ಶಾಲೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಿಕಿನೆಡೆಗೆ ಕೊಂಡುಹೋಗುವ ಜ್ಞಾನ ದೇಗುಲ. ಇದರ ಅರಿವು ಆ ಶಾಲೆಯಲ್ಲಿ ಶಿಕ್ಷಣ ಪಡೆದು ಇಂದು ಯಾವುದೇ ಹುದ್ದೆಯಲ್ಲಿದ್ದರು ಪ್ರತಿಯೊಬ್ಬ ವಿದ್ಯಾರ್ಥಿಗೂ ಇರಬೇಕು . ಅದರ ಏಳಿಗೆಗೆ ತನ್ನಿಂದಾದ ಅಳಿಲ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಕೂಡ ಆಗಿರುತದೆ.ಈ ಮನೋಭಾವನೆ ಸಹಜವಾಗಿ ಇದ್ದು ತಾನು ಏನು ಮಾಡಬಹುದು ಎಂದು ಚಿಂತನ ಮಂಥನ ಅನುಷ್ಠಾನ ಮಾಡುವಲ್ಲಿ ಎಡರು ತೊಡರುಗಳು ನಮ್ಮನ್ನು ಕಾಡುತದೆ.
ತನ್ನ ಮನೆಯಲ್ಲಿ ಶಾಲೆ ಪ್ರಾರಂಭ ಮಾಡಿ ಹಲವಾರು ವರುಷಗಳ ಕಾಲ ನಡೆಸಿ ತನ್ನೆ ಜಮೀನಿನ ಭಾಗವನ್ನು ಶಾಲೆಗೆ ದಾನ ಮಾಡಿದ ಪುಣ್ಯಾತ್ಮರು – ಉಚಿತ ಶಿಕ್ಷಕ ವೃತಿ ಮಾಡಿದವರು – ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುವವರು – ಉಚಿತವಾಗಿ ಶಿಕ್ಷಕರನ್ನು ಕೊಡುಗೆಯಾಗಿ ಕೊಟ್ಟ ಸಂಘ ಸಂಸ್ಥೆಗಳು – ಉನ್ನತ ಶ್ರೇಣಿಯಲ್ಲಿ ಅಂಕ ಪಡೆದವರಿಗೆ ಸವಲತ್ತುಗಳನ್ನು ಒದಗಿಸುವ ದಾನಿಗಳು – ಒಂದೇ ಮಾತಿನಲ್ಲಿ ಹೇಳುವುದಾದರೆ – ಅಕ್ಸರ ಜ್ಞಾನದ ಶಿಕ್ಷಣ ಬದುಕಿನ ಶಿಕ್ಷಣಕ್ಕಾಗಿ ನಾವು ಎಲ್ಲ ರೀತಿಯ ಭಿನ್ನತೆ ಮರೆತು ಒಂದಾಗಿ ಮುಂದೆ ಮುಂದೆ ಸಾಗುತಿದ್ದೇವೆ.
ನಮ್ಮೆಲ್ಲರ ಶಾಲೆಗಳ ಬದುಕಿನ ಚಿತ್ರಣವನ್ನು ಸಮಾಜದೊಂದಿಗೆ ಪ್ರಪಂಚಕ್ಕೆ – ಸಂಕ್ಷಿಪ್ತ ಮತ್ತು ಸಮಗ್ರ ಅರಿವು ಮೂಡಿಸುವ – ಸಲುವಾಗಿ ಸ್ಕೂಲ್ ಬುಲೆಟಿನ್ ಕಂಕಣಬದ್ದವಾಗಿದೆ. ಇದರ ಸಲುವಾಗಿ ಪ್ರಥಮ ಹಂತದಲ್ಲಿ ಪ್ರತಿ ಶಾಲೆಯ ಭಾವಚಿತ್ರ ಪ್ರಕಟಣೆ ಹೆಸರಿನೊಂದಿಗೆ ಹತ್ತು ಪದಗಳಿಗೆ ಮೀರದಂತೆ ಪ್ರಕಟಣೆ ಮತ್ತು ಪ್ರತಿ ವರುಷ ಪ್ರತಿ ಶಾಲೆಯಲ್ಲಿ ಪ್ರಕಟಿಸುವ ಉತ್ತಮ ವಿದ್ಯಾರ್ಥಿಯ ಭಾವಚಿತ್ರ ಹೆಸರು ಪ್ರಕಟಣೆ. ಇದಕ್ಕೆ ವಿದ್ಯಾ ಸಂಸ್ಥೆಗಳ ಸಹಕಾರ ಕೋರುತಿದ್ದೇವೆ.
ಮಾನವ ಬಂಧುಗಳೆ – ನೀವು ನಾವು ಒಂದಾಗಿ – ನಮ್ಮ ನಮ್ಮ ಶಾಲೆ ಜಾಗತಿಕ ಮಟ್ಟಕ್ಕೆ ಬೆಳೆಸೋಣ.