ಭಕ್ತರ ಮನೆ ಮನೆಗೆ ಅಭಿಯಾನ – ಪ್ರತಿ ಮಂಗಳವಾರ ಬೆಳಿಗ್ಗೆ ೧೦. ೩೦ ರಿಂದ ೧೨ ಗಂಟೆಯವರೆಗೆ
ಭಕ್ತರ ಮನೆ ಮನೆಗೆ ಅಭಿಯಾನ – ಪ್ರಯೋಜನಗಳು
ಭಕ್ತರ ಮನೆ ಮನೆಗೆ ಅಭಿಯಾನವು ಭಕ್ತರನ್ನು ಧರ್ಮ, ಜ್ಞಾನ, ಪ್ರೀತಿ ಮತ್ತು ಸೇವೆಯ ಮೂಲಕ ದೇವರೊಂದಿಗೆ ಹಾಗೂ ಸಮಾಜದೊಂದಿಗೆ ಬೆಸೆಯುವ ಮಹತ್ವದ ಪ್ರಯತ್ನವಾಗಿದೆ. ಇದರಿಂದ ಪ್ರತಿಯೊಂದು ಕುಟುಂಬದಲ್ಲೂ ಧಾರ್ಮಿಕ ಜಾಗೃತಿ, ಮಾನವೀಯ ಮೌಲ್ಯಗಳು ಮತ್ತು ಉತ್ತಮ ಸಂಸ್ಕಾರಗಳು ಬೆಳೆಯುತ್ತವೆ. ಭಕ್ತರಿಗೆ ದೇವಾಲಯಕ್ಕೆ ನಿಯಮಿತವಾಗಿ ಭೇಟಿ ನೀಡುವ ಅಭ್ಯಾಸ ಬೆಳೆದು, ಮನಸ್ಸಿನ ಶಾಂತಿ ಮತ್ತು ಜೀವನದಲ್ಲಿ ಸಾರ್ಥಕತೆ ದೊರೆಯುತ್ತದೆ. ಕುಟುಂಬಗಳ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಹಿರಿಯರು, ರೋಗಿಗಳು, ನಿರ್ಗತಿಕರು ಮತ್ತು ಒಂಟಿತನ ಅನುಭವಿಸುವವರಿಗೆ ಪ್ರೀತಿ ಹಾಗೂ ಸಹಕಾರ ದೊರೆಯುತ್ತದೆ. ಪ್ರಕೃತಿ ಸಂರಕ್ಷಣೆ, ಆರೋಗ್ಯ ಜಾಗೃತಿ, ಕುಟುಂಬದ ಒಗ್ಗಟ್ಟು ಮತ್ತು ಸಮಾಜಸೇವೆಗೆ ಪ್ರೋತ್ಸಾಹ ಸಿಗುತ್ತದೆ. ಭಕ್ತರು ದೇವರ ಬಳಿಗೆ ಹೋಗುವುದರ ಜೊತೆಗೆ, ದೇವರ ಮೌಲ್ಯಗಳನ್ನು ಹೊತ್ತು ಪ್ರತಿಯೊಂದು ಮನೆಗೂ ತಲುಪುವುದೇ ಈ ಅಭಿಯಾನದ ಮುಖ್ಯ ಉದ್ದೇಶ.
ನಮ್ಮ ಕ್ಷೇತ್ರ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ – ೧೦೮ ಸಲ ಕ್ಷೇತ್ರ ಮಂತ್ರ – ಶ್ರೀ ದುರ್ಗಾಪರಮೇಶ್ವರಿ ಇಚಿಲಂಪಾಡಿ ಬೀಡು ಕ್ಷೇತ್ರಯ ನಮಃ ಮಂತ್ರ ಪಠಿಸಿ – ಕ್ಷೇತ್ರದ ದೈವಗಳಿಗೆ ಕೈಮುಗಿದು-ಬೀಡಿನಲ್ಲಿ ದೇವರಿಗೆ ಮತ್ತು ಬೀಡಿನ ಕಲ್ಲುರ್ಟಿ ದೈವಕ್ಕೆ ನಮಸ್ಕರಿಸಿ – ಬೆಳಿಗ್ಗೆ ೧೦.೩೦ ಕ್ಕೆ ಭಕ್ತರ ಮನೆ ಮನೆಗೆ ಅಭಿಯಾನ ಪ್ರಾರಂಭ
ಅಭಿಯಾನದ ಪವಿತ್ರತೆಗಾಗಿ ಕೆಲವು ನಿಯಮಾವಳಿಗಳು
ಪ್ರತಿ ಮನೆಯಲ್ಲಿ ಕ್ಷೇತ್ರ ಮಂತ್ರ ಪಠಣ – ೧೦೮ ಸಲ
ಯಾವುದೇ ಅತಿಥಿ ಸ್ವೀಕಾರಕ್ಕೆ ಅವಕಾಶವಿಲ್ಲ
ಮುಂಚಿತವಾಗಿ ತಿಳಿಸುವ ವ್ಯವಸ್ಥೆ ಮಾಡಲಾಗುವುದು
ನಮಗೆ ನಿಮ್ಮ ಮನೆಗೆ ಬರಲು ಅವಕಾಶ ಕೊಡುವುದು ಯಾ ಬಿಡುವುದು ನಿಮ್ಮ ನಿರ್ಧಾರ – ಸಮಾನ ಚಿತ್ತದಿಂದ ಸ್ವೀಕರಿಸಲಾಗುವುದು
ಪ್ರತಿ ಮನೆಯಲ್ಲಿ ಕುಟುಂಬ ಅಭಿಯಾನಕ್ಕೆ ಚಾಲನೆ ಕೊಡಲಾಗುವುದು
ಸೇವೆಯಿಂದ ಉದ್ಯೋಗ ಉದ್ಯಮ – ಅನುಷ್ಠಾನದತ್ತ ದಿಟ್ಟ ಹೆಜ್ಜೆ
ದೇವಾಲಯದಲ್ಲಿ ದಿನಾಲೂ ಪ್ರಾರ್ಥಿಸುವವರಿಗೆ ಸಿಂಹ ಪಾಲು, ವಾರಕ್ಕೊಮ್ಮೆ ಪ್ರಾರ್ಥಿಸುವವರಿಗೆ ಎರಡನೇ ಪಾಲು ,ಬಾಕಿ ಉಳಿದ ಪಾಲು ಇಷ್ಟ ಬಂದಾಗ ಮಾತ್ರ ಹೋಗುವ ನಮಗೆ ಸಿಗುವುದು ಬರಿ ಅಲ್ಪ ಮಾತ್ರ ಮನಗಂಡು – ದಿನಾಲೂ ಸಾಧ್ಯವಾಗದಿದ್ದರೂ – ವಾರಕ್ಕೊಮ್ಮೆ ಅನಿವಾರ್ಯ
ಪ್ರತಿ ಮನೆಯ ಪ್ರತಿಯೊಬ್ಬ ಭಕ್ತರು ಪ್ರತಿ ಮಂಗಳವಾರ ಮದ್ಯಾಹ್ನ ೧೨ ರಿಂದ ೧೨.೩೦ ರ ಒಳಗೆ ದೇವಾಲಯಕ್ಕೆ ಭೇಟಿ ಮಾಡಿ ಪ್ರಾರ್ಥಿಸೋಣ – ಅಭಿಯಾನದ ಕೋರಿಕೆ
ಗುತ್ತು , ಬಾರಿಕೆ , ಆಡಳಿತ ಸಮಿತಿ , ಉಳ್ಳಾಕುಲು ಸಮಿತಿ , ಜೀರ್ಣೋದ್ದಾರ ಸಮಿತಿ , ಭಜನಾ ಸಮಿತಿ, ಜಾತಿವಾರು ಸಮಿತಿ , ಸರಕಾರಿ ಸಮಿತಿ , ಪಕ್ಷವಾರು ಮುಖಂಡರನ್ನು ಇತ್ಯಾದಿ ಸಮಿತಿಗಳ ಅಧ್ಯಕ್ಷರು ಸದಸ್ಯರ ಮನೆಗಳಿಗೆ ಆದ್ಯತಾ ವಲಯವನ್ನಾಗಿ ಗಣನೆಗೆ ತೆಗೆದುಕೊಂಡು ಸಕಲ ಮನೆಗಳಿಗೆ ಅಭಿಯಾನ ಮಂಗಳವಾರ ಮಾತ್ರ ಮುಂದುವರಿಸಲಾಗುವುದು.
ಸಲಹೆ ಸೂಚನೆ ಸ್ವೀಕರಿಸಿ ನಮ್ಮ ಕ್ಷೇತ್ರದ ದೇವಿಯ ಅನುಮತಿ ಮೇರೆಗೆ ಬದಲಿಸಲು ಅವಕಾಶವಿದೆ
ನಮ್ಮ ನಮ್ಮ ತಪ್ಪುಗಳನ್ನು ನಾವು ತಿದ್ದಿ ನಡಿಯುವುದು ನೆಮ್ಮದಿ ಬದುಕು – ಅರಿತು ಬದುಕೋಣ
ಅಭಿಯಾನದ ಭಾವಚಿತ್ರ – ಭಕ್ತರ ಮನೆ ಮನೆಗೆ ಅಭಿಯಾನ ಅಂತರ್ಜಾಲದಲ್ಲಿ ಪ್ರಕಟಿಸಲಾಗುದು
ನಮ್ಮ ನಡೆ -ಪ್ರತಿ ಮಾನವರಲ್ಲಿ , ಜೀವರಾಶಿಗಳಲ್ಲಿ – ದೇವಿ ಮತ್ತು ದೇವರನ್ನು ನೋಡುವ ದಾರಿಯಲ್ಲಿ ಮುಂದೆ ಸಾಗುತಿದ್ದೇವೆ
ಶುಭಾಕರ ಹೆಗ್ಗಡೆ -ಇಜಿಲಂಪಾಡಿ ಬೀಡು – ೯೪೮೦೨೪೧೭೬೫

