ಸೇವಾ ಬದುಕು ಮಾಯವಾಗಿ ವ್ಯಾಪಾರಿ ಬದುಕು ಆಕ್ರಮಿಸಿ ದರೋಡೆ ಬದುಕು ದಾಳಿಗೆ ಅಣಿಯಾಗುತಿರುವ ಈ ಪರ್ವಕಾಲದಲ್ಲಿ - ವ್ಯಪಾರಿ ದೃಷ್ಟಿಕೋನದಲ್ಲಿ ದೇವಾಲಯಗಳನ್ನು ಮುನ್ನಡೆಸುವುದು ಅತ್ಯಂತ ಸೂಕ್ತ ಮತ್ತು ಅನಿವಾರ್ಯ ಕೂಡ ಆಗಿರುತದೆ. ಪ್ರಸ್ತುತ ಶೇಕಡಾ ತೊಂಬತ್ತಕ್ಕೂ ಮಿಗಿಲಾಗಿ ದೇವಾಲಯಗಳು ಸಂಪನ್ಮೂಲದ ಕೊರತೆ ಅನುಭವಿಸುತಿದ್ದು ಬದಲಿ ವ್ಯವಸ್ಥೆಯತ್ತ ಮುಖ ಮಾಡಿ ನಿಂತಿವೆ. ಇದಕ್ಕೊಂದು ಪರಿಹಾರ ಇಲ್ಲಿದೆ.
ಒಂದು ದೇವಸ್ಥಾನಕ್ಕೆ ವಾರ್ಷಿಕವಾಗಿ ಸುಮಾರು ಮೂರೂ ಲಕ್ಷ ರೂಪಾಯಿಗಳು ಬೇಕಾಗುತದೆ ಎಂದು ನಿಗದಿಪಡಿಸಿ - ಈ ಮೂರೂ ಲಕ್ಶ ರೂಪಾಯಿ ಸಂಪಾದನೆಯ ಚಿತ್ರಣ
ಮೂರು ಲಕ್ಷ ರೂಪಾಯಿಗಳನ್ನು ದೇವಾಲಯದವರು ಯಾರಿಂದಲಾದರೂ ಸಾಲವಾಗಿ ಪಡೆದುಕೊಂಡ ಸುಮಾರು ಲಕ್ಷಕ್ಕೆ ೧೦ ರಿಂದ ೧೫ ಶೇಕಡಾ ಬಡ್ಡಿಯನ್ನು ಕೊಟ್ಟಾಗ ವಾರ್ಷಿಕ ತಗಲುವ ವೆಚ್ಚ ೩೦ ರಿಂದ ೪೫ ಸಾವಿರ ರೂಪಾಯಿಗಳು. ಈ ಮೂರು ಲಕ್ಷ ರೂಗಳನ್ನು ೩೦ ವಿಭಾಗ ಮಾಡಿ ತಮ್ಮ ದೇವಾಲಯದ ಕ್ಷೇತ್ರದ ಭಕ್ತಾದಿಗಳಲ್ಲಿ ಅವಶ್ಯಕತೆ ಇರುವವರಿಗೆ ಹತ್ತು ಸಾವಿರ ರೂಗಳನ್ನು ಯಾರು ಒಂದು ಸಾವಿರ ರೂಗಳನ್ನು ಒಂದು ತಿಂಗಳಿಗೆ ದೇವಾಲಯದ ಸರ್ವ ಸೇವಾ ನಿದಿಗೆ ನೀಡುವವರಿಗೆ ಕೊಟ್ಟು - ನಿಧಿ ಬಳಕೆದಾರರಿಗೆ ಒಣ ಹಣ್ಣುಗಳನ್ನು ಪ್ರಸಾದ ರೂಪದಲ್ಲಿ ಕೊಟ್ಟಾಗ (ಕನಿಷ್ಠ ೩೦ ರೂಪಾಯಿಗಳ ಪ್ಯಾಕೇಟು ) ವ್ಯಾಪಾರ ಯಾ ಸಂಕಷ್ಟದಲ್ಲಿರುವವರನ್ನು ವಿಭಿನ್ನ ದೃಷ್ಟಿಯಿಂದ ದೇವಾಲಯಕ್ಕೆ ಬರುವ ಪರಿಪಾಠ ಬೆಳೆಯುತದೆ. ಈ ನಿಧಿಯನ್ನು ೩೦ ಭಕ್ತರು ಬಳಸಿದಾಗ ವರುಷ ಒಂದಕ್ಕೆ ೩೬೦೦೦೦ ಸಿಗುವ ಸಾದ್ಯತೆಯಿದ್ದು ದೇವಾಲಯಕ್ಕೆ ದೇವರಿಗೆ ದೇವಾಲಯ ನಡೆಸುವವರಿಗೆ - ಸಂಪನ್ಮೂಲ ಚಿಂತೆ ದೂರವಾಗಿ - ಅಂದಿನ ರಾಜರು ಮಾಡುವ ಕೆಲಸ ಇಂದಿನ ರಾಜರು ಮರೆತ ಪರಿಣಾಮ - ದೇವರೆ ಸ್ವತಃ ಧರೆಗಿಳಿದು ತನ್ನ ಆರಾಧಕರಿಗೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಮುಂದೆ ಸಾಗೋಣ.
ಈ ದೃಷ್ಟಿಯಲ್ಲಿ ಕೆಲವರ ಅನುಮಾನಗಳಿಗೆ ನಮ್ಮ ಅಪೂರ್ಣ ಬತ್ತಳಿಕೆಯ ಉತ್ತರ
ಇದು ಬ್ಯಾಂಕಿಂಗ್ ವ್ಯಯಸ್ಥೆ ಕಂಡಿತಾ ಅಲ್ಲ - ಇದು ಜನಸಾಮಾನ್ಯರನ್ನು ಭಕುತರನ್ನಾಗಿಸುವ ವ್ಯವಸ್ಥೆ
ದೇವಾಲಯಗಳು - ಸ್ವಾವಲಂಬಿ ಮತ್ತು ಸಂತುಷ್ಟ - ನಮ್ಮ ಆವಿಸ್ಕಾರ
ಭಕುತರ ಸಂಖ್ಯೆ ನಿರಂತರ ಹೆಚ್ಚಳ
ಆರ್ಥಿಕ ಸಂಕಷ್ಟಕ್ಕೆ ದೇವಾಲಯಗಳಿಂದ ಪರಿಹಾರ - ವಿನೂತನ ಅನುಕರಣೀಯ ಯೋಜನೆ
ತಪ್ಪುಗಳನ್ನು ನೋಡುವ ಪ್ರವೃತಿ ಮಾನವರು ಬಿಟ್ಟಾಗ - ನಮ್ಮ ನಾಡು ದೇವರ ನಾಡು
Related