ಆನ್ಲೈನ್ ಬಳಕೆದಾರರ ವೇದಿಕೆ – ಪ್ರತಿ ಊರಿನಲ್ಲಿ , ಪ್ರತಿ ಪಟ್ಟಣದಲ್ಲಿ, ಪ್ರತಿ ವೃತ್ತಿರಂಗದಲ್ಲಿ – ಆದಾಗ ಮಾತ್ರ ನಮ್ಮ ಮಾನವ ಬದುಕು ಸಮಯ ಶ್ರಮ ಮತ್ತು ಸಂಪಾದನೆಯ ಸದ್ಬಳಕೆ ಮಾಡುತಿರುವ ಒಳ್ಳೆಯ ಪ್ರಜೆಗಳು ಆಗಲು ಸಾಧ್ಯವಿದೆ.
ನಾವು ಇಂದು ಅರಸರಾಗಿ ಬಾಳುವ ಬದಲಾಗಿ ಆಳುಗಳಾಗಿ – ವಿದೇಶಿಗರ ಹಿಂದೆ ಬಿದ್ದು ಆಮೆ ನಡಿಗೆಯಲ್ಲಿ ಸಾಗುತಿದ್ದೇವೆ. ಯೌಟ್ಯೂಬಿನಲ್ಲಿ – ಭಾಷಣ ,ಪದ್ಯ , ಚುಟುಕು,ವಚನ ಸಾಹಿತ್ಯ – ಇತ್ಯಾದಿ ಹಾಕಿದಾಗ – ಅದಕ್ಕೆ ಮೆಚ್ಚಿದವರ ಸಂಖ್ಯೆ ಒಂದು ಮಿತಿಗಿಂತ ಮೇಲ್ಪಟ್ಟಾಗ ಕೊಡುವ ಅಲ್ಪ ಮೊತ್ತದ ಭಿಕ್ಷೆಗೆ ಮುಂದಾಗುತಿರುವುದು ನಮ್ಮ ಬುದ್ಧಿವಂತಿಕೆಯ ಮಟ್ಟವನ್ನು ಜಾಗತಿಕ ವೇದಿಕೆಯಲ್ಲಿ ಬೆತ್ತೆಲೆ ಗೊಳಿಸಿದೆ. ಇದನ್ನೆ ನೀವು ನಿಮ್ಮದೇ ಆದ ಬ್ಲಾಗಿನಲ್ಲಿ ಪ್ರಕಟಿಸಿದರೆ ನಿಮ್ಮ ಉದ್ಯಮಕ್ಕೆ ನಾಂದಿ ಹಾಡುತಿತ್ತು
ಪುಟ್ಟ ಮಕ್ಕಳಿಗೆ ಪುಸ್ತಕ ಯಾ ಕರಿ ಹಲಗೆ ಕೊಟ್ಟಾಗ ಸ್ವಲ್ಪ ಹೊತ್ತು ಗೀಚಿ, ಬೇಸರ ಪಟ್ಟು ಅದನ್ನು ಬಿಟ್ಟುಬಿಡುವ ಕನಿಷ್ಠ ಜ್ಞಾನವನ್ನು ಕೂಡ ಇಲ್ಲದೆ ಮೊಬೈಲಿನಲ್ಲಿ
ಗೀಚುತ್ತಾ ಇರುವ ನಮ್ಮ ಸಂಸ್ಕಾರ – ಸತ್ತ ಬದುಕು ಒಂದಡೆ – ನಿಜವಾದ ಸಾವು ಇನ್ನೊಂದು ಮಗ್ಗುಲಿನಲ್ಲಿ ನಿತ್ತ್ಯ ಕಾಡುತಿರುವುದು – ಮೊಬೈಲ್ ಅಡಿಕ್ಟ್ – ಕಾಯಿಲೆಯತ್ತ ಮನೋವೇಗದಲ್ಲಿ ಮುನ್ನಡೆಯುತಿರುವ ನಮಗೆ ಅರಿವಾಗುತಿಲ್ಲ. ವಾಟ್ಸಪ್ಪ್ , ಫೇಸ್ಬುಕ್ , ಮೆಸೇಜ್ ಎಂಬ ತಲೆಬರಹದಲ್ಲಿ – ನಿಮ್ಮ ವಿಭಿನ್ನ ಬಂಗಿಗಳಲ್ಲಿ ತೆಗದ ಭಾವಚಿತ್ರಗಳನ್ನು ನೋಡಿ ನೋಡಿ ಸಾಕಾಗಿಹೋಗಿದೆ. ಆವಿಸ್ಕಾರದ, ಬದುಕಿನ ಉನ್ನತಿಗೆ ಪೂರಕವಾದ ವಿಷಯಗಳು ಬಿತರಗೊಳ್ಳುತಿದ್ದರೆ ಪ್ರಗತಿಯ ಹೆಜ್ಜೆ ನಮಗೆ ಅರಿವಿಲ್ಲದೆ ಮುಂದಕ್ಕೆ ಸಾಗುತಿರುತದೆ
ಒಂದು ವೇದಿಕೆಯಿಂದ ಕನಿಷ್ಠ ಐದು ಮಂದಿಗೆ ಉದ್ಯೋಗ ಕಲ್ಪಿಸುವ ಅವಕಾಶ ಮತ್ತು ಇದರ ಜೊತೆಗೆ ಹಲವಾರು ಮಂದಿಗೆ ತನ್ನ ವ್ಯಾಪ್ತಿಯಲ್ಲಿದ್ದುಕೊಂಡು ಸಂಪಾದನೆ ವೃದಿಸುವ ಅವಕಾಶವಿರುತದೆ. ಇದಕ್ಕಾಗಿ ವಿಪುಲ ಅವಕಾಶಗಳು ನಿತ್ಯ ನಿರಂತರ ಸ್ವಾಗತ ಕೋರುತಿವೆ.
ಗೂಗಲ್ ಬ್ಲಾಗ್, ಅವ್ಯಕ್ತ ಬುಲೆಟಿನ್ , ಸ್ವತಃ ವೆಬ್ಸೈಟ್ ತನ್ನ ಕೆಲಸಗಳನ್ನು ನಿರಂತರ ಮಾಡುತಿವೆ. ಆಳಾಗಿ ಬದುಕುವುದಕ್ಕಿಂತ ಅರಸನಾಗಿ ಸಾಯುವ ದ್ರಡ ಸಂಕಲ್ಪದೊಂದಿಗೆ ಮುಂದೆ ಮುಂದೆ ಸಾಗೋಣ
ಅರಸರನ್ನು ಮೂಲೆಗುಂಪು ಮಾಡಿ ನಾವೆಲ್ಲರೂ ಅರಸರು ಎಂಬ ವೇದ ವಾಕ್ಯ ಪ್ರಜಾಪದ್ದತಿಯ ತಿರುಳು. ಆದರೆ ನಾವು ಇಂದು ವಿದೇಶಿಗರ ಜೀತದ ಆಳುಗಳು ಆಗಿ ಬದುಕುತಿರುವುದು ವಾಸ್ತವ. ಇದಕ್ಕೆ ಮೂಲ ಅರಸರು ಮರುಜನನ ಪಡೆದು ಭೂಮಿಯ ಒಡೆತನದ ಸಾಮ್ರಾಜ್ಯದ ಬದಲಾಗಿ ಆರ್ಥಿಕ ಸಾಮ್ರಾಜ್ಯ ಕಟ್ಟುವ ರಣ ಕಹಳೆ ಮೊಳಗಿಸಬೇಕೆ?