Brahmana bulletin – ಬ್ರಾಹ್ಮಣ ಬುಲೆಟಿನ್

ಶೇರ್ ಮಾಡಿ

ಅರಸನಾಗಿ ಪಟ್ಟವನ್ನು ಅಲಂಕರಿಸಿದ ವ್ಯಕ್ತಿ ಮಾಡಬೇಕಾದ ಪ್ರಾಮುಖ್ಯ ಕೆಲಷ -ಮನೆಯಲ್ಲಿ ಮನೆಯವರನ್ನು ಒಂದುಮಾಡಿ – ಊರಿನಲ್ಲಿ ಊರಿನವರನ್ನು ಒಂದುಮಾಡಿ – ವಿಭಿನ್ನ ಜಾತಿಗಳಲ್ಲಿ ಅವರವರ ಜಾತಿಯವರನ್ನು ಒಂದುಮಾಡಿ – ಪ್ರಪಂಚದಲ್ಲಿ ಮಾನವಕುಲಕೋಟಿಯನ್ನು ಒಂದುಮಾಡಿ – ಮಾನವರು ಜೀವರಾಶಿಗಳು – ಪ್ರಕೃತಿಯೊಂದಿಗೆ ದೇವರೊಂದಿಗೆ ಒಂದಾಗಿ ಬಾಳುವಂತೆ ಮಾಡುವ ಗುರುತರ ಜವಾಬ್ದಾರಿ ಅವನ ಮೇಲಿದೆ . ಅದು ಅವನು ತನ್ನ ಪೀಠದಲ್ಲಿ ಕುಳಿತುಕೊಳ್ಳುವಾಗ ಮಾಡಲೇಬೇಕಾದ ಪ್ರತಿಜ್ಞೆ ಕೂಡ ಆಗಿರುತದೆ ಎಂಬುದು ಬಲ್ಲವರ ಅಂಬೋಣ. ಆವಿಸ್ಕಾರಗಳು ನಿರಂತರ ನಡೆಯುತಿರುತವೆ – ಅವುಗಳನ್ನು ಹೇಗೆ ಎಲ್ಲಿ ಬಳಸಿ – ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಾಧನವನ್ನಾಗಿಸುವ ಹೊಣೆಗಾರಿಕೆ ನಮ್ಮ ಪಾಲಿಗಿದೆ.
ಈ ವೇದಿಕೆಯನ್ನು ಬಳಸಿ – ಹೆಚ್ಚಿನ ಮಂದಿಗೆ ಉದ್ಯೋಗ ಕಲ್ಪಿಸಿ – ಕನಿಷ್ಠ ವೆಚ್ಚದಲ್ಲಿ ಸಕಲ ಮಾಹಿತಿ ಕಲೆಹಾಕಿ ಜೋಪಾನವಾಗಿ ಬೇಕಾದಲ್ಲಿ ಬೇಕಾದವರಿಗೆ ಸಿಗುವಂತೆ ಮಾಡಿ – ಮೊಬೈಲ್ ಆಟಿಕೆ ವಸ್ತು ಅಲ್ಲ – ಕಾಲಹರಣ ಮಾಡಲು ಸೋಮಾರಿಗಳ ವೇದಿಕೆ ಕಂಡಿತಾ ಅಲ್ಲ – ಮಾನವ ಬದುಕಿನ ಕಲ್ಪವೃಕ್ಷವೆಂದು ಸಾರಿ ಹೇಳಿ ಸಾದಿಸಿ ತೋರಿಸೋಣ.

See also  Kusumalatha V jain -Nellikar

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?