ಅಕ್ಷರ ಜ್ಞಾನವನ್ನು ಕಳಿಸುವುದು ಮತ್ತು ಅಕ್ಷರ ಜ್ಞಾನದೊಂದಿಗೆ ಸಂಸ್ಕಾರವನ್ನು ಕಳಿಸುವುದು – ಇವುಗಳ ಪೈಕಿ ಎರಡನೆಯದ್ದು ಜನಸಾಮಾನ್ಯರ ಆಯ್ಕೆ. ವಾಸ್ತವ ಮಾತ್ರ ಬೇರೆ ಆಗಿದ್ದು – ಅಕ್ಷರ ಜ್ಞಾನ ಮತ್ತು ಸಂಪಾದನೆಯ ದಾರಿ ತೋರಿಸುವುದೆ ಶಿಕ್ಸಣದ ಉದ್ದೇಶ ಗುರಿಯಾಗಿದ್ದು ಅದರ ಫಲವಾಗಿ ಸುಖ ಶಾಂತಿ ನೆಮ್ಮದಿ ಬದಲಾಗಿ ಮಾನವೀಯ ಮೌಲ್ಯಗಳ ಕೊರತೆ ದಾನವ ಪ್ರವೃತಿ ಅಧಪತನದ ಸಮಾಜಕ್ಕೆ ನಾಂದಿಯಾಗಿದೆ.
ದೇವರು ಧರ್ಮ ಪ್ರಕೃತಿ – ಈ ಮೂರನ್ನು ಬಟ್ಟಿಇಳಿಸಿ – ಇದು ಬದುಕಿನ ಪರವಾನಿಗೆ ಎಂಬುದನ್ನು ಕಾತರಿಪಡಿಸಿ – ಮುಂದಕ್ಕೆ ನಾವು ನೀಡುತಿರುವ ಶಿಕ್ಸಣ ಮುಂದುವರಿಸಿದಾಗ – ಅರ್ಥಪೂರ್ಣ ಶಿಕ್ಸಣ – ಶಿಕ್ಸಣ ಸಂಸ್ಥೆಗಳಿಂದ ಸಿಕ್ಕಿದಂತಾಗುತದೆ .
ನಮ್ಮನ್ನು ಕತ್ತಲೆಯಿಂದ ಬೆಳಕಿನತ್ತ ಕೊಂಡುಹೋಗುವುದೇ ಶಿಕ್ಸಣದ ಉದ್ದೇಶ – ಆದರೆ ಇಂದು ಕತ್ತತೆಯಿಂದ ಕಗ್ಗತ್ತಲೆಗೆ ತಳ್ಳುತಿದೆ ನಾವು ಅನುಸರಿಸಿ ಮುನ್ನಡೆಸುತಿರುವ ವ್ಯವಸ್ಥೆ . ಶಿಕ್ಸಣದಲ್ಲಿ ಯಾವುದು ಅಭ್ಯಾಸ ಮಾಡುತ್ತೆವೋ ಅದು ಬದುಕಿಗೆ ಬೇಡವೇ ಬೇಡ – ಬದುಕಿನಲ್ಲಿ ಎದುರಿಸಬೇಕಾದ ಯಾವ ವಿಷಯಗಳು ಪಠ್ಯ ಪುಟ್ಸ್ತಕದಲ್ಲಿಲ್ಲ. ಶಿಕ್ಸಣ ದಿಕ್ಕು ಮತ್ತು ಬದುಕಿನ ದಿಕ್ಕು ಬೇರೆ ಬೇರೆ ಆದರೆ ಬದುಕು ಸರ್ವ ಪತನದತ್ತ ದಾಪುಗಾಲು ಹಾಕುತಿರುವ ಅರಿವು ನಮಗಿರಬೇಕು.
ಶಿಕ್ಸಣ ಅಂದರೆ ಏನು ಎಂಬ ಪ್ರಶ್ನೆ ಪ್ರತಿಯೊಬ್ಬರೂ ಪ್ರತಿಯೊಬ್ಬರಿಗೆ ಹಾಕಿ ಉತ್ತರ ಕಂಡುಕೊಂಡು ಅನುಷ್ಠಾನ ಮಾಡಬೇಕು.
ಮುಗ್ದ ಮಕ್ಕಳನ್ನು ಅಭಯಾರಣ್ಯಕ್ಕೆ ಕಳುಹಿಸುವುದನ್ನು ತಪ್ಪಿಸಿ – ಇಂದು ನಾವು ಮಾರ್ಗದಲ್ಲಿ ಬಿದ್ದಿದ್ದ ಕಲ್ಲನ್ನು ಹೊತ್ತು ಸಾಗುತಿದ್ದೇವೆ ಎಯಂಬ ಅರಿವಿರಲಿ.೧೮೩೫ ನೇ ಇಸವಿಯ ಮೊದಲು ನಮಗೆ ಸಿಗುತಿದ್ದ ಶಿಕ್ಸಣದಿಂದ – ಕೊಲೆ ಸುಲಿಗೆ ಮೋಸ ವಂಚನೆ ಯಾವುದೇ ಕೆಟ್ಟ ಕೃತ್ಯ ಇಲ್ಲದ ನಮ್ಮ ದೇಶ ಆಗಿತು ಎನ್ನುವುದಕ್ಕೆ ಪುರಾವೆ ಇದೆ. ಅದು ಇಂದು ನಮ್ಮಿಂದ ಯಾಕೆ ಆಗುತಿಲ್ಲ.
ನಮ್ಮನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ಮಾಡುವುದೇ ನಿಜವಾದ ಶಿಕ್ಸಣ – ಅದು ದೊರಕಲಿ
ಶಿಕ್ಸಣ ಅಂದರೆ ಏನು ? ಎಂಬ ಪ್ರಶ್ನೆಗೆ ನಿರಂತರ ನಮ್ಮನ್ನು ಚುಚ್ಚುತ್ತಿರಲಿ – ಪ್ರಶ್ನೆಗೆ ಉತ್ತರ ಸಿಕ್ಕಿದರೆ ಮಾತ್ರ ನಮ್ಮ ನಾಡು ಸ್ವರ್ಗ – ಇಲ್ಲದಿದ್ದರೆ ನಿತ್ಯ ನರಕ