ದೇವರು ಇರುವ ಸ್ಥಳ ದೇವಾಲಯ – ಅದು ಯಾವುದೇ ಜಾತಿ ಮತ ಪಂತ – ವಿಭಿನ್ನತೆ ಇದ್ದರು – ದೇವರನ್ನು ಆರಾಧಿಸುವಲ್ಲಿ ಲೋಪವಾದರೆ ಕ್ಲಪ್ತ ಸಮಯದಲ್ಲಿ ಸರಿ ಮಾಡುವುದು ಆಡಳಿತ ನಡೆಸುವ ಹೊಣೆಗಾರಿಕೆ ಹೊತ್ತ ವ್ಯಕ್ತಿಯ ಆದ್ಯ ಕರ್ತವ್ಯ. ಇಲ್ಲಿ ನಾನೇನು ಮಾಡಲಿ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿ ತಪ್ಪಿಸುವ ಅವಕಾಶ ಎಳ್ಳಷ್ಟೂ ಕೂಡ ಇಲ್ಲ.
ಈ ನಿಟ್ಟಿನಲ್ಲಿ ಮುಕ್ಥೇಶ್ವರ – ವಾಸ್ತು ದೋಷದ ನಿವಾರಣೆ , ಪ್ರತಿಷ್ಠ ಕಾರ್ಯವಿಧಾನದಲ್ಲಿ ಆಗಿರುವ ಲೋಪದ ನಿವಾರಣೆ , ಭಿನ್ನವಾದ ಮೂರ್ತಿಗಳ ಲೋಪ ಮುಕ್ತ , ಶುಚಿತ್ವ ಕಾಪಾಡಲು ಪೂರಕ ವಾತಾವರಣ, ಪೂಜಾ ವಿದಿ ವಿಧಾನಗಳಿಗೆ ಬೇಕಾದ ವಸ್ತುಗಳ ಸಕಾಲದಲ್ಲಿ ಪೂರೈಕೆ – ಇತ್ಯಾದಿ ಗಮನದಲ್ಲಿಟ್ಟು ಚುತಿ ಬಾರದಂತೆ ನಡೆದುಕೊಂಡಿದ್ದಲ್ಲಿ ಪೂಜಾ ವಿಧಾನದಲ್ಲಿ ಆಗುವ ಲೋಪ – ಪೂಜೆ ಮಾಡುವ ಅರ್ಚಕರ ಹೆಗಲ ಮೇಲಿರುತದೆ
ಪೂಜಾ ವಿಧಾನದಲ್ಲಿ ಲೋಪ ಆಗುತಿದೆ ಎಂದು ಕಂಡುಹುಡುಕುವುದು ಬಲು ಕಷ್ಟ. ಏಕಾಏಕಿ ಗಮನಕ್ಕೆ ಬಂದ ವಿಷಯಗಳ ಆದರದ ಮೇಲೆ ತಪ್ಪು ಹೊರಿಸುವಂತಿಲ್ಲ. ಭಾವ ಪೂಜೆ ಮತ್ತು ದ್ರವ್ಯ ಪೂಜೆ ಎರಡರಲ್ಲಿಯೂ ಪಕ್ಕ ಆಗಿರುವ ಅರ್ಚಕರಿಗೆ ಮಾಡಿದ ದೋಷಾರೋಪಣೆ ಒಳಿತಿಗಿಂತ ಕೆಡುಕು ಮಿಗಿಲಾಗಬಹುದು.
ಜೋತಿಷ್ಯರ ಮತ್ತು ದೇವರ ಮೊರೆ ಹೋಗಿ ನಿಖರ ಮಾಹಿತಿ ಪಡೆದು – ವಿಷಯವನ್ನು ಅರ್ಚಕರಿಗೆ ಮನದಟ್ಟು ಮಾಡಿ – ತಪ್ಪು ಆಗುವುದು ಯಾ ಲೋಪ ಆಗುವದು ಸಹಜ – ಅದನ್ನು ತಿದ್ದಿಕೊಂಡು ಮುಂದೆಸಾಗುವುದು ಮಾನವಪ್ರವೃತಿ ಎಂಬ ಹಿತ ವಚನ ಪಾಲಿಸಿದಾಗ ಜನರಿಗೆ , ಊರಿಗೆ, ಲೋಕಕ್ಕೆ ಸುಖ ಶಾಂತಿ ನೆಮ್ಮದಿ ಸಿಗಬಹುದು ಎಂಬುದನ್ನು ಅರಿಯೋಣ
ನಾವು ಯಾವ ಆದರ್ಶವನ್ನು ಪಾಲಿಸಿದರೆ ಇಂತಹ ಲೋಪ ಬಾರದಂತೆ ಮಾಡಬಹುದು ಎಂದು ಅವಲೋಕಿಸಿದಾಗ ಮತ್ತು ಸನ್ಮಾರ್ಗಿಗಳ ಹಿತ ವಚನದ ಸಾರ ಇಂತಿದೆ – ಸಂಬಂಧಪಟ್ಟ ದೇವಾಲಯದಲ್ಲಿ – ದೇವರ ತೀರ್ಮಾನಕ್ಕೆ ಬದ್ದವಾಗುವುದು ಲೇಸು – ವ್ಯಾಪರಿಕರಣಗೊಂಡ ಜೋತಿಷ್ಯ ಮಾರ್ಗದರ್ಶನ ಅಂತಿಮವಲ್ಲ – ತುಳುನಾಡಿನಲ್ಲಿ ದೇವರ ಮುಂದೆ ಅಕ್ಕಿ ಕಾಲು ಯಾ ಪುಷ್ಪ ತೆಗೆದು ನೋಡಿದಾಗ ಬೆಸೆ ಸಂಖ್ಯೆ ಬಂದರೆ ಉತ್ತಮ , ಸರಿ ಸಂಖ್ಯೆ ಬಂದರೆ ತಪ್ಪು ಎಂತಲೂ ಮತ್ತು ತುಳುನಾಡಿನ ಹೊರತಾಗಿ ಅದು ತದ್ವಿರುದ್ಧವಾಗಿ ಅನುಕರಣೆ ಮಾಡುವುದು ವಾಸ್ತವ. ಆದುದರಿಂದ ದೇವಾಲಯದಲ್ಲಿ ಯಜಮಾನ ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿಗಳು ದೇವರ ಪೂಜಾ ಲೋಪದ ಆರೋಪ ಬಂದು ಉಲ್ಬಣಿಸಿದಾಗ – ಭಕ್ತರೊಂದಿಗೆ ಆರೋಪ ಮಾಡಿದವರ ಸಮ್ಮುಖದಲ್ಲಿ ದೇವರ ಮುಂದೆ ಪುಷ್ಪ ತೆಗೆದು ಸಮಸ್ಯೆ ಬಗಹರಿಸಿಕೊಳ್ಳುವ ಸಂಪ್ರದಾಯ ರೂಢಿಸಿಕೊಳ್ಳುವುದು ಸೂಕ್ತ – ಸಂಶಯ ಪಿಶಾಚಿಗಳು ಮತ್ತು ಸ್ವಾರ್ಥದ ಪಿತ್ತ ತಲೆಗೆ ಏರಿದವರಿರುವ ಈ ಸಮಾಜದಲ್ಲಿ ವಾರಕೊಮ್ಮೆ ಯಾ ತಿಂಗಳಿಗೊಮ್ಮೆ ದೇವರ ಸಮ್ಮುಖದಲ್ಲಿ ಪುಷ್ಪ ತೆಗೆದು ನೋಡಿ ಶ್ರೇಷ್ಠ ಸಂಪ್ರದಾಯದತ್ತ ಸಾಗುವ ಸಂಕಲ್ಪ ಅತ್ಯುತಮ ಏಕೈಕ ಮಾರ್ಗ ಪಾಲಿಸುವತ್ತ ಗಮನ ಹರಿಸಿಕೊಳ್ಳಿ
ನಾವೆಲ್ಲರೂ , ಮಾನವಕುಲಕೋಟಿ – ಆಮೆ ನಡಿಗೆಯೊಂದಿಗೆ ದೇವಮಾನವ ನಡಿಗೆಯತ್ತ ದಾಪುಗಾಲು ಹಾಕುತಿರುವ ಸಹ ಪ್ರಯಾಣಿಕರು – ಮುಂದೆ ಸಾಗೋಣ