್ವ ಆಡಳಿತ
ಪ್ರಜ್ಞಾಹೀನರು ಅಭಿಪ್ರಾಯ ಮಂಡಿಸೆ
ದೇಶದ ಆಡಳಿತ ಅದೋಗತಿಯೆಂದ …………………………………………………….ಅವ್ಯಕ್ತ

ಆಡಳಿತ ಯಂತ್ರದ ತಯಾರಕರು ಜನಪ್ರತಿನಿದಿಗಳು
ಐಎಎಸ್ ಐಪಿಎಸ್ ಅಧಿಕಾರಿಗಳು ಚಾಲಕರು
ಆಡಳಿತ ಯಂತ್ರ ನಿಂತ ನೀರಾಗಿಹುದು ………………………………………………….ಅವ್ಯಕ್ತ

ದೈವ ದೇವರ ಮೂಲ
ಮಾನವ ಕುಲದ ಮೂಲ
ಒಂದೆ ಆಗಿಹುದು ನೋಡ ……………………………..ಅವ್ಯಕ್ತ

ನೂತನ ಆವಿಸ್ಕಾರ ಕಾಣದ ಬದುಕು
ಕಟ್ಟು ಕಟ್ಟಳೆಗೆ ಕಟ್ಟಿದ ಬದುಕು
ನಿಂತ ನೀರಾಗಿ ನಾರುತಿಹುದು ನೋಡ ………………..ಅವ್ಯಕ್ತ

ಖಾಲಿ ಆಗಿರುವ ಬದುಕಿನ ಪುಟಗಳು
ಯೋಜನೆ ಇಲ್ಲದ ಸಂಘ ಸಂಸ್ಥೆಗಳು
ಜನರಿಗೆ ಭೂಮಿಗೆ ತುಂಬಲಾರದ ಹೊರೆ …………………ಅವ್ಯಕ್ತ

ದೇವರಾಗಿ ಮಾನವರ ಜನನ
ಮಾನವರಾಗಿ ದಾನವರಾಗಿ ಬದುಕು
ದೇವರಾಗಿ ಬದುಕಲು ಅಸಾಧ್ಯವೇ ………………………… ಅವ್ಯಕ್ತ


ಫಿಟ್ಟರ್ ರಿಪೇರಿ ಮಾಡಿದರೆ ಯಂತ್ರ
ಬಳಕೆದಾರ ರಿಪೇರಿ ಮಾಡಿದರೆ ಗುಜಿರಿ
ಫಿಟ್ಟರ್ ಬಳಕೆದಾರ ಆಯ್ಕೆ ನಿನ್ನದಯ್ಯಾ ……………………..ಅವ್ಯಕ್ತ

See also  Avyaktha Vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you