ಮನದ ಟಿ ವಿ ಮರೆತ ಮಾನವ
ಬಣ್ಣದ ಟಿವಿಗೆ ಮರು ಹೋದಾತ
ಕಣ್ಣಿದ್ದು ಕುರುಡನೆಂದ
ಅವ್ಯಕ್ತ
ಪುರುಷೋತ್ತಿಲ್ಲವೆಂಬ ಪಿಡುಗುಗೆ ಬಲಿಯಾದ ಮನು ಕುಲಕೆ
ಹೆಣ್ಣಿಗೆ ಹೊನ್ನು ಗಂಡಿಗೆ ಹೆಣ್ಣು ಕಾಂಬಾಗ
ಪೂರೋಸೋತಿನ ಗುಡ್ಡ ಹತ್ತುತಿಹರು
ಅವ್ಯಕ್ತ
ಸೋಮಾರಿ ಸೋಮಾರಿ ಎನಬೇಡ
ದಿನಕೆ ಎಂಟು ಗಂಟೆ ದುಡಿಯದಾತ
ಭೂಮಿಗೆ ಭಾರವೆಂದ
ಅವ್ಯಕ್ತ
ಪಿತ್ರಾರ್ಜಿತ ಅಸ್ತಿ ಕಾಂಬಾಥ
ಮೂರ್ಖರ ಮೂರ್ಖ ಶತ ಮೂರ್ಖ
ನಿತ್ಯ ಆತ್ಮಹತ್ಯೆ ಮಾಡುತಿಹನು
ಅವ್ಯಕ್ತ
ಸಾಧಕನಿಗೆ ಸಾಧಕನೇ ಬಂದು ಮಿತ್ರ
ಸೋಮಾರಿಗೆ ಸೋಮಾರಿ ಬಂಧುಮಿತ್ರ
ನೀರಿಗೆ ಬೆಂಕಿ ಬಂದು ಮಿತ್ರತ್ವ ಸಾಧುವೇ
ಅವ್ಯಕ್ತ
ನಿನ್ನ ಬಯಕೆ ಈಡೇರಿಸಲಾಗದ ನಿನಗೆ
ಅನ್ಯರು ನಿನ್ನ ಬಯಕೆ ಈಡೇರಿಸಿಲ್ಲವೆಂಬ ಕೂಗು
ಯೋಗ್ಯತೆಗೆ ತಕ್ಕುದಲ್ಲದ ಬಯಕೆ
ಅವ್ಯಕ್ತ
ನಿನ್ನ ಎತ್ತರಕ್ಕೆ ಎರದವನ ಸಂಬಂಧ
ನಿನ್ನ ಎತ್ತರಕ್ಕೆ ಏರಬಯಸದವನ ಒಡನಾಟ
ಆನೆ ಆಡು ಗಾಡಿಯೆಂದ
ಅವ್ಯಕ್ತ
ದುಡಿದು ತಿಂಬವ ನಗುತಿಹನು
ಕೂತು ತಿಂಬವ ಅಳುತಿಹನು
ಸಾಲ ಮಾಡಿ ತಿಂಬವ ಚಟ್ಟ ಕಟ್ಟುತಿಹನು
ಅವ್ಯಕ್ತ
ಶ್ರೀಮಂತನೆಂದೆನಿಪವ ಉಪ್ಪರಿಗೆಯಿಂದ ಬೀಳುತಿಹ ನೋಡಾ
ಬಡವನೆಂದೆನಿಪವ ಉಪ್ಪರಿಗೆಗೆ ಏರುತಿಹ ನೋಡಾ
ಬಡವರ ಬಡವ ಶ್ರೀಮಂತರ ಶ್ರೀಮಂತನೆಂದ
ಅವ್ಯಕ್ತ
ದೇಹ ಹದ್ದು ಬಸ್ತಿನಲ್ಲಿರೆ ಜೈಲೆಂಬೆ
ಮನ ಹದ್ದುಬಸ್ತಿನಲ್ಲಿರೆ ಸಂಯಮವೆಂಬೆ
ಜೈಲು ಸಯಮವಿರದ ಲೋಕ ಪ್ರಾಣಿಲೋಕವಯ್ಯಾ
ಅವ್ಯಕ್ತ
ಮುಸ್ಲಿಂ ಕ್ರಿಶ್ಚಿಯನ ಧರ್ಮಿಯರ ಮನೋವೇಗ
ಅನ್ಯ ಧರ್ಮಿಯರ ಆಮೆ ನಡಿಗೆ
ಮತಾಂತರ ಪಿಡುಗುಗೆ ಅನ್ಯ ಕಾರಣಬೇಕೆ
ಅವ್ಯಕ್ತ
ಹಿಂದು ಮುಸ್ಲಿಂ ಕ್ರಿಶ್ಚಿಯನ್ ಜೈನ ಬೌದ್ಧರು
ರಾಮ ಪೈಗಂಬರ ಏಸುಕ್ರಿಸ್ತ ಮಹಾವೀರ ಬುದ್ಧರ ಹಿಂಬಾಲಿಸೆ
ದಾರಿ ಮದ್ಯೆ ಹೊಡದಾಡುತಿರುವವರು ನರಪ್ರಾಣಿಗಳೆಂದ
ಅವ್ಯಕ್ತ