ಜೈನರು ಅಂದಿನ ಇಂದಿನ ಮುಂದಿನ ಅರಸರು ಎಂಬ ವ್ಯಾಖ್ಯಾನ ಕೆಲವೊಂದು ವೇದಿಕೆಯಲ್ಲಿ ಕೇಳಿ ಬಂದಿರುವುದು ಒಂದು ಜಾತಿ ಮತ ಪಂಥಕ್ಕೆ ಸಂದ ಗೌರವ ಕಂಡಿತಾ ಅಲ್ಲ – ಬಲ್ಲವರು ಜೈನ ಧರ್ಮದ ತಿರುಳನ್ನು ಅರಿತವರು ಅದು ಸಾರ್ವಕಾಲಿಕ ಶಿಕ್ಸಣ – ಅದರಿಂದ ದೂರವಾದರೆ ಬದುಕು ಅಸಾಧ್ಯ – ಇದಕ್ಕೆ ಇಂದು ಜಾಗತಿಕ ಮಟ್ಟದಲ್ಲಿ ಜೈನರು ಅನುಸರಿಸ್ಕೊಂಡು ಬರುತಿರುವ ಆಚರಣೆಗಳ ಅವಲಂಬನೆ – ಶುಚಿತ್ವದ ಬಗ್ಗೆ ಇರುವ ಕಾಳಜಿ – ದೇವಾಲಯಗಳು ದೇವಮಾನವ ಪರಿವರ್ತನಾ ಕೇಂದ್ರಗಳೆಂಬ ಜೈನರ ಸಿದ್ಧಾಂತ – ಬಹುತೇಕ ಜೈನರಿದ್ದ ಕಾಲದಲ್ಲಿ ಮುತ್ತು ರತ್ನ ವಜ್ರ ವೈಡೂರ್ಯಗಳು ಮಾರ್ಗದಲ್ಲಿ ರಾಶಿ ಹಾಕಿ ಮಾರುತಿದ್ದರೆಂಬ ಆ ಕಾಲಿನ ಜನರ ಅಂಬೋಣ – ಇಂದು ಕೂಡ ಜೈನರು ದೈವ ದೇವರ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಸಂಕೇತ – ಸಾವಿಗೆ ಅಂಜದ ಬದುಕಿನ ವ್ಯಕ್ತಿತ್ವ – ಅನ್ನ ನೀರು ಆಹಾರ ನಿಯಂತ್ರಣ ಸಾಧಿಸುತ್ತಾ ಬಂದು ದೇಹ ತ್ಯಾಗ ಮಾಡುವ ಸಲ್ಲೇಖನ ವ್ರತಕ್ಕೆ ಜನಸಾಮಾನ್ಯರ ಮನ್ನಣೆಯೊಂದಿಗೆ ಕಾನೂನಿನ ಬಲ – ಹಿರಿಯರ ಸಂಪತ್ತು ಮತ್ತು ಪುಣ್ಯದಿಂದ ಜೀವನ ಸಾಗಿಸುತಿದ್ದಾರೆ ಎಂಬ ಬಾಲಿಶ ಮಾನವರ ಮಾತುಗಳು – ಎಲ್ಲಕ್ಕೂ ಮಿಗಿಲಾಗಿ ಜಿನಾಲಯಗಳ ನಾಶ,ಪರಿವರ್ತನೆ – ಮತಾಂತರ ಪಿಡುಗಿಗೆ ಸಿಕ್ಕಿ ಬೆರಳೆಣಿಕೆಯಲ್ಲಿರುವ ಜನಸಂಖ್ಯೆ – ಸ್ವತಃ ಧರ್ಮಿಯರ – ಮಿತ್ಯದರ್ಶನ ಮಿಥ್ಯಾಜ್ಞಾನ ಮಿತ್ಯಾಚಾರಿತ್ರ – ಮುಂದುವರಿದ ಸಮಾಜದ ಕಪಿಮುಷ್ಠಿಯಿಂದ ಬಿಡಿಸೋಣ – ದೇವರ ಅಪ್ಪಣೆ – ಮುನಿಗಳ ಆಶೀರ್ವಾದ,ಪೀಠಾಧಿಪತಿಗಳ ಅನುಗ್ರಹ ನಮ್ಮ ಮೇಲೆ ಸದಾ ಇರುವ ಮನೋಬಲದೊಂದಿಗೆ – ಮುನ್ನಡೆಯೋಣ. ಭಾರತೀಯ ಜಿನ ಮಿಲನಗಳ ಮಿಲನ ಮಾಡುವ ಈ ವೇದಿಕೆ ಮನ ಮನಗಳ ಮಿಲನವಾಗಿ – ಅದು ಮುಂದಕ್ಕೆ ಮಾನವಕುಲಕೋಟಿಯ ಮಿಲನವಾಗಿ , ಮಾನವರಾದ ನಮ್ಮ ಬದುಕು ಸುಖ ಶಾಂತಿ ನೆಮ್ಮದಿಯ ಬೀಡಾಗಲಿ – ಅನಿಸಿಕೆಯೊಂದಿಗೆ ಪ್ರತಿ ಮಿಲನಗಳಿಗೂ ನಿಮ್ಮ ನಡೆದು ಬಂದ ದಾರಿಯ ಚಿತ್ರಣ ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸೋಣ – ನಿಮ್ಮ ಅನಿಸಿಕೆ ಭಾವನೆಗಳಿಗೆ ಸದಾ ಸ್ವಾಗತ. ಒಂದು ವಾರದ ಒಳಗೆ ನಿಮ್ಮ ಖಾತೆಯನ್ನು ತೆರೆದು ಉಚಿತ ಸೌಲಭ್ಯಕ್ಕೆ ಪಾತ್ರರಾಗಿ.
ನಿಮ್ಮ ನಮ್ಮ ಅನುಕೂಲಕ್ಕಾಗಿ ಕೆಲವು ನಿಯಮಗಳು
೧ . ಒಂದು ಪುಟ ಅಂದರೆ ೩೦೦ ಪದಗಳು ಮತ್ತು ಎರಡು ಭಾವಚಿತ್ರಕ್ಕೆ ಮಾತ್ರ ಉಚಿತ ಸೌಲಭ್ಯವಿದೆ
೨. ಹೆಚ್ಚಿನ ಅವಕಾಶ ಬೇಕಾದಲ್ಲಿ ಪದಗಳಿಗೆ ರೂಪಾಯಿ ೧೦ ರಂತೆ ೫೦ ಪದಗಳ ಪ್ಯಾಕೇಜ್ ಬಳಸಿ
೩. ಒಂದು ಪ್ರಕಟಣೆ ಯಾವುದೆ ಕಾರಣಕ್ಕೂ ಮೂರು ಪುಟಕ್ಕೆ ಕಡ್ಡಾಯ ಸೀಮಿತ – ೯೦೦ ಪದಗಳು ಮಾತ್ರ
೪. ಭಾವಚಿತ್ರ ಒಂದಕ್ಕೆ ರೂಪಾಯಿ ೧೦೦/- ರಂತೆ ಮಿತಿಯಿಲ್ಲದ ಅವಕಾಶ
೫. ಕನಿಷ್ಠ ಶುಲ್ಕದೊಂದಿಗೆ ವರದಿ ಬದಲಾವಣೆಗೆ ಅವಕಾಶ
೬. ವರದಿ ವೆಬ್ಗೆ ಅಪ್ಲೋಡ್ ಮಾಡುವ ರೀತಿಯಲ್ಲಿ ಮಾತ್ರ ಕಳುಹಿಸಿ
೭. ಕನಿಷ್ಠ ಮಿಲನದ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಗುರುತಿಸಿ
೮. ಧಾರ್ಮಿಕ ಸಾಮಾಜಿಕ ಆರ್ಥಿಕ – ಅಭಿವೃದ್ಧಿಯ ವೇಗವನ್ನು ಉಲ್ಲೇಖಿಸಿ
೯. ನಿಮ್ಮ ಅನುಕೂಲಕ್ಕೆ ತಕ್ಕಂತೆ ಅನ್ಯರಿಗೆ ಆದರ್ಶವಾಗುವಂತೆ ಸ್ಪಂದಿಸಬೇಕಾಗಿ ಕೋರಿಕೆ
೧೦. ಉಚಿತ ಸೌಲಭ್ಯದ ಅವಧಿ ಮೀರಿದ ಮೇಲೆ ರೂಪಾಯಿ ೧೦೦೦/- ಶುಲ್ಕವಿರುತ್ತದೆ