ದೇವಾ ನೀ ಪರಾಕಾಯದೊಳಿದ್ದು ಮಾತಾಡುತಿರೆ 
ಸುಜ್ಞಾನಿ ತಲೆತೂಗುತಿಹನು ಜ್ಞಾನಿ ಮೂಕನಾಗಿಹನು 
ಅಜ್ಞಾನಿ ನಿಬ್ಬೆರೆಗಾಗಿ ಅಪಹಾಸ್ಯ ಮಾಡುತಿಹನು ………………………………….ಅವ್ಯಕ್ತ
ಧಾರ್ಮಿಕ ಜ್ಞಾನರಹಿತ ಧಾರ್ಮಿಕ ಪೂಜೆ 
ಧಾರ್ಮಿಕ ಜ್ಞಾನಸಹಿತ ಧಾರ್ಮಿಕ ಪೂಜೆ 
ಭಗವಂತನ ಆಯ್ಕೆ ಭಗವಂತನಿಂದ ಕೇಳೆಂದ ……………………………………..ಅವ್ಯಕ್ತ
ದೇವರು ನಂಬಿ  ಬರುವ ಭಕುತರ 
ಕಿಸೆ ಸೂರೆಗೊಳ್ಳುವ ಪರಿಸರ ದೇವಸ್ಥಾನದ ಪರಿಸರವಾಗಿರೆ 
ದೇವರ ಹುಂಡಿ ಪರಿಸರಕ್ಕೆ ವ್ಯಾಪಿಸಿದೆಯೆಂದು ನಂಬಲೇ …………………………..ಅವ್ಯಕ್ತ
ದಾರಿಯಲ್ಲಿ ಕಣ್ಣು ಇರುತಿರೆ 
ಮಸ್ತಕದಿ ಭಗವಂತ ನೆಲೆಸಿರುತಿರೆ 
ಕಾಂತಿಯಿಲ್ಲದ ಕಣ್ಣು ಬಾಡಿದ ಮುಖವೆಲ್ಲಿ ಕಾಂಬೆ………………………………………ಅವ್ಯಕ್ತ
ದೇವಾಲಯದಿ  ದೇಹವಿದ್ದು ಮನವಿಲ್ಲದಿದ್ದರೆ ಹರಟೆ 
ದೇವಾಲಯದಿ ಮನವಿದ್ದು ದೇಹವಿಲ್ಲದಿದ್ದರೆ ಸ್ಮರಣೆ 
ದೇವಾಲಯದಿ ದೇಹಮಾನವೆರಡು ಇರುತಿರೆ ಪೂಜೆ …………………………………..ಅವ್ಯಕ್ತ
ದೇವಾ ನಿನಗೆ ಮುಗಿಯುವ ಕೈ ಎರಗುವ ದೇಹ 
ಕಂಡ ಕಂಡವರಿಗೆ ಕೈಮುಗಿದು ದೇಹವೆರಗಿ 
ಕೊಳಕಾಗಿ ನಾರುತಿರುವ ದೇಹ ಕೈ ತೊಳೆಯುವುದೆಂತು ……………………………….ಅವ್ಯಕ್ತ
ಸ್ವಾರ್ಥದ ಪಿತ್ತ ನೆತ್ತಿಯಲ್ಲಿಟ್ಟು ನಿನ್ನ ಪೂಜಿಪರು 
ತ್ಯಾಗದ ಪುಷ್ಪ ಕಾಲಲ್ಲಿಟ್ಟು ನಿನ್ನ ಪೂಜಿಪರು 
ದೇವಿ ನಿನ್ನ ಕೃಪೆ ನಿನ್ನ ಭಕ್ಷಕನಿಗೇ ರಕ್ಷಕನಿಗೋ …………………………………………..ಅವ್ಯಕ್ತ
ದೈವ ದೇವರುಗಳಿಗೆ ಪ್ರಕೃತಿದತ್ತ ನೀರೇ ಗತಿಯಾಗಿ
ಬಕುತಾ  ಭಾಂದವರು ಅನ್ನ ತಿಂದು ಜೀವಿಸೆ 
ಭೂಮಿ ಬರಡು ದೇಹ ರೋಗದ ಗೂಡಾಗುವುದೆಂದ ………………………………………..ಅವ್ಯಕ್ತ
ನಿನ್ನ ಮಿಗಿಲಾದ ಜೋತಿಷ್ಯವಿಲ್ಲವೆಂಬರು ಪೋಪರಲ್ಲಿಗೆ 
ನಿನ್ನ ಮಿಗಿಲಾದ ವೈದ್ಯರಿಲ್ಲವೆಂಬರು ವೈದ್ಯರಲ್ಲಿಗೆ ಪೋಪರು 
ಮಾರು ವೇಷದಿ ಜೋತಿಷಿಯಾಗಿ ವೈದ್ಯನಾಗಿ ನೀನೇ ಬಂದೆಯಾ……………………………ಅವ್ಯಕ್ತ
ನನ್ನ ನನ್ನವರ ಹಗ್ಗದಿ ಬಂಧಿಸಿ  ಮುನ್ನಡೆಸುವೆ 
ನನ್ನ ಅಂಗಲಾಚುವವರಿಗೆ ನಿನ್ನ ಕಾಣಿಪೆ
ಕುರುಡಾಗಿ  ಬರುವ ಕಂದನ ಕೈ ಹಿಡಿದು ಮುನ್ನಡೆಸು ಓ ತಂದೆ ………………………………..ಅವ್ಯಕ್ತ
ವ್ಯಾಪಾರ – ವೈದ್ಯರ  ನ್ಯಾಯ್ವಾದಿಗಳ ವೃತಿಗಳ ಹುದ್ದೆಗಳ 
ವ್ಯಾಪಾರ – ಗುರುಗಳ ಸ್ವಾಮಿಗಳ ಪೀಠಗಳ ದೇವರ 
ವ್ಯಾಪಾರಿಗಳಿಲ್ಲದ ಜಗದೊಳು ನೀನು ಬದುಕಿರಲಾರೆಯ …………………………………………ಅವ್ಯಕ್ತ
ಶಾಲೆ ವೈದ್ಯಕೀಯ ಇಂಜಿನೀರ್ ವಕೀಲರ ಇಹುದು 
ಶಾಲೆ ಕೃಷಿಕರ ರಾಜಕೀಯ ಧಾರ್ಮಿಕ ನಗಣ್ಯದಂತಿಹುದು 
ಅಕ್ಷರ ಜ್ಞಾನದ ಕಗ್ಗತ್ತಲ ಶಾಲೆಯ ಜ್ಞಾನ ಶಾಲೆಯನ್ನಾಗಿಸಲಾರೆಯ ………………………………ಅವ್ಯಕ್ತ