ಅಗಲಿದ ಮಾನವರಲ್ಲಿ ದೈವ ದೇವರ ಕಾಣದಾತ
ಜೀವಿತ ಮಾನವರಲ್ಲಿ ದೈವ ದೇವರ ಕಾಣದಾತ
ಪೂಜಿಪ ನಂಬಿಪ ನಾಟಕದ ಪಾತ್ರದಾರಿ ಮಾನವನೆಂದ …………………………….. ಅವ್ಯಕ್ತ
ಟಿವಿ ಮೊಬೈಲ್ ಕಂಪ್ಯೂಟರ್ ಪ್ರೇಕ್ಷಕರ ಬದುಕು ಬೇಡವೇಬೇಡ
ಟಿವಿ ಮೊಬೈಲ್ ಕಂಪ್ಯೂಟರ್ ಪಾತ್ರದಾರಿ ಬದುಕು ಬೇಡ
ಟಿವಿ ಮೊಬೈಲ್ ಕಂಪ್ಯೂಟರ್ ನಿರ್ದೇಶಕ ಬದುಕು ಬೇಕೆಂದ ………………………….. ಅವ್ಯಕ್ತ
ಪ್ರೇಕ್ಷಕರ ಬದುಕು ಬೀದಿಪಾಲು
ಪಾತ್ರದಾರಿ ಬದುಕು ನೆಮ್ಮದಿಬಾಳು
ಸೂತ್ರಧಾರಿ ಬದುಕು ಶ್ರೇಷ್ಠಬಾಳೆಂದ ……………………………………………………ಅವ್ಯಕ್ತ
ಪ್ರಜಾಪ್ರಭುತ್ವದ ವೈರಸ್ ಅರಿಯದ ದೇಶ
ಪ್ರಜಾಪ್ರಭುತ್ವ ನಾಟಕ ಆಡಳಿತ ದೇಶ
ಪ್ರಜೆಗಳು ನಿತ್ಯ ಸಾಯುತಿಹರು ನೋಡೆಂದ …………………………………………….ಅವ್ಯಕ್ತ
ಒಂದು ತಲೆಮಾರಿಗೆ ೨ ನಾಲ್ಕು ತಲೆಮಾರಿಗೆ ೮
ಐದು ತಲೆಮಾರಿಗೆ ೩೨ ಹತ್ತು ತಲೆಮಾರಿಗೆ ೧೦೨೮
ಲೆಕ್ಕವಿಲ್ಲದ ತ್ಯಾಗಿಗಳಿಂದ ನಮ್ಮ ಜನನವೆಂದ ………………………………………….ಅವ್ಯಕ್ತ
ಕೋಟಿಗಟ್ಟಲೆ ಜೀವಿಗಳು ದೇಹದೊಳಗೆ ದುಡಿಯುತಿಹರು
ಪಾಂಡವರು ಕೌರವರು ಅವರುಗಳು ಆದೊಡೆ
ಬದುಕು ಶೂನ್ಯ ಅರಿತು ಬಾಳೆಂದ …………………………………………………….. ..ಅವ್ಯಕ್ತ
ಮನ ಮೈದಾನದಿ ತ್ಯಾಜ್ಜ ರಾಶಿ ತುಂಬಿರೆ
ಮಾನವ ಮಾಧ್ಯಮ ತ್ಯಾಜ್ಜ ರಾಶಿ ತುಂಬುತಿರೆ
ಭಗವಂತನತ್ತ ಪಯಣ ಪಠಣ ಸ್ವಚ್ಛ ಮಾಲ್ಪುದೆ …………………………………………….ಅವ್ಯಕ್ತ
ಶ್ರಧಾಂಜಲಿ ಶಾಶ್ವತ ಗೋರಿ ಸಮಾಧಿ ಅಂದು
ಶ್ರಧಾಂಜಲಿ ಅಲ್ಪಾಯುಷಿ ಆನ್‌ಲೈನ್ ಆಫ್‌ಲೈನ್ ಇಂದು
ಶ್ರಧಾಂಜಲಿ ಬುಲೆಟಿನ್ ಶಾಶ್ವತ ಗೋರಿ ಸಮಾಧಿಯೆಂದ …………………………………..ಅವ್ಯಕ್ತ
ಉದ್ಯೋಗಿಗೆ ಮನೆಯಲ್ಲಿ ಕೆಲಸ
ಸೋಮಾರಿಗೆ ಜಗದಿ ಕೆಲಸವಿಲ್ಲ
ಸೋಮಾರಿ ಉದ್ಯೋಗಿ ಆಗೆಂದ …………………………………………………….ಅವ್ಯಕ್ತ
ಸೋಮಾರಿ ಮನೆ ಮನೆ ಸುತ್ತುತಿಹನು
ಸೋಮಾರಿ ತಿಂದು ನಿದ್ದೆ ಮಾಡುತಿಹನು
ಸೋಮಾರಿ ಮಕ್ಕಳಿಗೆ ಕಳಿಸಿದ ಪಾಠವೆಂದ ………………………………………….ಅವ್ಯಕ್ತ
ಶಾಶಕಾಂಗ ಕಾರ್ಯಂಗ ನ್ಯಾಯಾಂಗ ನಾಟಕ
ಪ್ರಜಾಪ್ರಭುತ್ವ ಅರಿಯದ ದೇಶದಿ ಆಡುತಿಹರು
ಪ್ರಜಾಪ್ರಭುತ್ವ ಅರಿತು ಆಡಳಿತ ನಡೆಸೆಂದ ……………………………………………ಅವ್ಯಕ್ತ
ಟಿ ವಿ ಮೊಬೈಲ್ ಧಾರಾವಾಹಿ ಸುದ್ದಿ
ಸೋಮಾರಿ ತಯಾರಿ ಮಾಡುವ ಕಾರ್ಖಾನೆಗಳು
ಉದ್ಯೋಗಿ ಮುಚ್ಚುತಿಹ ಸೋಮಾರಿ ನೋಡುತಿಹ …………………………………. ಅವ್ಯಕ್ತ
ವಿದೇಶಿ ಸಂಸ್ಕೃತಿ ದೇಶಿಯ ಪದ್ಧತಿ
ದೇಶೀಯ ಪದ್ಧತಿ ವಿದೇಶಿ ಸಂಸ್ಕೃತಿ
ದೇಶೀಯರ ಬದುಕು ಹಾವು ಮುಂಗುಸಿಯೆಂದ ……………………………………..ಅವ್ಯಕ್ತ
ನಮ್ಮ ಪೂರ್ವಜರು ದೇವರು
ನಮ್ಮ ಪೂರ್ವಜರು ದೈವಗಳು
ಅರಿತು ಬಾಳಿದರೆ ತಿಳಿಯುವುದೆಂದ ………………………………………………..ಅವ್ಯಕ್ತ