ಭೂಮಿಯ ಮರ್ಮವನರಿಯದ ಕೃಷಿಕ
ಚಾಲನೆಯರಿಯದ ಚಾಲಕ
ಕಲ್ಲು ಬಂಡೆಯನು ಹೊತ್ತಿಹನೆಂದ
ಅವ್ಯಕ್ತ
ಭೂಮಿಯ ಕೃಷಿ ಭೂಮಿ ಮಲ್ಪಂಗೆ
ಧನ ಕನಕ ರಾಶಿಯ ಮೇಲೆ ಕುಲ್ಲಿರ್ಪ ಕುಬೇರ
ತೃಣಕ್ಕೆ ಸಮಾನನೆಂದ
ಅವ್ಯಕ್ತ
ಉದ್ಯಮಿಯ ಬೆಲೆ ರುಪಾಯಿಗೆ ಹತ್ತು
ಕೃಷಿಕರ ಬೆಲೆ ರುಪಾಯಿಗೆ ಹತ್ತು ಪೈಸೆ
ಇದು ಭಾರತದ ಹಣಕಾಸು ಸಂಸ್ಥೆಗಳ ಲೆಕ್ಕಾಚಾರವೆಂದ
ಅವ್ಯಕ್ತ
ಅನ್ನದಾತ ಕೃಷಿಕ ಅಭಿವೃದ್ಧಿಧಾತ ಕೃಷಿಕ
ಪಾಪ ಮಾಡಿ ಹುಟ್ಟಿದ ಪಾಪಿ
ಉದ್ಯಮಕ್ಕೆ ಇತಿಶ್ರೀ ಪಾಪಕ್ಕೆ ಪ್ರಯಾಚಿತ್ತವೆಂದ
ಅವ್ಯಕ್ತ
ಭೂಮಿಯಲ್ಲಿ ಕೃಷಿ ಮಾಡುವಾತ ಕಡುಬಡವ
ಊರಲ್ಲಿ ಕೃಷಿ ಮಾಡುವಾತ ಬಡವ
ಭೂಲೋಕದಲ್ಲಿ ಕೃಷಿ ಮಾಡುವಾತ ಧನಿಕನೆಂದ
ಅವ್ಯಕ್ತ
ಕೃಷಿ ತ್ಯಾಜ್ಜ ಸುಡುವವ
ತನ್ನ ದೇಹವ ಸುಡುತಿಹನು
ಆತ್ಮಹತ್ಯೆಗೆ ಕಾರಣ ಪೆಲೆಂದ
ಅವ್ಯಕ್ತ
ಕೃಷಿ ತ್ಯಾಜ್ಜ ಗೊಬ್ಬರವಾಗಿ ಬಳಸುತಿರೆ
ಮಳೆ ನೀರಿಗೆ ತೊಟ್ಟಿಯ ಕಟ್ಟುತಿರೆ
ಕೃಷಿ ವಿಜ್ಞಾನಿ ನೀನೆಂದ
ಅವ್ಯಕ್ತ
ಕೊಡದ ತೂತ ಅರಿತಿಹರು
ಪರ್ಸಿನ ತೂತ ಅರಿತಿಹರು
ಕೃಷಿ ಭೂಮಿ ತೂತ ಅರಿತಿಹರಾರು
ಅವ್ಯಕ್ತ
ಕೃಷಿ ಪ್ರಯೋಗಾಲಯಕ್ಕೆ ಕೊಲ್ಲಿ ಇಟ್ಟು
ಬಯಲು ಪ್ರಯೋಗಾಲಯಕ್ಕೆ ಹೆಜ್ಜೆ ಇಡುತಿರೆ
ಕೃಷಿ ವಿಜ್ಞಾನಿ ಬದುಕು ಸಾರ್ಥಕವೆಂದ
ಅವ್ಯಕ್ತ
ಅನ್ನ ತಿಂದವರು ಬೆಲೆ ತೆತ್ತರೆ
ಕೃಷಿ ಬದುಕು ಖುಷಿ ಬದುಕು
ಪುಕ್ಕಟೆ ತಿಂಬ ಭಾರತದಲ್ಲಿ ಸಾಧುವೇ
ಅವ್ಯಕ್ತ
ಕೃಷಿಕ ತುಳಿಯದ ಭೂಮಿ ಕೃಷಿಕನಿಗಿರೆ
ದೃಷ್ಟಿಗೆ ಬೀಳದ ಗಿಡಮರ ಬಳ್ಳಿಗಳಿರೆ
ಕೃಷಿಕ ನೀನಾಗಲು ನಾ ಲಾಯಿಕೆಂದ
ಅವ್ಯಕ್ತ
ಇಂಧನಕ್ಕಾಗಿ ಗೋಬರ್ಗ್ಯಾಸ್ ಬಳಸುವಾತ
ತೂತು ಪರ್ಸ್ ಬಳಸುವಾತ
ಧನವಂತ ದರಿದ್ರನತ್ತ ದಾಪುಕಾಳು ಹಾಕುತಿಹನು
ಅವ್ಯಕ್ತ
ಗೋಬರ್ಗ್ಯಾಸ್ ಬಳಸಿ ತಿಂಬ ಕೃಷಿಕ
ಮಣ್ಣು ತಿಂಬ ಗೊಬ್ಬರ ತಿಂಬುತಿಹ
ಬರಡು ಭೂಮಿ ನಿನಗೆ ಓ ಕೃಷಿಕ
ಅವ್ಯಕ್ತ
ಗೊಬ್ಬರಕ್ಕಾಗದ ಕೃಷಿ ತ್ಯಾಜ್ಜ ಬಳಸಿ
ಇಂಧನ ಬಳಕೆ ಪೂರೈಸಿದ ಕೃಷಿಕ
ಮೆಟ್ಟಲೇರುತಿಹ ನೋಡ
ಅವ್ಯಕ್ತ