ರಾಜ್ಯಕ್ಕೆ ಮುಖ್ಯಮಂತ್ರಿ ದೇಶಕ್ಕೆ ಪ್ರಧಾನಿ ಇದ್ದಂತೆ – ಗುತ್ತು ಸೀಮೆ ಗುತ್ತುಗಳಲ್ಲಿ – ಗಡಿ ಭಾಮಾ ಮತ್ತು ಅರಸು ವ್ಯಾಪ್ತಿಯಲ್ಲಿ ಅರಸು ಪಟ್ಟ – ಈ ಉನ್ನತ ಪದವಿಗಳನ್ನು ಸಂಬಂಧಪಟ್ಟ ವ್ಯಕ್ತಿಗಳು ಅದಿಕೃತವಾಗಿ ಯಜಮಾನಿಕೆ ಸ್ಥಾನಗಳಲ್ಲಿ ಅಲಂಕರಿಸಿ ದೈವಾರಾಧನೆ ಮಾಡಬೇಕಾದುದು ಕಟ್ಟುನಿಟ್ಟಿನ ಮೂಲ ನಿಯಮ. ಆಮದಾದ ಪ್ರಸ್ತುತ ಶಿಕ್ಸಣ ಪದ್ಧತಿ , ಮೂಢನಂಬಿಕೆ ಎಂಬ ಹಣೆಪಟ್ಟಿ, ಗ್ರಾಮೀಣ ಕಲೆ ಎಂಬ ಅಡ್ಡ ಹೆಸರು, ಕಾಟಾಚಾರಕ್ಕೆ ಸೀಮಿತವಾದ ಮನೋಭಾವನೆ ಇತ್ಯಾದಿ – ಜಾಗತಿಕ ಮಟ್ಟದಲ್ಲಿಯೇ ಪವಿತ್ರ ಮತ್ತು ಪ್ರಪ್ರಥಮ ಸ್ಥಾನವನ್ನು ಹೊಂದಿರುವ ದೈವಾರಾಧನೆ ಸಾವು ಬದುಕಿನ ಸ್ಥಿತಿಯಲ್ಲಿದೆ. ದೇವರನ್ನು ಪೂಜಿಸಿಕೊಂಡು ಬರುತಿರುವ ಪುರೋಹಿತರಿಗೆ ದೈವಾರಾಧನೆ ಜವಾಬ್ದಾರಿ ಕೊಟ್ಟು – ನೀವೇ ಯಜಮಾನನ ಕೆಲಸ ಪೂರೈಸಿ ಎನ್ನುವ ಬಾಲಿಶ ಪ್ರವೃತಿ – ದೈವಾರಾಧನೆ ಜನಸಾಮಾನ್ಯರಿಗೆ ಮನರಂಜನೆ ನೀಡುವ ನಾಟಕ ಪ್ರದರ್ಶನದ ದಾರಿಯಲ್ಲಿ ಬಹು ದೂರ ಸಾಗಿದೆ. ಇನ್ನು ಕೆಲವು ಕಡೆ ಗಡಿ ಭಾಮಾ ಆದವರನ್ನು ಬರಮಾಡಿ ಈ ಪ್ರಕ್ರಿಯೆಗಳನ್ನು ಪೂರೈಸುವುದು ಇನ್ನೊಂದು ರೀತಿಯ ನಾಟಕ ಪ್ರದರ್ಶನ. ಜನಾಭಿಪ್ರಾಯದ ಮೂಲಕ ಸಂಗ್ರವಾದ ದೈವಾರಾಧನೆಯ ಮೂಲ ನಿಯಮ ಈ ಕೆಳಗಿನಂತಿದೆ.
ಗುತ್ತುನವನಿಗೆ ಗಡಿ ಭಾಮಾ , ಅರಸು ಸ್ತಾನದವನಿಗೆ ಅರಸು ಪಟ್ಟ ಅನಿವಾರ್ಯ
ಅನ್ಯ ಸ್ಥಳದ ಯಜಮಾನರಿಂದ ನಡೆಸಲ್ಪಡುವ ದೈವಾರಾಧನೆಗೆ ಸೂನ್ಯ ಫಲ
ಗುತ್ತು, ಬಾರಿಕೆ ಮುಂತಾದವರ ನಿಗದಿತ ವ್ಯಕ್ತಿಗಳಿಗೆ ಮಾತ್ರ ಸ್ಥಾನ ಮಾನ
ಜ್ಯೋತಿಸ್ಯ ಶಾಸ್ತ್ರದ ಬಳಕೆ ಮತ್ತು ದೈವ ದೇವರ ಒಪ್ಪಿಗೆ ಗುತ್ತು ಬಾರಿಕೆ ಪಟ್ಟ – ಸಂದರ್ಭಗಳಲ್ಲಿ ಅನಿವಾರ್ಯ
ಮನೆಯ ದೈವಾರಾಧನೆಯಲ್ಲಿ ಮನೆಯ ಹಿರಿಯ ವ್ಯಕ್ತಿಗೆ ಸ್ಥಾನ ಮಾನ ತಪ್ಪಿದರೆ ಅವನ ಅಪ್ಪಣೆ ಮೇರೆಗೆ ಅನ್ಯರಿಗೆ
ಮನೆಯ ಸಮಸ್ಯೆಗಳನ್ನು ಮನೆ ದೈವಗಳು , ಗುತ್ತಿನ ದೈವಗಳು ಗುತಿನ ವ್ಯಾಪ್ತಿಯ ಸಮಸ್ಯೆ ಪರಿಹಾರ
ನೂರಕ್ಕೆ ನೂರು ಸ್ವಚ್ಛ ಪ್ರಜಾಪದ್ದತಿಯ ನಿಯಮಗಳು ಅರಸು ಪದ್ದತಿಯಲ್ಲಿ ಪಾಲನೆ – ಬಾರಿಕೆ , ಗುತ್ತು , ಸೀಮೆ ಗುತ್ತು , ಸೀಮೆ ಅರಸು , ಅರಸು ಇತ್ಯಾದಿ ಮತ್ತು ಪ್ರತಿ ಹಂತದ ಆಯ್ಕೆಯಲ್ಲಿ ಸರ್ವಾನುಮತದ ಆಯ್ಕೆಗೆ ಒತ್ತು
ದೈವಾರಾಧನೆಯ ಮೂಲ ನಿಯಮದ ಪ್ರಸ್ತುತ ಶೇಕಡಾ ೧೦ ರಿಂದ ಕೆಳಗೆ ಅನುಷ್ಠಾನವಾಗುತಿರುವುದು – ದೈವ ನುಡಿ ಕಟ್ಟು ಬದಲು ದೈವ ಪಾತ್ರಿಯ ನುಡಿಕಟ್ಟು ಮಾತ್ರಕ್ಕೆ ಕಾರಣವಾಗಿದೆ
ದೈವಾರಾಧನೆ ಬಗ್ಗೆ ಕನಿಷ್ಠ ಅರಿವಿನಿಂದ – ಗರಿಷ್ಠ ಜನರಿಗೆ ಅರಿವು ಮೂಡಿಸಲು ಸೂಕ್ತ ಮಾರ್ಗದ ಅವಶ್ಯಕತೆ ಇದೆ
ದೈವ ದೇವರ ಕಾನೂನು ನಿಯಮ ೧೦೦ ಶೇಕಡಾ ಪಾಲನೆ . ಮಾನವರ ನಿಯಮ ಕಾನೂನು – ಕನಿಷ್ಠ ಪಾಲನೆ
ದೈವ ಆರಾಧಕರ ಒಕ್ಕೂಟ ಪ್ರತಿ ಊರಿನಲ್ಲಿ ಆದರೆ ಮಾತ್ರ ಬೆಟ್ಟದಷ್ಟಿರುವ ಸಮಸ್ಯೆಗಳು ಹಂತ ಹಂತವಾಗಿ ಕನಿಷ್ಟಕ್ಕೆ
ಗಡಿ ಭಾಮಾ ಅರಸು ಪಟ್ಟ ಇತ್ಯಾದಿಗಳಲ್ಲಿ ಆಡಂಬರದ ಅವಶ್ಯಕೆತೆ ಇಲ್ಲ
ಗರಿಷ್ಠ ಆಂತರಿಕ ಶುದ್ಧತೆ ಜೊತೆಗೆ ಬಾಹ್ಯ ಶುದ್ಧತೆ ಅನಿವಾರ್ಯ
ದೈವ ದೇವರು ತೊಂದರೆ ಕೊಡುವ ಬದಲು ನಮಗೆ ಸದಾ ಸಹಕಾರ ನೀಡಲು ಅವರುಗಳು ತೋರಿಸಿಕೊಟ್ಟು ದಾರಿಯಲ್ಲಿ ಸಾಗುವುದೊಂದೇ ನಮ್ಮ ಕರ್ತವ್ಯ
ಮೂಲ ದೈವಾರಾಧನೆಯ ಬಗ್ಗೆ ಅರಿತು ಬಾಳುವ ದಿನ ಬೇಗ ಬರಲಿ ಅನಿಸಿಕೆಯೊಂದಿಗೆ ಜನ ಮನದ ಅನಿಸಿಕೆಗಳಿಗೆ ಸ್ವಾಗತ