ಪ್ರಸಾರ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಕಂಬವೆಂದು ಗುರುತಿಸಲ್ಪಟ್ಟಿದ್ದು ಈ ಪ್ರಸಾರ ಮಾಧ್ಯಮದ ಬೆನ್ನೆಲುಬು ವರದಿಗಾರರು ದೇಶದ ಮತ್ತು ಮಾನವ ಜನಾಂಗದ ದಿಕ್ಕನ್ನು ತಮ್ಮ ಅಭಿರುಚಿಗೆ ತಕ್ಕಂತೆ ತಿರುಗಿಸಬಲ್ಲ ಅಪರಿಮಿತ ಸಾಮರ್ಥ್ಯ ಹೊಂದಿರುತಾರೆ. ಆವಿಸ್ಕಾರಗಳಿಗೆ ಒಂದು ಹೆಜ್ಜೆ ಮುಂದೆ ಹೋಗಿರುವ ಮಾಧ್ಯಮ ಕ್ಷೇತ್ರದಲ್ಲಿ ಆನ್ಲೈನ್ ಸಾಮಾಜಿಕ ಜಾಲತಾಣಗಳ ಪೈಪೋಟಿ ವರದಿಗಾರರ ಸಂಖ್ಯೆ ನಿಯಂತ್ರಣವಿಲ್ಲದೆ ಏರುಗತಿಯಲ್ಲಿರುವುದು ಪ್ರಜ್ಞಾವಂತರ ವೇದಿಕೆ ಮುಗ್ದರ ಕೈಗೆ ತಲುಪಿ ಅಣುಬಾಂಬುಗಳ ರೂಪಗಳಲ್ಲಿ ಸಿಡಿದು ದೇಶ ಸಮಾಜ ಸಮಸ್ಯೆಯ ಸುಳಿಯಿಂದ ಹೊರಬರಲು ನಿರಂತರ ಪ್ರಯತ್ನ ನಡೆಯುತಿದೆ. ವರದಿಗಾರರನ್ನು ಆರ್ಥಿಕವಾಗಿ ಮತ್ತು ಜ್ಞಾನದ ಪಕ್ವತೆಯಿಂದ ತಮ್ಮ ಮೂಲ ಕ್ಷೇತ್ರಕ್ಕೆ ದುಡಿಯುವಂತೆ ಮಾಡಲು – ನಮ್ಮ ಕಿರು ಸೇವೆ ಈ ವೇದಿಕೆಯಿಂದ.
ವರದಿಗಾರರ ಬುಲೆಟಿನ್ ಪ್ರಕಟಣೆ – ಅವ್ಯಕ್ತ ಬುಲೆಟಿನ್ ಸಹಭಾಗಿತ್ವದಲ್ಲಿ
ವರದಿಗಾರರ ಸೇವಾ ಒಕ್ಕೂಟ ಪ್ರಾರಂಭ
ವರದಿಗಾರ ಸಂಕ್ಷಿಪ್ತ ಪರಿಚಯ ಸಮಾಜಕ್ಕೆ – ಪ್ರರಪಂಚಕ್ಕೆ
ಅನ್ಯ ಮೂಲಗಳಿಂದ ವರದಿಗಾರರ ಆದಾಯಕ್ಕೆ ಚಿಂತನ ಮಂಥನ ಅನುಷ್ಠಾನ
ಪ್ರಸಾರ ಮಾಧ್ಯಮದ ಮೂಲ ಉದ್ದೇಶ ಪ್ರಸಾರ ಮಾಧ್ಯಮವಾಗಿ ಉಳಿಸಲು ಯುದ್ದೋಪಾದಿಯಲ್ಲಿ ಪ್ರಯತ್ನ
ಧನಾತ್ಮಕ ವರದಿಗಳಿಗೆ ಮಾತ್ರ ಅವಕಾಶ – ಋಣಾತ್ಮಕ ವರದಿಗಳಿಗೆ ನಿರ್ಬಂಧ
ಪಾವತಿ ಪ್ರಸಾರ ಮಾದ್ಯಮಕ್ಕೆ ಪಲಾಯನ – ಬದುಕಿಗೊಂದು ದಾರಿ
ವಿಶ್ವ ಮಟ್ಟದ ಮಾಧ್ಯಮವಾಗಿ ಬೆಳೆಯಲು ಸೂಕ್ತ ಬದಲಾವಣೆ
ಕಾಣುವ ವೇದಿಕೆ ಕಾಯುವ ಬದಲು ಅವ್ಯಕ್ತ ವೇದಿಕೆಗೆ ಮನ್ನಣೆ
ಸಮಸ್ಯೆ ತಪ್ಪುಗಳ ವೈಭವೀಕರಣದ ಜೊತೆಗೆ ಪರಿಹಾರ ಸೂತ್ರಗಳ ಪ್ರಕಟಣೆ ಅನಿವಾರ್ಯ
ದೇಶದ ಕಾನೂನು ಪುಸ್ತಕದ ಬದನೇಕಾಯಿ ಬದಲು ಬದುಕಿನ ಬದನೇಕಾಯಿ ಆಗಲು ಸಹಕರಿಸೋಣ
ತಪ್ಪಿಗೆ ಶಿಕ್ಷೆ ಸಾಮಜಿಕ ರೋಗಕ್ಕೆ ಮದ್ದು – ಡಂಗುರ ಸಾರೋಣ
ವರದಿಗಾರರ ಸ್ವಾವಲಂಬಿ ಸಂತುಷ್ಟ ಬದುಕು – ದೈವಸ್ಥಾನ ದೇವಸ್ಥಾನ ಮಾನವ – ಸ್ವಾವಲಂಬಿ ಮತ್ತು ಸಂತುಷ್ಟ ಬದುಕಿಗೆ ಉಡುಗೊರೆ