ವಾಟ್ಸಪ್ಪ್ ಬಳಕೆದಾರನ ಕೈಯಲ್ಲಿ ಚಿನ್ನದ ಘನಿ
ವಾಟ್ಸಪ್ಪ್ ಬಳಕೆಯರಿಯದವನ ಕೈಯಲ್ಲಿ ಕಸದ ತೊಟ್ಟಿ
ವಾಟ್ಸಪ್ಪ್ ಬಳಕೆ ವಿದ್ಯೆ ತೊಟ್ಟಿ ಚಿನ್ನದ ಘಣಿಯಾಗುವುದೆಂದ …………………ಅವ್ಯಕ್ತ
ಸಾಮಾಜಿಕ ಜಾಲತಾಣ ಬದುಕಿಗೆ ಉನ್ನತಿ
ಸಾಮಾಜಿಕ ಜಾಲತಾಣ ಬದುಕಿಗೆ ಅವನತಿ
ಸಾಮಾಜಿಕ ಜಾಲತಾಣ ಅರಿವು ಬೋದಿಸೆಂದ…………………………….. ಅವ್ಯಕ್ತ
ಫೇಸ್ಬುಕ್ ಗ್ರೂಪ್ ವಾಟ್ಸಪ್ಪ್ ಗ್ರೂಪ್
ಜಾತಿ ವೃತಿ ಊರು ಗ್ರೂಪ್
ಮಾನವರ ದೇವರ ಗ್ರೂಪ್ ಬೇಕೆಂದ ………………….ಅವ್ಯಕ್ತ
ಆನಲೈನ್ ಶಿಕ್ಸಣ ಬೇಕು
ಆನಲೈನ್ ಪೂಜೆ ಬೇಕು
ಆನಲೈನ್ ಬದುಕು ಸಾಕೆಂದ ………………………..ಅವ್ಯಕ್ತ
ಸೇವೆ ಬದುಕು ಅಂದು
ಸಂಪಾದನೆ ಬದುಕು ಇಂದು
ಸೇವೆ ಸಂಪಾದನೆ ಬೇಕೆಂದ ……………………ಅವ್ಯಕ್ತ
ಸಾಧಕ ಬದುಕು ಅಂದು
ಸೋಮಾರಿ ಬದುಕು ಇಂದು
ಸಾಧಕ ಬದುಕು ಸಾಕೆಂದ ………………………ಅವ್ಯಕ್ತ
ಕಲ್ಲನ್ನು ಕೆತ್ತುವಾತ ಶಿಲ್ಪಿ
ಬದುಕು ರೂಪಿಸುವಾತ ಮಾನವ
ಶಿಲ್ಪಿ ಮಾನವ ಆಗಲೆಂದ ……………………..ಅವ್ಯಕ್ತ
ಉದ್ಯೋಗ ಉದ್ಯಮ ಅರಸುವಾತ ಅವಿದ್ಯಾವಂತ ಸೋಮಾರಿ
ಉದ್ಯೋಗ ಉದ್ಯಮ ಸೃಷ್ಟಿದಾತ ವಿದ್ಯಾವಂತ ಸಾಧಕ
ಜನ ಮನದ ಬಯಕೆ ತಿಳಿಸಿ ಹೇಳೆಂದ ………………..ಅವ್ಯಕ್ತ