ದೇವ ಪ್ರತಿಷ್ಠೆ ದೈವ ಪ್ರತಿಷ್ಠೆ
ದೇವ ಪೂಜೆ ದೈವ ಪೂಜೆ
ಮಾನವ ಬದುಕಿನ ನಾಟಕ ಪರಿಯೆಂದ ………………………….ಅವ್ಯಕ್ತ
ಮನದಿ ದೇವ ಪ್ರತಿಷ್ಠೆ ಸನ್ಮಾರ್ಗಕ್ಕೆ ಒತ್ತು
ಮನದಿ ದೈವ ಪ್ರತಿಷ್ಠೆ ದುರ್ಮಾರ್ಗಕ್ಕೆ ಪೆಟ್ಟು
ದೇವ ದೈವ ಪ್ರತಿಷ್ಠೆ ಮರ್ಮವ ತಿಳಿಯೆಂದ …………………………..ಅವ್ಯಕ್ತ
ಮೊಬೈಲ್ ಕಂಪೆನಿಗೆ ಅದೃಷ್ಟದ ಬಾಗಿಲು
ಮೊಬೈಲ್ ಇಂಟರ್ನೆಟ್ಗೆ ಅದೃಷ್ಟದ ಬಾಗಿಲು
ಮೊಬೈಲ್ ಬಳಕೆದಾರನ ಅದೃಷ್ಟ ಪೆಳೆಂದ…………………………ಅವ್ಯಕ್ತ
ಉಚಿತ ಸೌಲಭ್ಯ ಸಾಮಾಜಿಕ ಜಾಲತಾಣ
ನಿನ್ನ ಮಾರಾಟ ಉಚಿತ ನಿನ್ನಿಂದ
ಉಚಿತ ಮಾರಾಟ ಸೌಲಭ್ಯ ತಿಳಿಯೆಂದ …………………………………ಅವ್ಯಕ್ತ
ಸ್ವದೇಶಿ ವಿದ್ಯೆ ಸನ್ಮಾರ್ಗಿಗಳ ಸೃಷ್ಟಿ
ವಿದೇಶಿ ವಿದ್ಯೆ ದುರ್ಮಾರ್ಗಿಗಳ ಸೃಷ್ಟಿ
ಸ್ವದೇಶಿ ವಿದೇಶಿ ಅರಿವು ಲೇಸೆಂದ ………………………………….. ಅವ್ಯಕ್ತ