ಆನ್ ಲೈನ್ ದೇವಾಲಯ ಅಭಿಯಾನ

Share this

ದೇವಾಲಯದ ಸೇವೆ ಮನೆ ಮನೆಗೆ – ಧರ್ಮದ ಜ್ಞಾನ ಜನ ಜನರಿಗೆ
ಆನ್‌ಲೈನ್ ದೇವಾಲಯ ಅಭಿಯಾನದ ಉದ್ದೇಶಗಳು:
1. ಪ್ರತಿಯೊಂದು ದೇವಾಲಯದ ಪರಿಚಯವನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುವುದು.
2. ದೇವಾಲಯದ ಇತಿಹಾಸ, ಮಹಿಮೆ ಮತ್ತು ಧಾರ್ಮಿಕ ಪರಂಪರೆಯನ್ನು ಪರಿಚಯಿಸುವುದು.
3. ಆನ್‌ಲೈನ್ ದರ್ಶನ, ಪೂಜೆ ಮತ್ತು ಆರಾಧನೆಗೆ ಅವಕಾಶ ಕಲ್ಪಿಸುವುದು.
4. ಭಕ್ತರಿಗೆ ದೇವಾಲಯದ ಕಾರ್ಯಕ್ರಮಗಳ ಮಾಹಿತಿ ತಲುಪಿಸುವುದು.
5. ದೇವಾಲಯದ ಅಭಿವೃದ್ಧಿ ಮತ್ತು ಸೇವಾ ಕಾರ್ಯಗಳಲ್ಲಿ ಎಲ್ಲರ ಸಹಭಾಗಿತ್ವ ಪಡೆಯುವುದು.
6. ದೂರದ ಭಕ್ತರಿಗೆ ದೇವಾಲಯದೊಂದಿಗೆ ನಿರಂತರ ಸಂಪರ್ಕ ಕಲ್ಪಿಸುವುದು.
7. ದೇವಾಲಯದ ಧಾರ್ಮಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಉಳಿಸುವುದು.
8. ದೇವಾಲಯದ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಸಮಾಜಸೇವೆಗೆ ಪ್ರೋತ್ಸಾಹ ನೀಡುವುದು.
9. ದೇವಾಲಯದ ಆದಾಯ–ವೆಚ್ಚಗಳಲ್ಲಿ ಪಾರದರ್ಶಕತೆ ಬೆಳೆಸುವುದು.
10. ಪ್ರತಿಯೊಂದು ದೇವಾಲಯವನ್ನು ಧರ್ಮ, ಜ್ಞಾನ, ಸೇವೆ ಮತ್ತು ಮಾನವ ಏಕತೆಯ ಕೇಂದ್ರವನ್ನಾಗಿ ರೂಪಿಸುವುದು.
೧೧.ಪ್ರತಿ ದೇವಾಲಯದಲ್ಲಿ ಪ್ರತಿ ಒಂದು ಉದ್ದೇಶಕ್ಕು ಒಂದು ಪ್ರತಿನಿಧಿ ಆಯ್ಕೆ ಮಾಡಿ ೨೦% ಪಾಲುಗಾರಿಕೆಯಲ್ಲಿ ಉದ್ಯೋಗಕ್ಕೆ ಒತ್ತು
ಅಭಿಯಾನದ ಮುಖ್ಯ ಸಂದೇಶ
ದೇವಾಲಯದ ದರ್ಶನ ಆನ್‌ಲೈನ್‌ನಲ್ಲಿ,
ಧರ್ಮದ ಜ್ಞಾನ ಪ್ರತಿಯೊಬ್ಬರ ಮನದಲ್ಲಿ,
ದೇವಾಲಯದ ಸೇವೆ ಸಮಾಜದ ಹಿತದಲ್ಲಿ!
ಪ್ರತಿ ದೇವಾಲಯದ- ಮೊಕ್ತೇಸರರು, ಆಡಳಿತ ಮಂಡಳಿ ಅಧ್ಯಕ್ಷರು, ಭಕ್ತರು,ಮತ್ತು ಸಕಲ ಮಾನವರು – ಚಿಂತನ ಮಂಥನ ಮಾಡಿ ಅನುಷ್ಠಾನದತ್ತ – ಮನೋವೇಗದಲ್ಲಿ ಮುಂದೆಸಾಗಿ – ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಿ – ಸ್ವರ್ಗದ ಕನಸು ನನಸಾಗದಿದ್ದರು – ನೆಮ್ಮದಿ ಬದುಕು ನಮ್ಮದಾಗಲಿ

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you