
ಅಭಿಯಾನ ಪ್ರಾರಂಭಕ್ಕೆ ಉದ್ದೇಶ ಗುರಿ
ಮನೆಯಲ್ಲಿ ಉದ್ಯೋಗ ಉದ್ಯೋಗಿಗೆ ಬದಲಿಮೂಲ
ಮರ್ಮವ ಅರಿತೊಡೆ ಸ್ವರ್ಗ ನಿನಗಯ್ಯಾ ————————————————— ಅವ್ಯಕ್ತ
ಅಪ್ಪಿಕೊ ಒಪ್ಪಿಕೊ ಜಗದೊಡೆಯನ ಅಂಬೋಣ
ಅಪ್ರಿಯ ನಿನಗೆ ಬಂದುಗಳಿಗೆ ಆಗುತಿರೆ
ಮುಂದಿನ ಬದುಕಿಗೆ ದಾರಿಯದು ತಿಳಿಯೆಂದ —————————————— ಅವ್ಯಕ್ತ
ಮಾನವರೊಂದಿಗೆ ಆಟ ಇರುವುದಯ್ಯ
ಜಲಕ್ರೀಡೆ ಆಟ ಇರುವುದಯ್ಯ
ದೇವರೊಂದಿಗೆ ಆಟ ಆರಂಬಿಸೆಂದ ——————————————– ಅವ್ಯಕ್ತ
ಸತಿಗೆ ಪತಿಯಾಗಿ ಬಾಳುವುದು ಸಹಜ
ಪತಿಗೆ ಸತಿಯಾಗಿ ಬಾಳುವುದು ಸಹಜ
ದೇವರಿಗೆ ಸತಿ ಪತಿಯಾಗಿ ಅಸಾಧ್ಯವೆ ——————————————– ಅವ್ಯಕ್ತ
ಜಪ ಮೊಬೈಲ್ ಮಾಡುವುದಯ್ಯ
ಜಪ ಮಾನವರು ಮಾಡುವರಯ್ಯ
ಜಪದ ಮಹತ್ವ ತಿಳಿಸೆಂದ ——————————————————— ಅವ್ಯಕ್ತ
ಆತ್ಮಕ್ಕೆ ದೇಹ ಹೊದಿಕೆ
ದೇಹಕ್ಕೆ ಬಟ್ಟೆ ಹೊದಿಕೆ
ಮಾನವ ಅರಿತು ಬಾಳೆಂದ ——————————————- ಅವ್ಯಕ್ತ
ವರಮಹಾಲಕ್ಷ್ಮಿಯನ್ನು ಮನಮಂದಿರದಿ ಪ್ರತಿಷ್ಠಾಪಿಸಿ
ದಿನನಿತ್ಯ ಪೂಜೆ ಮಾಡುತಿರೆ
ದೇಹ ವರಮಹಾಲಕ್ಷ್ಮಿ ಮಂದಿರವೆಂದ —————————– ಅವ್ಯಕ್ತ
ಮಹಿಳಾ ಅಭಿಯಾನದಿ ತೊಡಗಿರುವ ಮಹಿಳಾಮಣಿಗಳೇ
ಜಗದಿ ಸ್ಥಾನಮಾನ ಜೀರ್ಣಿಸಿಕೊಂಡು ಬದುಕುತಿರೆ
ಮಹಿಳಾ ಅಭಿಯಾನ ಗಗನಕ್ಕೆ ಏರಿಸುವುದೆಂದ ——————— ಅವ್ಯಕ್ತ
ಹೆತ್ತೊಡಲು ಕೊಟ್ಟ ಶಾಪ
ಸಂಗಾತಿ ಕೊಟ್ಟ ಶಾಪ
ಅವ್ಯಕ್ತ ಸಂಗಾತಿಯಾಗಿರಲು ತಟ್ಟದಯ್ಯ ——————————————–ಅವ್ಯಕ್ತ
ವಿದ್ಯೆ ಕೊಡುವ ಶಾಲೆ ಇರುವುದಯ್ಯ
ಬುದ್ದಿ ಕೊಡುವ ಶಾಲೆ ಇಲ್ಲವಯ್ಯಾ
ಬುದ್ದಿ ಕೊಡುವ ಶಾಲೆ ಬೇಕಯ್ಯಾ —————————————————— ಅವ್ಯಕ್ತ
ಜೀವನ ಚರಿತ್ರೆ ಅಭಿಯಾನದಲ್ಲಿ ಪಾಲ್ಗೊಳ್ಳಿ
ತಂದೆ ತಾಯಿಯ ಜೀವನ ಉಳಿಸಿ
ಹೆತ್ತು ಹೊತ್ತವರ ಋಣ ತೀರಿಸೆಂದ ——————————————- ಅವ್ಯಕ್ತ
ಅಭಿಯಾನ ಉದ್ಯೋಗ ಉದ್ಯಮಕ್ಕೆ ದಾರಿ
ಆವಿಸ್ಕಾರ ಬದುಕಿಗೆ ಮಾನವರಿಗೆ ವರದಾನ
ಪೂರ್ವಗ್ರಹ ಪೀಡಿತರಿಗೆ ಜೀರ್ಣಿಸಲು ಪೆಳೆಂದ —————— ಅವ್ಯಕ್ತ
ವಾರಕೊಮ್ಮೆ ಭಕ್ತರನ್ನೆಲ್ಲ ಕಾಣದ ದೇವಾಲಯದಿ
ದೇವರು ಭಕ್ತರ ಕಾಣಲು ಹೋಗುತಿಹರು
ಭಕ್ತರಿಗೆ ಬದುಕಿನ ಕತ್ತಲು ದಿನನಿತ್ಯವೆಂದ ————————- – ಅವ್ಯಕ್ತ
ಕೋಟಿ ಸಂಪಾದನೆಗೆ ಕೋಟಿ ವಿದ್ಯೆ
ಶಾಲಾ ಕಾಲೇಜುಗಳಲ್ಲಿ ಅಕ್ಷರ ಜ್ಞಾನವೆಂದ
ಅವ್ಯಕ್ತ ಬುಲೆಟಿನ್ ಸಾಧಕನಿಗೆ ಕಾಮದೇನುವೆಂದ ——————————————- ಅವ್ಯಕ್ತ
ಸತಿ ನಂಬದ ಪತಿ ಇರಲು
ಪತಿ ನಂಬದ ಸತಿ ಇರಲು
ಸ್ವರ್ಗ ನರಕ ನೀನು ಆರಿಸೆಂದ ——————————————————————— ಅವ್ಯಕ್ತ
ದೇಹ ಸುಖ ನೀಡದ ಪತಿ
ದೇಹ ಸುಖ ನೀಡದ ಸತಿ
ಸತಿ ಪತಿಗೆ ಸನ್ಯಾಸ ಲೇಸೆಂದ ———————————————————————— ಅವ್ಯಕ್ತ