ಸೇವಾ ಮನೋಭಾವನೆ ಮಾನವರಲ್ಲಿ ಕಡಿಮೆಯಾಗುತ್ತಾ ಬಂದು ತನ್ನ ಅಸ್ತಿತ್ವವನ್ನು ಕಳೆದುಕೊಂಡುದರ ಫಲ ನಾವು ಈಗ ಬೀಜವನ್ನು ಬಿತ್ತಿ ಬೆಳೆಸಿ ಉತ್ಪನ್ನವನ್ನು ಜನತೆಗೆ ಉಣಬಡಿಸುವ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಯಾರು ಹೊಣೆ ಎಂಬ ಬಗ್ಗೆ ಚಿಂತಿಸದೆ ಪರಿಹಾರದತ್ತ ಗಮನಹರಿಸಲು ಮಾರ್ಗೋಪಾಯಗಳು
ಪ್ರತಿ ಮನೆಯಿಂದ ಹಿಡಿದು – ಪ್ರತಿ ಜಾತಿ ವೃತಿ ಊರು ಒಕ್ಕೂಟ ಇತ್ಯಾದಿ ಸಕಲ ವ್ಯವಸ್ಥೆಗಳಲ್ಲಿ ಸೇವಾ ಒಕ್ಕೂಟ ಅಥವಾ ಯಾ ಸಂಘ ಸಮುಸ್ತೆಗಳಲ್ಲಿ ಸೇವಾ ವಿಭಾಗ ನಾಮಾಂಕಿತ ರೂಪದಲ್ಲಿ ಹೊರತುಪಡಿಸಿ ನಿಜ ರೂಪದಲ್ಲಿ ಅನುಷ್ಠಾನದಲ್ಲಿ ಬರಬೇಕಾಗಿದೆ.
ನೂತನ ಆವಿಸ್ಕಾರ ಪ್ರಸ್ತುತ ಸನ್ನಿವೇಶದಲ್ಲಿ ವಿಪುಲ ಅವಕಾಶಗಳು ಸೇವಾ ಒಕ್ಕೂಟಗಳಿಗೆ ಇದ್ದು , ಸಾಕಾರಗೊಳಿಸುವ ಸಂಕಲ್ಪದಿಂದ ಉದ್ಯೋಗ ಉದ್ಯಮದಲ್ಲಿ ಗುರುತರ ಸಾಧನೆ ಮಾಡಬಹುದು
ಸೇವೆ ಮಾಡಲು ಶ್ರೀಮಂತರಿಗೆ ಮಾತ್ರ ಸಾಧ್ಯಎಂಬ ಪರಿಕಲ್ಪನೆಯಿಂದ ಹೊರಬಂದು ಸಮಯ ಶ್ರಮ ಎಂಬ ನಿಜವಾದ ಅತಿದೊಡ್ಡ ಸಂಪತ್ತು ಪ್ರತಿ ಮಾನವರಲ್ಲಿ ಕೂಡ ಇರುವುದನ್ನು ಅರಿತು ಸದುಪಯೋಗದತ್ತ ಗಮನಹರಿಸಬೇಕು.
ಒಂದು ಕಾಲದಲ್ಲಿ ಸೇವಾ ವಿಭಾಗದಲ್ಲಿದ್ದ – ವಿದ್ಯೆ, ಪೂಜೆ , ಆಡಳಿತ , ಔಷದಿ ಇತ್ಯಾದಿ ಬ್ರಹತ್ ಉದ್ದಿಮೆಗಳಾಗಿ ಬೆಳದ ರೀತಿಯಲ್ಲಿ ಸಾಕಷ್ಟು ಸೇವಾ ವಲಯಗಳು ಮುಂದಿನ ದಿನಗಳಲ್ಲಿ ವ್ಯಾಪಾರ ಉದ್ದಿಮೆಗಳ ಬದಲಾಗಿ ಸೇವಾ ಉದ್ದಿಮೆಗಳಾಗಿ ಬೆಳೆಸುವ ಪಣತೊಡೋಣ.
ಒಂದೇ ನಾಣ್ಯದ ಎರಡು ಮುಖಗಳಂತಿರುವ ನಾನು ಸಮಾಜದಿಂದ ಪಡೆಯುವುದು ಮತ್ತು ಸಮಾಜಕ್ಕೆ ಕೊಡುವುದರ ಬಗ್ಗೆ ಅರಿವಿನ ಕೊರತೆ ಬೆಲೆ ಇಲ್ಲದ ನಾಣ್ಯ ನಮ್ಮ ಬದುಕು ಬದಲಾಗಲೇಬೇಕಾಗಿದೆ.
ಕನಿಷ್ಠ ದಿನಕ್ಕೆ ಒಂದು ಗಂಟೆ ವಾರಕ್ಕೆ ಒಂದು ದಿನ ತನ್ನ ಬದುಕಿನಲ್ಲಿ ಸಂಪಾದನೆಯಲ್ಲಿ ಸೇವೆಗೆ ಮೀಸಲು ಇಡದಿದ್ದಲ್ಲಿ ಪ್ರಕೃತಿ ನಮ್ಮಗೆ ಪೂರಕವಾಗಿ ಮತ್ತು ಕಿಂಚಿತ್ತೂ ಫಲಾಪೇಕ್ಷೆ ಇಲ್ಲದೆ ದುಡಿಯುತಿರುವ ಕೋಟಿಗಟ್ಟಲೆ ನಮ್ಮ ದೇಹದಲ್ಲಿರುವ ಜೀವಾಣುಗಳು ನಮ್ಮ ಸ್ವಾರ್ಥ ಮನಗಂಡು ತಮ್ಮ ತಮ್ಮ ಕೆಲಸ ಸ್ಥಗಿತಗೊಳಿಸಿದರೆ ನಮ್ಮ ಪಾಡೇನು – ಜಾಗ್ರತರಾಗೋಣ.
ದಾನವ ಬದುಕಿನಿಂದ ದೂರವಾಗಿ ಮಾನವ ಬದುಕಿಗೆ ಹತ್ತಿರವಾಗಿ ದೇವಾ ಮಾನವ ಬದುಕು ನಮ್ಮದಾಗುವ ಶುಭಹಾರೈಕೆ ನಮ್ಮದಾಗಲಿ