ಮನದ ದೇವರ ಪೂಜೆ ಮನದಲ್ಲಿ ಮಾಡದೆ ಇದ್ದೊಡೆ
ಮನೆಯ ದೇವರ ಪೂಜೆ ಮನೆಯಲ್ಲಿ ಮಾಡದ ಇದ್ದೊಡೆ
ದೇವಾಲಯದಿ ದೇವರು ನಮ್ಮ ಇಷ್ಟಾರ್ಥ ಸಿದ್ದಿ ಅಸಾದ್ಯವೆಂದ —————————————— ಅವ್ಯಕ್ತ
ಮಸ್ತಕದ ಮೊಬೈಲ್ ಬಳಕೆಗೆ ಮಿತಿ ಬೇಡ
ಯಾಂತ್ರಿಕ ಮೊಬೈಲ್ ಬಳಕೆಗೆ ಮಿತಿ ಇರಲಿ
ಮಸ್ತಕ ಮೊಬೈಲ್ ಬಳೆಕೆ ಉಪಯೋಗ ತಿಳಿಯೆಂದ ——————————————– ಅವ್ಯಕ್ತ
ಬಾಹ್ಯ ಸೌಂದರ್ಯಕ್ಕೆ ಮಾರು ಹೋದವರು
ಆಂತರಿಕ ಸೌಂದರ್ಯ ಮರೆತು ಬದುಕುತಿಹರು
ನಿನ್ನ ಬದುಕಿನ ಆಯ್ಕೆ ಆಂತರ್ಯವೆಂದ ——————————————– ಅವ್ಯಕ್ತ