ದೈವಸ್ಥಾನ ದೇವಸ್ಥಾನ ಬಸದಿ( ದೇವರನ್ನು ಆರಾಧಿಸುವ ಸಕಲ ದೇವಾಲಯಗಳಲ್ಲಿ ) ……… ಮುಂತಾದುವುಗಳಲ್ಲಿ ಆನ್ಲೈನಿನಲ್ಲಿ ಪೂಜೆ ಮಾಡುವ ಅನಿವಾರ್ಯತೆ ಹುಟ್ಟುಹಾಕಿದ್ದು – ಕೊರೊನದಂಥ ಪಿಡುಗು, ಬಿಡುವಿಲ್ಲದ ಕೆಲಸದ ಒತ್ತಡ ,ಉದ್ಯೋಗಕ್ಕಾಗಿ ಊರಿನಿಂದ ಊರಿಗೆ ಅಲೆದಾಟ, ಅರಸರ ಆಡಳಿತ ಅಂತ್ಯವಾಗಿ ಪ್ರಜಾಪ್ರಭುತ್ವದ ಆಡಳಿತ …….. ಇತ್ಯಾದಿ. ಮುಂದಿನ ಪೀಳಿಗೆಗೆ ಈ ವ್ಯವಸ್ಥೆಯನ್ನು ಉಳಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕಾದರೆ ಪ್ರಸ್ತುತ ಸಮಾಜಕ್ಕೆ ಹೊಂದಿಕೊಂಡು ಬದುಕುವ ಸಂಕಲ್ಪ ಮಾಡುವುದು ಅನಿವಾರ್ಯ.
ಈ ನಿಟ್ಟಿನಲ್ಲಿ ನಮ್ಮೆಲ್ಲರ ಚಿಂತನ ಮಂಥನ ಅನುಷ್ಠಾನಕ್ಕಾಗಿ ಪುಟ್ಟ ಮಾಹಿತಿ
೧. ಒಂದು ಪೂಜೆ ಆಗುವ ದೇವಾಲಯಗಳಲ್ಲಿ ೧೦ ರಿಂದ ೧೦೦ ಪೂಜೆಗಳು ಆಗುವ ಸಾಧ್ಯತೆ
೨. ಒಂದು ದೇವಾಲಯಗಳಲ್ಲಿ ಬೇರೆ ಬೇರೆ ರೀತಿಯ ಉದ್ಯೋಗ ಸೃಷ್ಟಿ
೩. ಆನ್ಲೈನ್ ಪೂಜೆಯಲ್ಲಿ ದೇವಾಲಯದ ಆದಾಯದಲ್ಲಿ ಗಣನೀಯ ಏರಿಕೆ
೪. ಅರ್ಚಕರಿಗೆ ಮತ್ತು ಪೂಜೆ ನಿಗದಿ ಮಾಡುವವರಿಗೆ ಕಮಿಷನ್ ನೀಡುವುದರಿಂದ – ಸ್ವ ಪಾಲುಗೊಳ್ಳುವಿಕೆಗೆ ವಿಪುಲ ಅವಕಾಶ
೫. ನಿಗದಿತ ಸಮಯದ ಪೂಜೆಯಲ್ಲಿ ಮನಪೂರ್ವಕ ಪಾಲ್ಗೊಳ್ಳುವಿಕೆ
೬. ಸ್ವಚ್ಛತಾ ಕಾರ್ಯಕ್ರಮ ನಿತ್ಯ ಬದುಕಾಗಿ ಬದಲಾವಣೆ
೭. ಆನ್ಲೈನ್ ಪೂಜೆಗೆ ವ್ಯವಸ್ಥೆ ಮಾಡಲು ಆನ್ಲೈನ್ ಸ್ಪರ್ಶ
೮. ಒಂದೇ ಸಮಯದಲ್ಲಿ ನೂರಾರು ದೇವಾಲಯಗಳಲ್ಲಿ ಪೂಜೆ ಮಾಡುವ ಅವಕಾಶ
೯. ಪರ ಊರು ದೇಶಗಳಲ್ಲಿರುವವರಿಗೂ ಹುಟ್ಟು ಹಬ್ಬ ಮದುವೆ ದಿನಗಳಲ್ಲಿ ಪೂಜೆಗೆ ಅವಕಾಶ
೧೦. ದೈವದ ದೇವರ ಪೂಜೆಯ ನಿಖರ ಅರಿವು ಪ್ರತಿ ಮಾನವರಿಗೂ ಲಭ್ಯ
೧೧. ಮೂಢನಂಬಿಕೆ ತೊಲಗಿ ಮೂಲನಂಬಿಕೆಗ ಕಾಯಕಲ್ಪ
೧೨. ತನ್ನ ಮೂಗಿನ ನೇರಕ್ಕೆ ಮಾತ್ರ ಮಾತಾಡುವವರ ಬಾಯಿಗೆ ಬೀಗ
೧೩. ನಾಳೆ ಎಂಬ ಮಾತು ಬೇಡ – ಇವತ್ತೇ ಈಗಲೇ – ಚಾಲನೆ ನೀಡೋಣ
೧೪. ದೇವಾಲಯಗಳ ಆಡಳಿತ ಸಮಿತಿ, ಮೊಕ್ತೇಸರರು ,ಪೂಜೆಮಾಡುವವರು ……………………. ಕಂಕಣಬದ್ಧರಾಗೋಣ
೧೫. ದೈವ ದೇವರು – ಸ್ವಾರ್ಥಿಗಳ ಜೀತದಾಳಾಗಿರುವುದಕ್ಕೆ – ಶಾಶ್ವತ ಪರಿಹಾರ
ಸ್ವಾಲಂಬಿ ಸಂತುಷ್ಟ – ದೈವಾಲಯ ದೇವಾಲಯ ಬದುಕು – ನಮ್ಮದಾಗಲಿ