
ಹೊಸ ಆಲೋಚನೆಗೆ ಪ್ರೋತ್ಸಾಹ – ಹೊಸ ಆವಿಷ್ಕಾರಕ್ಕೆ ಅವಕಾಶ – ಸಮಾಜದ ಅಭಿವೃದ್ಧಿಗೆ ಸಹಕಾರ.
1. ಅಭಿಯಾನದ ಉದ್ದೇಶ
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಲ್ಲ ಒಂದು ಹೊಸ ಆಲೋಚನೆ, ಪ್ರತಿಭೆ, ಅನುಭವ ಮತ್ತು ಆವಿಷ್ಕಾರ ಶಕ್ತಿ ಇರುತ್ತದೆ. ಆದರೆ ಸೂಕ್ತ ಮಾಹಿತಿ, ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಆರ್ಥಿಕ ನೆರವಿನ ಕೊರತೆಯಿಂದ ಅನೇಕ ಆವಿಷ್ಕಾರಗಳು ಬೆಳಕಿಗೆ ಬರುವುದಿಲ್ಲ. ಇಂತಹ ಪ್ರತಿಭೆಗಳನ್ನು ಗುರುತಿಸಿ, ಅವರ ಆವಿಷ್ಕಾರಗಳನ್ನು ಸಮಾಜದ ಉಪಯೋಗಕ್ಕೆ ತರುವುದೇ ಈ ಅಭಿಯಾನದ ಮುಖ್ಯ ಉದ್ದೇಶ.
2. ಅಭಿಯಾನದ ಪ್ರಮುಖ ಕಾರ್ಯಗಳು
- ಹೊಸ ಆವಿಷ್ಕಾರಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು.
- ಪ್ರತಿಯೊಬ್ಬರ ಹೊಸ ಆಲೋಚನೆಗಳನ್ನು ಸಂಗ್ರಹಿಸುವುದು.
- ಗ್ರಾಮೀಣ ಆವಿಷ್ಕಾರಕರನ್ನು ಗುರುತಿಸುವುದು.
- ಕೃಷಿಕರಿಗೆ ಪೂರಕ ಯಂತ್ರಗಳ ಆವಿಷ್ಕಾರಕ್ಕೆ ಪ್ರೋತ್ಸಾಹಿಸುವುದು.
- ಕಡಿಮೆ ವೆಚ್ಚದ ಉಪಯುಕ್ತ ಯಂತ್ರಗಳ ಅಭಿವೃದ್ಧಿಗೆ ಸಹಕರಿಸುವುದು.
- ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸುವುದು.
- ಮಹಿಳೆಯರ ಮತ್ತು ಯುವಕರ ಆವಿಷ್ಕಾರಗಳಿಗೆ ಅವಕಾಶ ಕಲ್ಪಿಸುವುದು.
- ಹಳೆಯ ಯಂತ್ರಗಳಲ್ಲಿ ಸುಧಾರಣೆ ಮಾಡುವವರಿಗೆ ಮಾರ್ಗದರ್ಶನ ನೀಡುವುದು.
- ಆವಿಷ್ಕಾರಕರಿಗೆ ತಾಂತ್ರಿಕ ಮತ್ತು ಆರ್ಥಿಕ ನೆರವು ದೊರಕಿಸಲು ಪ್ರಯತ್ನಿಸುವುದು.
- ಉಪಯುಕ್ತ ಆವಿಷ್ಕಾರಗಳನ್ನು ಡಿಜಿಟಲ್ ಪುಸ್ತಕ ಮತ್ತು ವಿಡಿಯೋ ಮೂಲಕ ಪರಿಚಯಿಸುವುದು.
3. ಯಾವ ಕ್ಷೇತ್ರಗಳಲ್ಲಿ ಆವಿಷ್ಕಾರಕ್ಕೆ ಅವಕಾಶ?
- ಕೃಷಿ ಮತ್ತು ಕೃಷಿ ಯಂತ್ರೋಪಕರಣಗಳು.
- ಶಿಕ್ಷಣ ಮತ್ತು ಡಿಜಿಟಲ್ ತಂತ್ರಜ್ಞಾನ.
- ಆರೋಗ್ಯ ಮತ್ತು ಸ್ವಚ್ಛತೆ.
- ನೀರು ಮತ್ತು ಪರಿಸರ ಸಂರಕ್ಷಣೆ.
- ಉದ್ಯೋಗ ಮತ್ತು ಉದ್ಯಮ.
- ಗ್ರಾಮೀಣ ಅಭಿವೃದ್ಧಿ.
- ರಸ್ತೆ ಮತ್ತು ಸಾರಿಗೆ.
- ಇಂಧನ ಉಳಿತಾಯ.
- ದೇವಾಲಯ ಮತ್ತು ಧಾರ್ಮಿಕ ಸೇವೆ.
- ಗೃಹಬಳಕೆಯ ಸರಳ ಉಪಕರಣಗಳು.
4. ಅಭಿಯಾನದ ವಿಶೇಷ ಪರಿಕಲ್ಪನೆ
ಪ್ರತಿಯೊಂದು ಗ್ರಾಮದಲ್ಲಿಯೂ ಆವಿಷ್ಕಾರ ಮಾಹಿತಿ ಕೇಂದ್ರ ಸ್ಥಾಪಿಸಬೇಕು. ಜನರು ತಮ್ಮ ಹೊಸ ಆಲೋಚನೆ, ಯಂತ್ರದ ಮಾದರಿ, ಸುಧಾರಣೆ ಅಥವಾ ಸಮಸ್ಯೆಗೆ ಪರಿಹಾರವನ್ನು ದಾಖಲಿಸಬಹುದು.
ಆವಿಷ್ಕಾರಕರ ಪರಿಚಯ, ಆವಿಷ್ಕಾರದ ಚಿತ್ರ, ವಿಡಿಯೋ, ಉಪಯೋಗ, ತಯಾರಿಕಾ ವೆಚ್ಚ ಮತ್ತು ಪ್ರಯೋಜನಗಳನ್ನು ದಾಖಲಿಸಿ ಡಿಜಿಟಲ್ ಮಾಹಿತಿ ಭಂಡಾರ ನಿರ್ಮಿಸಬೇಕು.
5. ಅಭಿಯಾನದಿಂದ ಸಿಗುವ ಪ್ರಯೋಜನಗಳು
- ಹೊಸ ಪ್ರತಿಭೆಗಳಿಗೆ ಗುರುತಿಸುವಿಕೆ.
- ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಅವಕಾಶ.
- ಕೃಷಿಕರ ಶ್ರಮ ಮತ್ತು ವೆಚ್ಚ ಕಡಿತ.
- ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರ.
- ಹೊಸ ಉದ್ಯಮಗಳ ಸೃಷ್ಟಿ.
- ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ.
- ಗ್ರಾಮೀಣ ಆರ್ಥಿಕ ಅಭಿವೃದ್ಧಿ.
- ಸಮಾಜಕ್ಕೆ ಉಪಯುಕ್ತವಾದ ಹೊಸ ಸಾಧನಗಳ ನಿರ್ಮಾಣ.
ಅಭಿಯಾನದ ಘೋಷವಾಕ್ಯ
ಆಲೋಚನೆ ಗುರುತಿಸೋಣ – ಆವಿಷ್ಕಾರ ಪರಿಚಯಿಸೋಣ – ಸುಧಾರಣೆಗೆ ಪ್ರೋತ್ಸಾಹಿಸೋಣ – ಸಮಾಜದ ಅಭಿವೃದ್ಧಿಗೆ ಕೈಜೋಡಿಸೋಣ.
ಅವ್ಯಕ್ತರ ಆಶಯ
ಆವಿಷ್ಕಾರ ಮಾಡುವವರು ಮಾತ್ರ ವಿಜ್ಞಾನಿಗಳಲ್ಲ; ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಳ್ಳುವ ಪ್ರತಿಯೊಬ್ಬರೂ ಆವಿಷ್ಕಾರಕರೇ. ಅವರ ಆಲೋಚನೆಗೆ ಅವಕಾಶ ನೀಡಿದರೆ ಅದೇ ಸಮಾಜದ ಸಂಪತ್ತಾಗುತ್ತದೆ.