ಕುಂಜ್ಞಣ್ಣ ಹೆಗ್ಗಡೆ – ಉದ್ಯಪ್ಪ ಅರಸರು – ಇಚಿಲಂಪಾಡಿ ಬೀಡು ,Kunjnanna Heggade – Udyappa Arasaru – Ichilampadi Beedu

ಶೇರ್ ಮಾಡಿ

ಕುಂಜ್ಞಣ್ಣ ಹೆಗ್ಗಡೆ – ಅವಿವಾಹಿತರು , ಆಗಿನ ಕಾಲದ ಪದ್ದತಿಯಂತೆ ಕೈಹಿಡಿದ ಸತಿ ಇದ್ದ ಮಾಹಿತಿ ಇದೆ. ದಿವಂಗತ ಉದ್ಯಪ್ಪ ಅರಸರಾದ ಪದ್ಮರಾಜ ಹೆಗ್ಗಡೆಯವರ ಇಬ್ಬರು ಸಹೋದರಿಯರ ಪೈಕಿ ಒಬ್ಬರ ಮಕ್ಕಳು ಕುಂಜ್ಞಣ್ಣ ಹೆಗ್ಗಡೆ ಮತ್ತು ಪದ್ಮಾವತಿ.
ಪದ್ಮಾವತಿ ಪ್ರಸ್ತುತ ಉದ್ಯಪ್ಪ ಅರಸರಾದ ಶುಭಾಕರ ಹೆಗ್ಗಡೆಯವರ ಅಜ್ಜಿ (ತಂದೆಯ ತಾಯಿ )
ಪದ್ಮರಾಜ ಹೆಗ್ಗಡೆಯವರ ಇನ್ನೊಬ್ಬ ಸಹೋದರಿಯ ಮಕ್ಕಳು ಚಂದ್ರರಾಜ ಭೋಜರಾಜ ನೇಮಿರಾಜ ಮತ್ತು ಕಮಲಮ್ಮ
1957 ನೇ ಇಸವಿಯಲ್ಲಿ ಪದ್ಮರಾಜ ಹೆಗ್ಗಡೆಯವರು ದೈವಾಧೀನರಾದ ಬಳಿಕ ಉದ್ಯಪ್ಪ ಅರಸು ಪಟ್ಟವಾಗಿ ೨೧.೧೧.೧೯೮೦ರಂದು ಸ್ವರ್ಗಸ್ತರಾದರು
ಇವರ ಆಡಳಿತ ಅವಧಿಯಲ್ಲಿ
ಕಾರಣಾಂತರಗಳಿಂದ ಸುಟ್ಟು ಹೋಗಿದ್ದ ಉಳ್ಳಾಕುಲು ವಾಹನ ಕುದುರೆ ಮಾಡಿ ಸಮರ್ಪಿಸಿದ್ದರು
ಉಳ್ಳಾಕುಲು ಮಾಡ ನಿರ್ಮಾಣ ಮಾಡಿ ಅದಕ್ಕೆ ಸುತ್ತುಪೌಳಿ ಮಾಡಿರುವ ಮಾಹಿತಿ ಇದೆ
ಕೃಷಿಯಲ್ಲಿ ಬಹಳ ಆಸಕ್ತಿ ಇದ್ದು ಇವರಿಗೆ ಮನೊಲಿ ಕುಂಜ್ಞಣ್ಣ ಎಂಬ ಅಡ್ಡ ಹೆಸರು ಬಂದಿತ್ತು
ತಮ್ಮ ಜೀವನದ ಕೆಲವು ವರುಷ ಧರ್ಮಸ್ಥಳ ಬೀಡಿನಲ್ಲಿ ಇದ್ದರು
ನೀಲ ಕಾಯದ ಶರೀರ – ಮಕ್ಕಳಲ್ಲಿ ಮಕ್ಕಳಂತೆ ವ್ಯವಹರಿಸುವ ಸ್ವಭಾವ – ವ್ಯವಹಾರ ಮತ್ತು ಅಭಿವೃದ್ಧಿ ಚಿಂತನೆಯತ್ತ ದ್ರಢವಾದ ನಿಲುವಿನ ಕೊರತೆಯಿಂದಾಗಿ ನೂರಾರು ಎಕ್ರೆ ಜಾಮೀನು ಕೈ ತಪ್ಪಿ ಹೋಗಿರುವುದು ಕಣ್ಣಿಗೆ ಕಾಣುವ ವಾಸ್ತವ ಸ್ಥಿತಿ.
ತನ್ನ ವಿಭಿನ್ನ ರೀತಿಯ ಸ್ವಭಾವದಿಂದಾಗಿ ಒಬ್ಬಂಟಿ ಬಾಳು ನಡೆಸಬೇಕಾದ ಅನಿವಾರ್ಯತೆ ಒದಗಿ ಬಂದು ಸಕಲ ಸಂಕಷ್ಟಗಳು ಎದುರಾಗಿ – ಬಾಳಿನ ಕೊನೆಯ ಕೆಲವು ಸಮಯ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿದ್ದರು

See also  Shubhakara Heggade -Udyappa Arasaru - Ichilampady Beedu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?