ಇಚ್ಲಂಪಾಡಿ ಒಕ್ಕಲಿಗ ಗೌಡ ಸಮಾಜದಿಂದ ಆರ್ಥಿಕವಾಗಿ ಹಿಂದುಳಿದ ಸುಮಾರು ೧೨೫ ಕುಟಂಬಗಳಿಗೆ ಕಿಟ್ ವಿತರಣೆ…

Share this

ಇಚ್ಲಂಪಾಡಿ ಒಕ್ಕಲಿಗ ಗೌಡ ಸಮಾಜದಿಂದ ಕಿಟ್ ವಿತರಣೆ… 

okkaliga samaja ichilampady

      ಆರ್ಥಿಕವಾಗಿ ಹಿಂದುಳಿದ ಸುಮಾರು ೧೨೫ ಕುಟಂಬಗಳಿಗೆ ೧೦ ಕೆಜಿ ಅಕ್ಕಿ, ಒಂದು ಕೆಜಿ ಸಕ್ಕರೆ, ಕಾಲು ಕೆಜಿ ಚಹಾ ಪುಡಿ , ಒಂದು ಕೆಜಿ ಉಪ್ಪು, ಕಾಲು ಕೆಜಿ ಉಪ್ಪಿನ ಕಾಯಿ ಒಳಗೊಂಡ ಆಹಾರದ ಕಿಟ್ ಅನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾದ ಭಾಸ್ಕರ್ ಎಸ್ ಗೌಡ ಅವರು ಲೋಕಕ್ಕೆ ಬಂದೆರಗಿದ ರೋಗ ಇದು ಯಾವುದೇ ಜಾತಿ ಧರ್ಮ ಎಂದು ತಿಳಿಯದೆ ನಾವು ಒಬ್ಬರಿಗೊಬ್ಬರು ಸಹಾಯಕ್ಕೆ ನಿಲ್ಲಬೇಕಾದ ಸಂದರ್ಭ ಇದಾಗಿದ್ದು ಇದೊಂದು ಸಣ್ಣ ಸಹಾಯ ಅಷ್ಟೆ ಮುಂದೆಯೂ ಯಾರಿಗಾದರೂ ಊಟಕ್ಕೆ ತೊಂದರೆ ಆದರೆ ಯಾವುದೇ ಅಂಜಿಕೆ ಇಲ್ಲದೇ ನೇರವಾಗಿ ಅಹವಾಲು ಸಲ್ಲಿಸಿ . ಊರಿನ ಹಿರಿಯರು ಉಳ್ಳವರ ಸಹಾಯದಿಂದ ಆರ್ಥಿಕ ವಾಗಿ ಬಡವರ ಬೆನ್ನಿಗೆ ನಿಲ್ಲುವುದಾಗಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ದು.ಪ. ದೇವಸ್ತಾನದ ಆಡಳಿತ ಮೊಕ್ತೇಸರರಾದ ಶ್ರೀ ಶುಭಕರ ಹೆಗ್ಗಡೆ, ಮೋನಪ್ಪ ಶೆಟ್ಟಿ ಗುರುಸ್ವಾಮಿ , ರಾಮಕೃಷ್ಣ ಗೌಡ ಇವರು ಕಿಟ್ ಗಳನ್ನು ವಿತರಿಸಿದರು. ಕೌಕ್ರಾಡಿ ಪಂಚಾಯತ್ ಸದಸ್ಯರು ಗಳಾದ ಶ್ರೀನಿವಾಸ ಪೂಜಾರಿ, ಮಾಧವ ಕೆಡೆಂಬೆಲ್, ದಿನೇಶ್ ಗೌಡ ಕಲ್ಯ, ಅನ್ನಮ್ಮ, ಶ್ರೀಮತಿ ಮೋಹಿನಿ, ಪಂಚಾಯತ್ ಉಪಾಧ್ಯಕ್ಷ ರಾದ ಶ್ರೀಮತಿ ವಾಣಿ ಹಾಗು ಊರ ಹಿರಿಯರಾದ ರಾಧಾಕೃಷ್ಣ ಕೆರ್ನಡ್ಕ ನಿರ್ವಹಿಸಿದರು.

References?

https://en.wikipedia.org/wiki/Vokkaliga

https://en.wikipedia.org/wiki/Vokkaligara_Sangha

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you