ಕೃಷಿ ಬುಲೆಟಿನ್
ಕೃಷಿಕನ ಕೂಗು ಅರಣ್ಯ ರೋಧನ – ಅದು ಯಾರ ಕಿವಿಗೂ ಬೀಳುವುದಿಲ್ಲ. ಆತ ತಾನು ಕೃಷಿಕನಾಗಿ ಹುಟ್ಟಿದ ತಪ್ಪಿಗೆ ಪಶ್ಚಾತಾಪ ಪಡುತ್ತಾ , ಪರಿಹಾರದತ್ತ ಮಾಡಿದ ಚಿಂತನ – ಮಂಥನ, ತನ್ನ ಕೃಷಿ ಬದುಕಿಗೆ ದೊಡ್ಡ ನಮಸ್ಕಾರ ಹೇಳಿ ಅನ್ಯ ದಾರಿಯತ್ತ ತೊಡಗುತಿರುವುದರ ಪರಿಣಾಮ – ಮುಂದೆ ಒಂದು ದಿನ – ಆಹಾರದ ಕೊರತೆಯಿಂದಾಗಿ ನಾವು ಅಂತ್ಯ ಕಾಣುವ ದಿನ ಬಹಳ ಹತ್ತಿರ ಹತ್ತಿರ ಬರುತಿರುವುದು ಗೋಚರಿಸುತಿದೆ.
ಆತ ಪ್ರಕೃತಿಯೋಂದಿಗೆ ಹೋರಾಟ, ಕೃಮಿ ಕೀಟಗಳೊಂದಿಗೆ ಕೊನೆಗೆ ಮಧ್ಯವರ್ತಿಗಳ ಕೈಚಳಕ -ಮುಂತಾದುವುಗಳೊಂದಿಗೆ ಹೋರಾಡಿ – ಆತನ ಕೃತಕ ಉಸಿರಾಟದ ದ್ವನಿಯಿಂದ ಬರುವ ಕೂಗು ಕೆಳಗಿನಂತಿವೆ.
೧. ಕೃಷಿಕನಿಗೂ ತಿಂಗಳಿಗೆ ಕನಿಷ್ಠ ಪ್ರೋತಾಸಹ ಹಣ ಕೊಡುವ ವ್ಯವಸ್ಥೆ ಮಾಡಿ
೨. ಕನಿಷ್ಠ ಅಂದರೆ ೨೦ ರಿಂದ ೩೦ ವರುಷಗಳ ಸೇವೆ ಸಲ್ಲಿಸಿದವರಿಗೆ ಮಾಶಾಸನಕ್ಕೆ ಅರ್ಹನಾಗುವುದಾದರೆ ಜೀವನ ಪೂರ್ತಿ ಕೃಷಿ ಕಾಯಕ ಮಾಡುವ ನಮಗೆ ಅದಕ್ಕೆ ಅರ್ಹತೆ ಇಲ್ಲ – ನೀವು ಹೇಳಬಹುದು – ನಾವು ಅರ್ಹರೇ ಇದು ಕಟು ಸತ್ಯ
೩. ಕೃಷಿಕ ಕಾಣುವ ದೇವರು – ಗಾಳಿ ನೀರು ಪ್ರಕೃತಿ(ದೇವರ) ಕೊಡುಗೆ – ಆಹಾರ ಕೃಷಿಕನ ಕೊಡುಗೆ – ಅದಕ್ಕಾಗಿ
೪. ನಾವು ಇದ್ದರೆ ಮಾತ್ರ ಮಾನವ ಬದುಕು – ಇಲ್ಲದಿದ್ದರೆ ಇಲ್ಲ – ಅರಿತು – ನಾವು ನೀವು ಒಂದಾಗಿ ಬಾಳೋಣ
ಕೃಷಿಕರ – ಸಲಹೆ -ಸೂಚನೆ – ಆವಿಸ್ಕಾರಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ