
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಕೃಷ್ಣ ತ್ರಯೋದಶಿ ಕುಂಭ ಮಾಸ ದಿನ 5 ಸಲುವ ತಾರೀಕು 18-02-2023 ನೇ ಶನಿವಾರದಂದು 51 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವನ್ನು ಶ್ರದ್ಧಾಪೂರ್ವಕವಾಗಿ ಅರ್ಚಕರಾದ ಶ್ರೀಧರ ನೂಜಿನ್ನಾಯ ಇವರ ನೇತೃತ್ವದಲ್ಲಿ ಆಚರಿಸಲಾಗುವುದು . ಆ ಪ್ರಯುಕ್ತ ಈ ಎಲ್ಲಾ ಧಾರ್ಮಿಕ ಪುಣ್ಯ ಕಾರ್ಯಕ್ರಮಗಳಿಗೆ ಭಕ್ತಾದಿಗಳಾದ ತಾವೆಲ್ಲರೂ ಆಗಮಿಸಿ ,ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಹಾಗೂ ಕೃಪೆಗೆ ಪಾತ್ರರಾಗಿ ಈ ಉತ್ಸವವು ಯಶಸ್ವಿಯಾಗಲು ಸಹಕರಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಧಾರ್ಮಿಕ ಕಾರ್ಯಕ್ರಮಗಳು |
|
ದಿನಾಂಕ 18 -02 -2023 ನೇ ಶನಿವಾರ |
|
ಬೆಳಿಗ್ಗೆ ಗಂಟೆ7 -00 ರಿಂದ8 -30 ರವರೆಗೆ |
ಪುಣ್ಯಾಹವಾಚನ ಉಷಾಪೂಜೆ |
ಬೆಳಿಗ್ಗೆ ಗಂಟೆ8 -30 ರಿಂದಸಂಜೆ ಗಂಟೆ 4 -00 ರತನಕ |
ಭಾಗವತ ಪಾರಾಯಣ |
ಬೆಳಿಗ್ಗೆ ಗಂಟೆ9 -30 ರಿಂದ10 -30 ರ ತನಕ |
ಗಣಹೋಮ ,ನವಕ ಕಲಶ |
ಮಧ್ಯಾಹ್ನಗಂಟೆ12 -30 ಕ್ಕೆ |
ಮಹಾಪೂಜೆ ಪ್ರಸಾದ ವಿತರಣೆ |
ಸಂಜೆ ಗಂಟೆ6 -00 ರಿಂದ |
ಉತ್ಸವಮೂರ್ತಿ ನಟರಾಜ ದೇವರಿಗೆ ತಾಳಿ ದೀಪಾಲಂಕಾರ ಭೂಷಿತ ಮೆರವಣಿಗೆ ದೀಪಾರಾಧನೆ ಮತ್ತು ಸಂಧ್ಯಾಪೂಜೆ |
ಸಂಜೆ ಗಂಟೆ 7.00 ರಿಂದರಾತ್ರಿ 12 .00 ರ ತನಕ |
ನಮ್ಮೂರ ಹೆಮ್ಮೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ |
ರಾತ್ರಿ ಗಂಟೆ 8 -30 ರಿಂದ |
ಮಹಾಅನ್ನಸಂತರ್ಪಣೆ |
ರಾತ್ರಿ ಗಂಟೆ 9 :30 ನಂತರ |
ಶಿವಾಭಿಷೇಕ |
ರಾತ್ರಿ ಗಂಟೆ 12 :00 ರಿಂದ1 -00 ರ ತನಕ |
ಮಹಾಶಿವರಾತ್ರಿ ಪೂಜೆ ಪ್ರಸಾದ ವಿತರಣೆ |
ರಾತ್ರಿ ಗಂಟೆ 1 .00 ರಿಂದ2-00 ರ ತನಕ |
ಶ್ರೀ ಕಪಿಲೇಶ್ವರ ಸಿಂಗಾರಿ ಚೆಂಡೆ ಮೇಳ ಚಾರ್ವಕ ಇವರಿಂದ“ಸಿಂಗಾರಿ ಮೇಳ“ |
ಸಾಂಸ್ಕೃತಿಕ ಕಾರ್ಯಕ್ರಮ |
|
ರಾತ್ರಿ ಗಂಟೆ 02 .00 ರಿಂದ |
ಗಯಾಪದ ಕಲಾವಿದೆರ್ ಉಬಾರ್ (ಉಪ್ಪಿನಂಗಡಿ ) ಇವರಿಂದ ತುಳು ಹಾಸ್ಯ ಸಾಮಾಜಿಕ ನಾಟಕ“ಏತ್ ಪಂಡಲ ಆತೆ” |

GOOGLE MAP
