ವರದಿಗಾರರು ಮಾಧ್ಯಮದ ಜೀವ – ಅವರ ಮನೋಭಾವನೆಯ ಪ್ರತೀಕ ಪ್ರಸ್ತುತ ಮಾಧ್ಯಮ ಜಗತ್ತು – ದೂರನಿಯಂತ್ರಕ ಮಾತ್ರ ಮಾಧ್ಯಮ ನಡೆಸುವ ಯಜಮಾನನ ಕೈಲಿದೆ. ವಿಭಿನ್ನ ಮಾಧ್ಯಮದ ಮೂಲಕ ಜನಸಾಮಾನ್ಯರಿಗೆ ವಿಷಪೂರಿತ ಬರಹಗಳು ಬಹುಪಾಲು ಪೂರೈಕೆಯಾಗಿ ವಿಷಜಂತುಗಳಾಗಿ ಮಾನವರು ಬದುಕುತ್ತಿರುವ ಈ ಕಠಿಣ ಸನ್ನಿವೇಶದಲ್ಲಿ – ಆವಿಸ್ಕಾರಗಳಿಗೆ ಮೊರೆ ಹೋಗಿ – ಪಾವತಿ ಮಾದ್ಯಮದತ್ತ ಚಿಂತನೆ ನಡೆಸಿ – ಚಲಾವಣೆಯಲ್ಲಿರುವ ಕೆಟ್ಟ ಉಚಿತ ಮಾದ್ಯಮಕ್ಕೆ ಇತಿಶ್ರೀ ಹಾಡಿ – ಕ್ರಾಂತಿಕಾರಿ ಬದಲಾವಣೆ ಮಾಡದರೆ ಮಾತ್ರ – ಮಾಧ್ಯಮದ ಸ್ಥಾನ ಮಾನ ಘನತೆ ಗೌರವಗಳ ಉಳಿವು ಮತ್ತು ಅಭಿವೃದ್ಧಿ ಇಲ್ಲದಿದ್ದರೆ ಅಳಿವು ಕಟ್ಟಿಟ್ಟ ಬುತ್ತಿ. ವರದಿ ಮಾದ್ಯಮದಲ್ಲಿ ಬರಬೇಕಾದರೆ ಇಂತಿಷ್ಟು ಜಾಹಿರಾತು ಕೊಡಬೇಕೆಂಬ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಾದ ಅನಿವಾರ್ಯತೆ – ಮಾಧ್ಯಮ ಅತ್ಯಂತ ದುಬಾರಿಯಾಗಿರುವುದು ಸಮಾಜಕ್ಕೆ ಕಂಟಕವಾಗಿದೆ. ಇದಕ್ಕೆ ಬದಲಾಗಿ ಮನೋವೇಗದಲ್ಲಿ ತಲುಪಬಲ್ಲ ಆನ್ಲೈನ್ ಪಾವತಿ ಮಾದ್ಯಮಕ್ಕೆ ಚಾಲನೆ ಕೊಟ್ಟು – ಕನಿಷ್ಠ ವೆಚ್ಚದಲ್ಲಿ ಮಾಧ್ಯಮ ಜನಸಾಮಾನ್ಯರಿಗೆ ದೊರಕಿಸುವುದರೊಂದಿಗೆ ಮಾಧ್ಯಮ ಜಗತ್ತನ್ನು ಉತ್ತುಂಗ ಶಿಖರಕ್ಕೇರಿಸಲು ಪಣತೊಡೋಣ. ಋಣಾತ್ಮಕ ಪ್ರಚಾರಕ್ಕೆ ಮಾತ್ರ ಸೀಮಿತವಾಗಿರುವ ವಾಸ್ತವ ದೋರಣೆ ಧನಾತ್ಮಕ ಪ್ರಚಾರದತ್ತ ಗಮನ ಹರಿಸಬೇಕು . ಇದಕ್ಕೋಸ್ಕರ ಈ ವೇದಿಕೆಯ ಜನನ
ಕೆಲವೊಂದು ಮಾಹಿತಿಗಳು ಇಂತಿವೆ
ವರದಿಗಾರ ಸೇವಾ ಒಕ್ಕೂಟದಿಂದ ವರದಿಗಾರ ಬುಲೆಟಿನ್ ಆರಂಭವಾಗಬೇಕು
ವರದಿಗಾರರಿಗೆ ಅನ್ಯ ಸಂಪಾದನೆ ಮೂಲ ಆವಿಸ್ಕಾರ
ಧನಾತ್ಮಕ ವರದಿಗಳನ್ನು ಮಾತ್ರ ಪ್ರಕಟಿಸಲು ಮಾಧ್ಯಮವೆಂಬ ವಾಸ್ತವದ ಅರವು ನಮ್ಮಲ್ಲಿರಬೇಕು
ಋಣಾತ್ಮಕ ವರದಿಯನ್ನು ಮಾಡದಿರುವ ಪ್ರತಿಜ್ಞೆ ನಾವು ಮಾಡಲೇಬೇಕು
ಅಂತರಾಷ್ಟ್ರೀಯ ಮಟ್ಟದ ಮಾಧ್ಯಮ ನಮಗೆ ದೊರಕಬೇಕು
ಪಾವತಿ ಮಾಧ್ಯಮ ಇದಕ್ಕೆ ಪರಿಹಾರ ಬಗ್ಗೆ ಚಿಂತನ ಮಂಥನ ಬಳಿಕ ಅನುಷ್ಠಾನವಾಲಿ
ಸಂಕ್ಷಿಪ್ತ ಚುಟುಕು ವರದಿಗಳತ್ತ ಗಮನ ಹರಿಸೋಣ