ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

ಶೇರ್ ಮಾಡಿ

ದ.ಕ. ಜಿಲ್ಲೆಯ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಒಂದು ಪುಣ್ಯಕ್ಷೇತ್ರ. ಮಂಗಳೂರು -ಬೆಂಗಳೂರು ರಾಷ್ಟೀಯ ಹೆದ್ದಾರಿ 75 ಎಂಜಿರ ಎಂಬಲ್ಲಿಂದ  300 ಮೀ .ದೂರದಲ್ಲಿರುವ ತೂಗು ಸೇತುವೆಯ  ಮೂಲಕ  ಹಾದು  ಸರ್ವಕಾಲಿಕ  ಜೀವನದಿ  ಗುಂಡ್ಯ(ಗೌರಿ) ಹೊಳೆಯ ದಂಡೆಯಲ್ಲಿ ನೆಲೆಸಿರುವ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ  ದೇವರುಗಳ  ಪರಮಪಾವನ ಪುಣ್ಯಕ್ಷೇತ್ರವಿದು .

||ಪರಮಪೂಜ್ಯ ರಾಜಶ್ರೀ ಡಾ || ಡಿ .ವೀರೇಂದ್ರ ಹೆಗ್ಗಡೆ ಯವರ ಕೃಪಾಶೀರ್ವಾದಗಳೊಂದಿಗೆ
ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನಾ ತೀರ್ಥ ಶ್ರೀ ಪಾದರು ,ಸುಬ್ರಹ್ಮಣ್ಯ ಮಠ ಇವರ ಗೌರವಾಧ್ಯಕ್ಷತೆಯಲ್ಲಿ
||


ಇದೆ ಬರುವ ಸ್ವಸ್ತಿ | ಶ್ರೀ ಪ್ಲವ ನಾಮ ಸಂವತ್ಸರದ ಮಕರ ಮಾಸ ೨೬ ಸಲುವ ದಿನಾಂಕ 09-02-2022 ನೇ ಬುಧವಾರದಿಂದ ಕುಂಭ ಮಾಸ ೨ ಸಲುವ ದಿನಾಂಕ 14 -02 -2022 ಸೋಮವಾರ ತನಕ

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ

ಅಷ್ಟಬಂಧ ಬ್ರಹ್ಮಕಲಶೋತ್ಸವವು

ವಿವಿಧ ವೈದಿಕ ತಾಂತ್ರಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು .ಆ ಪ್ರಯುಕ್ತ ಭಗವದ್ಭಕ್ತರಾದ ತಾವೆಲ್ಲರೂ ಈ ಪವಿತ್ರ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿ. 

ಕ್ಷೇತ್ರ ಪರಿಚಯ

ಈ ಕ್ಷೇತ್ರವು  ಶ್ರೀ  ಕ್ಷೇತ್ರ  ಧರ್ಮಸ್ಥಳ ಹಾಗೂ  ಶ್ರೀ  ಕ್ಷೇತ್ರ  ಕುಕ್ಕೆ ಸುಬ್ರಹ್ಮಣ್ಯ ದ  ಮಧ್ಯಭಾಗದಲ್ಲಿ ಕಂಗೊಳಿಸುವ  ಈ  ಕ್ಷೇತ್ರಕ್ಕೆ  ಪೌರಾಣಿಕ  ಹಿನ್ನಲೆ  ಕೂಡ  ಇದೆ .ದ್ವಾಪರ ಯುಗದಲ್ಲಿ ಪಾಂಡವರು ಅಜ್ಞಾತವಾಸ  ಸಂದರ್ಭಲ್ಲಿ  ಕ್ಷೇತ್ರಕ್ಕೆ ಬಂದು  ನಿತ್ಯ ಪೂಜಾ ವಿಧಿವಿಧಾನಗಳನ್ನು  ಪೂರೈಸಲು ಪ್ರಕೃತಿಯಲ್ಲಿ ಸಿಕ್ಕ ಐದು ಶಿಲೆಗಳನ್ನು ನದಿಯಿಂದ ತಂದು ಶಿವಲಿಂಗವಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು  ಎಂಬ ಪ್ರತೀತಿ ಇದೆ. ನಂತರದ  ದಿನಗಳಲ್ಲಿ ಜೈನ ರಾಜರುಗಳ ಆಡಳಿತಾವಧಿಯಲ್ಲಿ ಶಿವದೇವಾಲಯವನ್ನಾಗಿ ಮಾಡಿ ಈ  ಪ್ರದೇಶದ ಭಕ್ತಾದಿಗಳಿಗೆ ಪೂಜೆಗೆ ಅವಕಾಶ ಮಾಡಿ ಕೊಟ್ಟಿದ್ದರು ಎಂಬ ಪ್ರತೀತಿ ಇದೆ .

ಈ ಪುಣ್ಯ ಕ್ಷೇತ್ರದ  ಸಮೀಪ  ಶಿವನ  ಶಿರದಿಂದ  ಹರಿದ  ಗಂಗೆಯಂತೆ  ಪಾವನವಾದ  ಗುಂಡ್ಯ(ಗೌರಿ)  ನದಿಯು ಹರಿಯುತ್ತಿದ್ದು ಇಲ್ಲಿ ಸ್ನಾನ ಮಾಡಿ ಅಂತಃಕರಣ ಶುದ್ಧಿಯಿಂದ ಪ್ರಾರ್ಥಿಸಿಕೊಂಡರೆ  ದೇಹ ಸಂಬಂಧಿ  ಖಾಯಿಲೆಗಳು ,ಸಂತಾನಪ್ರಾಪ್ತಿ ,ಲಗ್ನಕಾರ್ಯ ಇನ್ನಿತರ ಇಷ್ಟಾರ್ಥ ಸಿದ್ದಿಗಳು ನೆರವೇರುತ್ತದೆ  ಎಂದು ದೈವಜ್ಞರ  ಪ್ರಶ್ನೆಮುಖೇನ  ತಿಳಿದು  ಬಂದಿರುತ್ತದೆ .ಅಲ್ಲದೆ  ಈ ಕ್ಷೇತ್ರದಲ್ಲಿ  ಶಾಸ್ತಾವು(ಸ್ವಾಮಿ ಅಯ್ಯಪ್ಪ) ,ದುರ್ಗೆ ,ನಾಗಬ್ರಹ್ಮ ದೇವರು  ಅಲ್ಲದೆ  ರಕ್ತೇಶ್ವರಿ , ಮಹಿಷಂತ್ತಾಯ ,ಶಿರಾಡಿ , ಬಚ್ಚನಾಯಕ,ಪಂಜುರ್ಲಿ ,ಕಲ್ಕುಡ -ಕಲ್ಲುರ್ಟಿ ,ಗುಳಿಗ, ಮಲೆ  ದೈವಗಳ ಸಾನಿಧ್ಯವಿರುತ್ತದೆ .

 ಶ್ರೀ ಕ್ಷೇತ್ರದ ಸ್ಥಳ ಸಾನಿದ್ಯದ ಬಗ್ಗೆ ದೈವಜ್ಞರಾದ  ಶಿಶಿಲ ಸೀತಾರಾಮ ಕೆದಿಲಾಯರು ಹಾಗೂ ಅವರ ನಂತರ ಸುಬ್ರಮಣ್ಯ ಭಟ್  ಕೂಟೂರು ಇವರುಗಳ ಮಾರ್ಗದರ್ಶನ  ಹಾಗೂ  ವಾಸ್ತುಶಿಲ್ಪಿ ಬೆದ್ರಡ್ಕ ಕಾಸರಗೋಡು ಶ್ರೀಧರ ಕಾರಂತರು  ಹಾಗೂ ಅವರ ನಂತರ ರಮೇಶ್ ಕಾರಂತರು ಸಲಹೆಗಳನ್ನು ನೀಡಿರುತ್ತಾರೆ .

See also  ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಲಿನಲ್ಲಿ ಮಹಾಶಿವರಾತ್ರಿ ಮಹೋತ್ಸವ

GOOGLE MAP

ಶ್ರೀ ಕ್ಷೇತ್ರವು ಈ ಹಿಂದೆ 1967  ನೇ ಇಸವಿಯಲ್ಲಿ ಜನರ ಕಷ್ಟಕಾಲದಲ್ಲಿ ಆಗಿನ ಅನುವಂಶಿಕ ಮೊಕ್ತೇಸರರಾದ  ಸಾಂತ್ಯಡ್ಕ ಅಡೆಂಜ ರಾಮಣ್ಣ ಗೌಡರ ಮುಂದಾಳತ್ವ ,ಕೈಕುರೆ ರಾಮಣ್ಣ ಗೌಡರ ಮಾರ್ಗದರ್ಶನ  ಹಾಗೂ  ಕೆಮ್ಮಿಂಜೆ ಕೇಶವ  ತಂತ್ರಿಗಳ  ವೈದಿಕ ಮುಂದಾಳತ್ವದಲ್ಲಿ ಹಾಗೂ ಊರವರ ಸಹಕಾರದೊಂದಿಗೆ ಪ್ರತಿಷ್ಟಾಬ್ರಹ್ಮಕಲಶವು ನಡೆದಿರುತ್ತದೆ .

ಕಳೆದ 09 -03 -2009  ರಿಂದ 13 -03 -2009 ವರೆಗೆ  ನಡೆದ  ಬ್ರಹ್ಮಕಲಶೋತ್ಸವದ  ಗೌರವಾಧ್ಯಕ್ಷರಾದ  ಪರಮಪೂಜ್ಯ  ರಾಜಶ್ರೀ  ಡಾ| ಡಿ.ವೀರೇಂದ್ರ ಹೆಗ್ಗಡೆಯವರು ,ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ   ಶ್ರೀ  ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ  ಸುಬ್ರಹ್ಮಣ್ಯ ಇವರ ಪೂರ್ಣಾನುಗ್ರಹದೊಂದಿಗೆ ,ಅನುವಂಶಿಕ  ಮೊಕ್ತೇಸರರಾದ ಸಾಂತ್ಯಡ್ಕ ಅಡೆಂಜ ರಾಮಣ್ಣ ಗೌಡ,ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ಕೈಕುರೆ ವೆಂಕಟ್ರಮಣ ಗೌಡ ಹಾಗೂ ಊರ -ಪರವೂರ ಭಕ್ತರ ಸಹಕಾರ ,ದಾನಿಗಳ ನೆರವಿನಿಂದ ಪುನಃಪ್ರತಿಷ್ಠಾಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೈಭವದಿಂದ ನಡೆದಿದೆ .ತದನಂತರ ಶ್ರೀ ದೇವರಿಗೆ ಹಾಗೂ ಕ್ಷೇತ್ರದ ಎಲ್ಲಾ ದೈವಗಳಿಗೆ ಆಯಾಯ ಕಾಲಕ್ಕೆ ಸರಿಯಾಗಿ ನಿತ್ಯ ಪೂಜೆ ,ವಾರ್ಷಿಕ ಪೂಜೆ  ಮತ್ತು ಇನ್ನಿತ್ತರ ಎಲ್ಲಾ ವಿಧಿವಿಧಾನಗಳ ಪ್ರಕಾರ ಕಾರ್ಯಕ್ರಮಗಳೂ ಎಲ್ಲಾ ಭಕ್ತರ ಸಹಭಾಗಿತ್ವದಲ್ಲಿ ನಡೆದು 12 ನೇಯ ವರ್ಷದ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಕ್ಷೇತ್ರವು ಸಿದ್ಧವಾಗಿದೆ.

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?