ಪದ್ಮರಾಜ ಹೆಗ್ಗಡೆಯವರು ಇಚಿಲಂಪಾಡಿ ಬೀಡಿನ ಸರ್ವತೋಮುಖ ಅಭಿವೃದ್ಧಿಗೆ ಬದುಕನ್ನು ಮುಡಿಪಾಗಿಟ್ಟು ೧೯೫೭ ರಲ್ಲಿ ಇಹಲೋಕವನ್ನು ತ್ಯಜಿಸಿದರು. ಇವರಿಗೆ ಎರಡು ಜನ ಸಹೋದರಿಯರಿದ್ದು ಒಂದು ಸಹೋದರಿಯ ಮಕ್ಕಳು ಪದ್ಮಾವತಿ ಮತ್ತು ತದನಂತರ ಪಟ್ಟ ಅಲಂಕರಿಸಿದ ಕುಂಚಣ್ಣ ಹೆಗ್ಗಡೆ. ಪ್ರಸ್ತುತ ಪಟ್ಟ ಅಲಂಕರಿಸಿದವರು ಪದ್ಮಾವತಿಯವರ ಮಕ್ಕಳ ಪೈಕಿ ಚಂದ್ರರಾಜ ಹೆಗ್ಗಡೆಯವರ ಹಿರಿಯ ಮಗ ಶುಭಾಕರ ಹೆಗ್ಗಡೆ. ಇನ್ನೊಂದು ಸಹೋದರಿಗೆ ಮೂರು ಗಂಡು ಮಕ್ಕಳು ಚಂದ್ರರಾಜ ಹೆಗ್ಡೆ,ನೇಮಿರಾಜ ಹೆಗ್ಡೆ, ಭೋಜರಾಜ ಹೆಗ್ಡೆ ಮತ್ತು ಒಂದು ಹೆಣ್ಣು ಪುಷ್ಪಾವತಿ. ಪದ್ಮರಾಜರಿಗೆ ಲಲಿತಾ ಮತ್ತು ಅಮಣಿ ಎಂಬ ಎರಡು ಹೆಣ್ಣು ಮಕ್ಕಳು.
ಹೆಗ್ಗಡೆಯರ ಸಾಮಾನ್ಯರಿಗಿಂತ ಗಿಡ್ಡ ನಿಲುವು – ಅಪ್ರತಿಮ ದೈರಶಾಲಿ – ಯಕ್ಷಗಾನ ತಾಳಮದ್ದಳೆಯಲ್ಲಿ ಸದಾ ಮುಂಚೂಣಿ ಪಾತ್ರ – ಪ್ರಾಣ ತೆತ್ತು ಮಾನ ಉಳಿಸು ಎಂಬ ಉನ್ನತ ಆದರ್ಶ ನಿತ್ಯ ಬದುಕಿನಲ್ಲಿ ಪಾಲನೆ – ಸತ್ಯ ಧರ್ಮ ನ್ಯಾಯದ ಕಟ್ಟು ನಿಟ್ಟಿನ ಅನುಕರಣೆ – ತಪ್ಪು ಯಾರೇ ಮಾಡಿದರು ಶಿಕ್ಷೆ ಕಟ್ಟಿಟ್ಟ ಬುತ್ತಿ – ಒಬ್ಬಂಟಿಯಾಗಿ ಕೇಡು ಬಗೆದ ಅನ್ಯ ಕೋಮಿನ ಮೂವರಿಗೆ ಚೂರಿಯಿಂದ ಉತ್ತರ ನೀಡಿದ ದಂತಕತೆ – ತನ್ನ ಜಾತಿ ಧರ್ಮಕ್ಕೆ ಕೇಡು ಬಗೆದು ಜೀವಿಸುತಿದ್ದ ತನಗೆ ಕೆಟ್ಟ ಮಾತುಗಳಿಂದ ನಿಂದಿಸಿದ ಅತಿ ಹತ್ತಿರದ ಸ್ವಜಾತಿ ಬಂದುಗೆ ದೊಣ್ಣೆಯ ಶಿಕ್ಷೆ ಆತನ ಸಾವಿನೊಂದಿಗೆ ಮುಕ್ತಾಯ – ಅಪರಾಧಕ್ಕಾಗಿ ಜೈಲು ಶಿಕ್ಷೆ – ಪರಿಣಾಮ ಆಡಳಿತದಲ್ಲಿ ಏರುಪೇರು, ಪರಿಚಾರಕರ ಪಲಾಯನ – ಶಿಕ್ಷೆ ಮುಗಿದ ಬಳಿಕ ಕೆಲವು ಸಮಯ ಅರಸರಾಗಿ ಮುಂದುವರಿದ ಸವಿನೆನಪು – ದಂತಕತೆ ಮಾತ್ರ ನಮಗೆ ದೊರೆತ ಮಾಹಿತಿ.
ಅರಸರಾಗಿ ತಪ್ಪು ಮಾಡಿದರೆ – ಖಂಡಿತಾ ಇಲ್ಲ – ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟು ತಪ್ಪು ಮಾಡಿದವರಿಗೆ ಉಳಿಗಾಲವಿಲ್ಲ ಎಂಬ ಸಂದೇಶ ಪ್ರತಿ ಊರಿನಲ್ಲಿ ಪ್ರತಿ ಕಾಲದಲ್ಲಿ ಇದ್ದರೆ ಮಾತ್ರ ಸುಖ ಶಾಂತಿ ನೆಮ್ಮದಿ ಬಾಳು ಸಾಧ್ಯ. ಅರಸನಾಗಿದ್ದವ ಶಿಕ್ಷೆ ವಿಧಿಸಲು ತಾನು ನಂಬಿ ಆರಾಧಿಸಿಕೊಂಡು ಬರುವ ದೈವ ದೇವರಿಗೆ ಆಜ್ಞೆ ಬೇಡಿಕೆ ಸಲ್ಲಿಸಿ ನಿಶ್ಚಿಂತೆ ಬಾಳು ನಡೆಸುವ ಸುವಿಚಾರ ಮುಂಗೋಪಿಯಾಗಿದ್ದ ಹೆಗ್ಗಡೆಯವರಿಗೆ ಬಾರದೆ ಇದ್ದುದು ಈ ಕ್ಷೇತ್ರದ ಅವನತಿಯ ಕಾಲಘಟ್ಟದ ಮಹಿಮೆ. ನಾವು ಮತ್ತು ನಡೆದು ಬಂದ ಪಯಣ ನಿಮಿತ್ತ ಮಾತ್ರ.
ನಮ್ಮನ್ನು ಆಳಿ ಅಳಿದು ಹೋದ ದಿವ್ಯ ಚೇತನ – ದಿವ್ಯ ಜ್ಯೋತಿಯಾಗಿ ಇಜಿಲಂಪಾಡಿ ಬೀಡು ಕ್ಷೇತ್ರ ಜಾಗತಿಕವಾಗಿ ಬೆಳಗಲಿ embudu ಮನದಾಳದ ಅಂಬೋಣ