ಇಚ್ಲಂಪಾಡಿ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ 53ನೇ ಮಹಾಶಿವರಾತ್ರಿ ಮಹೋತ್ಸವ

ಶೇರ್ ಮಾಡಿ
Shri gangadareshwara temple ichilampady


ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ಸ್ವಸ್ತಿ ಶ್ರೀ ಕ್ರೋಧಿ ನಾಮ ಸಂವತ್ಸರದ ಮಾಘ ಕೃಷ್ಣ ಕುಂಭ ಮಾಸದ ಶುಭ ದಿನ, ಫೆಬ್ರವರಿ 26, 2025 (ಬುಧವಾರ), 53ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.ಈ ಪವಿತ್ರ ಮಹೋತ್ಸವವನ್ನು ಅರ್ಚಕರಾದ ಶ್ರೀಧರ ನೂಜಿನ್ನಾಯ ಅವರ ನೇತೃತ್ವದಲ್ಲಿ  ಭಕ್ತಿಪೂರ್ವಕವಾಗಿ ಆಯೋಜಿಸಲಾಗಿದ್ದು, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

 ಧಾರ್ಮಿಕ ಕಾರ್ಯಕ್ರಮಗಳ ವಿವರ:

🔸 ಬೆಳಿಗ್ಗೆ 7:00 – 8:30 – ಪುಣ್ಯಾಹವಾಚನ ಮತ್ತು ಉಷಾ ಪೂಜೆ
🔸 ಬೆಳಿಗ್ಗೆ 8:00 – ಸಂಜೆ 5:00 – ಭಾಗವತ ಪಾರಾಯಣ
🔸 ಬೆಳಿಗ್ಗೆ 9:30 – 10:30 – ಗಣಹೋಮ ಮತ್ತು ನವಕ ಕಲಶ ಪೂಜೆ
🔸 ಮಧ್ಯಾಹ್ನ 12:30 – ಮಹಾಪೂಜೆ ಮತ್ತು ಪ್ರಸಾದ ವಿತರಣೆ
🔸 ಸಂಜೆ 6:00 – ಉತ್ಸವಮೂರ್ತಿ ನಟರಾಜ ದೇವರಿಗೆ ತಾಳಿ, ದೀಪಾಲಂಕಾರ ಭೂಷಿತ ಮೆರವಣಿಗೆ, ದೀಪಾರಾಧನೆ ಮತ್ತು ಸಂಧ್ಯಾ ಪೂಜೆ
🔸 ಸಂಜೆ 7:00 – ರಾತ್ರಿ 9:30 – ಭಜನಾ ಕಾರ್ಯಕ್ರಮ
🔸 ರಾತ್ರಿ 8:30 – 9:30 – ಮಹಾ ಅನ್ನಸಂತರ್ಪಣೆ
🔸 ರಾತ್ರಿ 12:00 – 1:00 – ಮಹಾಶಿವರಾತ್ರಿ ಪೂಜೆ ಮತ್ತು ಪ್ರಸಾದ ವಿತರಣೆ

ಸಾಂಸ್ಕೃತಿಕ ಕಾರ್ಯಕ್ರಮ:

🌟 ರಾತ್ರಿ 9:30 – ಯಕ್ಷಗಾನ
ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮಡಾಮಕ್ಕಿ ತಂಡದಿಂದ ಶ್ರೀ ಕೆ. ಬಸವರಾಜ ಶೆಟ್ಟಿಗಾರ್ ವಿರಚಿತ “ಶ್ರೀ ಮಡಾಮಕ್ಕಿ ಕ್ಷೇತ್ರ ಮಹಾತ್ಮೆ” ಯಕ್ಷಗಾನ ಪ್ರದರ್ಶನ.

Shri gangadareshwara temple ichilampady shankadweepa
Shri gangadareshwara temple ichilampady nekkilu
shiva temple ichilampady kadaba taluk,ichlampady village
See also  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ನವರಾತ್ರಿ ಉತ್ಸವ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?