
ಜೈನರ ಅಭಿಯಾನ -ಇಜಿಲಂಪಾಡಿ , ಕಡಬ ತಾಲೂಕು- ದ. ಕ. 
ಇದರ ಉದ್ಘಾಟನೆಯು ರೆಂಜಿಲಾಡಿ ಬೀಡು ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಮತ್ತು ಇಜಿಲಂಪಾಡಿ ಬೀಡಿನ ಒಂದನೇ ದೆಪ್ಪುಣಿ ಗುತ್ತಿನ ಯಶೋಧರ ಶೆಟ್ಟಿ ನೇತೃತ್ವದಲ್ಲಿ ಉದ್ಯಪ್ಪ ಅರಸರಾದ ಶುಭಾಕರ ಹೆಗ್ಗಡೆಯವರ – ಪ್ರವರ್ತಕ ಪ್ರಾಯೋಜಕತ್ವದಲ್ಲಿ ಊರಿನ ಗಣ್ಯರ ಸಹಭಾಗಿತ್ವದೊಂದಿಗೆ ತಾರೀಕು ೧೭. ೧೦. ೨೦೨೫ ರಂದು ನೆರವೇರಿತು. ಪಡ್ಡಾಯೂರು ಗುತ್ತು ದೀಪಿಕಾ ರವೀಂದ್ರ ಸ್ಥಾಪಕ ಅಧ್ಯಕ್ಷರಾಗಿ ಸರ್ವ ಸದಸ್ಯರು ಉಪಾಧ್ಯಕ್ಷರು ಆಗುವ ಮೂಲಕ ನೂತನ ಸಂಪ್ರದಾಯಕ್ಕೆ ನಾಂದಿಯಾಯಿತು. ಪ್ರತಿ ಶುಕ್ರವಾರ ಬೆಳಿಗ್ಗೆ ೯. ೩೦ ರಿಂದ ೧೧. ೩೦ ರವರೆಗೆ ನಿರಂತರ- ಬಸದಿ ಅಭಿಯಾನ , ೧೦೮ ಬಾರಿ ಪಂಚನಮಸ್ಕರ ಮಂತ್ರ ಪಠಣ ಅಭಿಯಾನ , ಮನ ಸ್ವಚ್ಛತಾ ಅಭಿಯಾನ ,ಬಸದಿ ಸ್ವಚ್ಛತಾ ಅಭಿಯಾನ,ಜೈನರ ಸಮಗ್ರ ಅಭಿವೃದ್ಧಿ ಅಭಿಯಾನ , ಜೈನರಿಗೆ ಪ್ರತಿಯೊಬ್ಬರಿಗೆ ಸಂಪಾದನೆಗೆ ಅವಕಾಶ ಕಲ್ಪಿಸುವ ನೂತನ ಆವಿಸ್ಕಾರ – ಪ್ರತಿ ಅಭಿಯಾನದಲ್ಲಿ ಪ್ರತಿಯೊಬ್ಬರ ಮನದ ಮಾತು ಅಳಿಸಿ – ಸೂಕ್ತವಾದುದನ್ನು ಚಿಂತಿಸಿ – ದೇವರ ಅನುಗ್ರಹ ಪಡೆದು ಅನುಷ್ಠಾನ ಮಾಡುವ ಸಂಕಲ್ಪ ನಮ್ಮದಾಗಿದೆ. ನಮ್ಮೆಲ್ಲರ ಮನೋಭಾವನೆ ದೇವರೊಂದಿಗೆ ಸಮ್ಮಿಲನವಾದಾಗ  – ಭಿನ್ನತೆ ಏಕತೆಯಾಗಿ ಪರಿವರ್ತನೆ ಆಗುತದೆ ಎಂಬ ಅಭಿಪ್ರಾಯ ಇಂದಿನ ಮನದ ಮಾತಿನಲ್ಲಿ ಅಡಕವಾಗಿತ್ತು. ಜೈನರ ಅಭಿಯಾನ – ಪಂಚನಮಸ್ಕರ ಪಠಣ ಮಾಡುವ ಜೈನರಾದ ನಮ್ಮೆಲ್ಲರ ಅಸ್ತಿ – ಅದನ್ನು ಸಮೃದ್ಧಿ ಪಡಿಸೋಣ -ಸೂಕ್ತ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ – ಭಾರತೀಯ ಜೈನ ಮಿಲನ್ , ಇನ್ನಿತರ ಸಕಲ ಸಂಘ ಸಮುಸ್ತೆಗಳ ಸಹಕಾರ ಸಹಭಾಗಿತ್ವ ನಮ್ಮ ಮನದಾಳದ ಚಿಂತನೆ. ಅಂದಿನ ಅರಸರು – ಜೈನರು, ಇಂದಿನ ಮುಂದಿನ ಅರಸರು – ಜೈನರು ಎಂದು ಜಾಗತಿಕ ಮಟ್ಟಕ್ಕೆ ಕೃತಿಯಲ್ಲಿ ತೋರಿಸೋಣ. ಅನ್ಯರಲ್ಲಿ ಜಿನನನ್ನು ನೋಡುವವ ಜೈನರು ನಾವೆಂದು ತಿಳಿದು ಮನೋವೇಗದಲ್ಲಿ ಮುಂದೆ ಮುಂದೆ ಸಾಗೋಣ – ಜೈ ಜಿನೇಂದ್ರ