Avyaktha vachanagalu

ಶೇರ್ ಮಾಡಿ

ತನ್ನ ಒಳಗಿಹ ವೈರಿಯ ಅರಿತವ,
ತನ್ನ ಹೊರಗಿಹ ಬಂದುಗಳ ಅರಿತವ,
ಸುಖ ಶಾಂತಿ ನೆಮ್ಮದಿಯ ಸುಪ್ಪತಿಗೆಯಲ್ಲಿಹನು …………………….. ಅವ್ಯಕ್ತ

ಅರಮನೆಯವ ಬೀಡಿನವ ಗುತ್ತಿನವ ಎನ್ನುವಾತ
ಕ್ಷೇತ್ರಕ್ಕೆ ಗಳಿಕೆಯಲ್ಲಿ ಪಾಲು ನೀಡದಾತಾ
ಕ್ಷೇತ್ರದ ನಾಮ ಬಳಸಲು ಅನರ್ಹನೆಂದ…………………… …………….ಅವ್ಯಕ್ತ

ಭಿನ್ನತೆ ಮಾನವ ಸೃಷ್ಟಿ
ಏಕತೆ ದೇವರ ಸೃಷ್ಟಿ
ಅರಿತು ಬಾಳಿದರೆ ಲೆಸೆಂದ…………………………………………………….. ಅವ್ಯಕ್ತ

ಅನ್ಯರ ತಪ್ಪು ನೋಡುವಾತ ನಿತ್ಯ ಸಾಯುತೀಹನು
ಅನ್ಯರ ಸರಿ ನೋಡುವಾತ ನಿತ್ಯ ನೆಮ್ಮದಿಯಹನು
ತಪ್ಪು ಸರಿ ನೋಡುವ ದೃಷ್ಟಿ ಬದಲಿಸೆಂದ……… ……………………………ಅವ್ಯಕ್ತ

ಒಂಟಿ ಬದುಕಿಗೆ ಸಂಗಾತಿ ಬದುಕು ಮದುವೆ
ಮದುವೆ ಮರುಮದುವೆ ಕುಂಟು ನೆಪ ಸಲ್ಲ
ಐವತ್ತರೊಳಗಿನ ಹೆಣ್ಣು ಅರುವತ್ತರೊಳಗಿನ ಗಂಡು ಅರ್ಹರೆಂದ……….. ಅವ್ಯಕ್ತ

See also  Avyaktha Vachanagalu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?