ದೈವಾರಾಧನೆ ತುಳುನಾಡಿನ ಅತ್ಯಂತ ಪ್ರಾಚೀನ ಜನಪದ ಧಾರ್ಮಿಕ ಪರಂಪರೆಗಳಲ್ಲಿ ಒಂದಾಗಿದೆ. ಇದರ ನಿಖರವಾದ ಆರಂಭದ ಕಾಲವನ್ನು ನಿರ್ಧರಿಸುವಷ್ಟು ಲಿಖಿತ ದಾಖಲೆಗಳು ಲಭ್ಯವಿಲ್ಲ. ಆದರೆ ಪ್ರಕೃತಿ ಆರಾಧನೆ, ಪೂರ್ವಜರ ಸ್ಮರಣೆ, ವೀರರ ಆರಾಧನೆ ಮತ್ತು ಗ್ರಾಮದ ರಕ್ಷಣೆಯ ನಂಬಿಕೆಗಳು ದೈವಾರಾಧನೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿವೆ.
ಆರಂಭದಲ್ಲಿ ಪ್ರಕೃತಿ, ಕಾಡು, ಭೂಮಿ, ಪ್ರಾಣಿ ಮತ್ತು ನೀರಿನೊಂದಿಗೆ ಬದುಕುತ್ತಿದ್ದ ಜನರು ತಮ್ಮ ಜೀವನವನ್ನು ರಕ್ಷಿಸುವ ಶಕ್ತಿಗಳಲ್ಲಿ ನಂಬಿಕೆ ಇಟ್ಟಿದ್ದರು. ಸಮಾಜಕ್ಕಾಗಿ ಧೈರ್ಯ, ತ್ಯಾಗ ಮತ್ತು ನ್ಯಾಯದ ಕಾರ್ಯಗಳನ್ನು ಮಾಡಿದ ವೀರಪುರುಷರು ಹಾಗೂ ವೀರಮಹಿಳೆಯರನ್ನು ಕಾಲಕ್ರಮೇಣ ದೈವಸ್ವರೂಪದಲ್ಲಿ ಗೌರವಿಸಲಾಯಿತು. ಕೆಲವು ದೈವಗಳು ಕುಟುಂಬದ ರಕ್ಷಕ ಶಕ್ತಿಗಳಾಗಿ, ಇನ್ನು ಕೆಲವು ಗ್ರಾಮ ಮತ್ತು ಸಮುದಾಯದ ಆರಾಧ್ಯ ದೈವಗಳಾಗಿ ಬೆಳೆದವು.
ದೈವಾರಾಧನೆಯಲ್ಲಿ ನೃತ್ಯ, ಸಂಗೀತ, ವೇಷಭೂಷಣ, ಮುಖವರ್ಣಿಕೆ, ಗಗ್ಗರ ಮತ್ತು ಪವಿತ್ರ ಆಚರಣೆಗಳು ವಿಶೇಷ ಸ್ಥಾನ ಪಡೆದಿವೆ. ದೈವದ ಮೂಲಕ ನ್ಯಾಯ, ಧರ್ಮ, ಸತ್ಯ, ರಕ್ಷಣೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಪ್ರತಿಪಾದಿಸುವ ಪರಂಪರೆ ರೂಪುಗೊಂಡಿತು.
ನಮ್ಮ ದೈವ ಆರಾಧಕರ ಮೂಲ ಕರ್ತವ್ಯ ;
ಪ್ರತಿಯೊಬ್ಬ ಮಾನವರಿಗೂ ಸುಖ ಶಾಂತಿ ನೆಮ್ಮದಿ ಸಮೃದ್ಧ ಸಂಪನ್ಮೂಲ ಬದುಕು – ಸ್ವರ್ಗ ಬದುಕು – ಪ್ರಸ್ತುತ ಒದಗಿಸುವ ಉದ್ದೇಶ
ನ್ಯಾಯ – ೨೪ ಗಂಟೆಯ ಒಳಗೆ ದೈವಾರಾಧನೆ ಮೂಲ ಪದ್ದತಿಯಲ್ಲಿ ಒದಗಿಸುತಿದ್ದರು ಅದರ ಮರು ಸ್ಥಾಪನೆ ನಮ್ಮ ಗುರಿ
ಪ್ರಜಾ ಪದ್ಧತಿ ಅರಸು ಪದ್ಧತಿ ಆಡಳಿತ – ನ್ಯಾಯದಾನ ಒದಗಿಸುವುದರಲ್ಲಿ – ಅರಸು ಪದ್ಧತಿ – ಪ್ರಥಮ ಸ್ಥಾನದಲ್ಲಿದ್ದು – ಅನುಕರಣೆಗೆ – ಚಿಂತನ ಮಂಥನ ಅನುಷ್ಠಾನದತ್ತ – ಮುಂದೆ ಸಾಗೋಣ




