Online Education – Part -1,ಆನಲೈನ್ ಶಿಕ್ಷಣ – ಭಾಗ -!

ಶೇರ್ ಮಾಡಿ

ದೇವರು ಪ್ರಕೃತಿ ಮತ್ತು ಮಾನವರ ಕೊಡುಗೆ – ಕೊರೊನದ ಫಲವಾಗಿ ಆನಲೈನ್ ಶಿಕ್ಷಣ ಕೂಗು ಪ್ರಪಂಚದ ಮೊಲೆ ಮೂಲೆಯಿಂದ ಕೇಳಿ ಬರುತಿದೆ. ಟಿ ವಿ , ಕಂಪ್ಯೂಟರ್ , ಮೊಬೈಲ್ , ಇಂಟರ್ನೆಟ್ ಇವುಗಳನ್ನು ಬಳಸಿಕೊಂಡು ಶಿಕ್ಷಣವನ್ನು ಮಕ್ಕಳಿಗೆ – ಮನೆಯಲ್ಲಿಯೇ ಒದಗಿಸುವಂತೆ ಮಡುವುದೆ ಆನಲೈನ್ ಶಿಕ್ಷಣ . ಸಾಮಾಜಿಕ ಅಂತರ ಕಾಪಾಡುವ ಸಮಸ್ಯೆ ,ಮಾಸ್ಕ ಬಳಕೆ, ಶುಚಿತ್ವ , ರೋಗ ಹರಡುವ ಭೀತಿ, ಒಂದು ವರುಷದ ಶಿಕ್ಷಣ ಹೋದರು ಪರವಾಗಲ್ಲ ಬದುಕಿ ಉಳಿದರೆ ಸಾಕೆಂಬ ಮನೋಭಾವನೆ ಮುಂತಾದ ಹತ್ತು ಹಲವಾರು ಗೊಂದಲದ ಗೂಡಾಗಿರುವ ಮಾನವರಿಗೆ ಆನಲೈನ್ ಶಿಕ್ಷಣ ಅಲ್ಪ ಮಟ್ಟಿನ ವಿರಾಮ ಕೊಟ್ಟು ಮುಂದೆ ಸಾಗಲು ಅನುಮತಿ ದೊರೆತಂತೆ ಆಗಿದೆ .
ಮಕ್ಕಳು ದೇವರಿಗೆ ಸಮಾನ ಎಂದು ನಮಗೆಲ್ಲ ತಿಳಿದ ವಿಷಯ – ಅವರು ಒಂದು ಖಾಲಿ ಕಂಪ್ಯೂಟರ್ ಇದ್ದ ಹಾಗೆ – ನಮಗೆ ಯಾವ ಸಾಫ್ಟ್ವೇರ್ ಬೇಕೋ ಅದನ್ನು ನಮ್ಮ ಕಂಪ್ಯೂಟರಿಗೆ ಹಾಕಿದಾಗ ನಮ್ಮ ಬಳಕೆಗೆ ಅದು ಸಿದ್ಧವಾಗುವ ರೀತಿಯಲ್ಲಿಯೆ – ಶಿಕ್ಷಣ ಸಂಸ್ಥೆಗಳು ತಂದೆ ತಾಯಿಗಳೊಂದಿಗೆ ಪೋಷಕರು ಫಲವತ್ತಾದ ಭೂಮಿಯಲ್ಲಿ ಯಾವ ಬೀಜವನ್ನು ಬಿತ್ತಿ ಯಾವ ಫಲ ದೊರೆಯುತ್ತ ಇದೆ ಎನ್ನುವುದು ನಮಗೆಲ್ಲ ತಿಳಿದಿರುವ ವಿಷಯ.
ಅಕ್ಷರ ಜ್ಞಾನವನ್ನು ಕೊಡುವ ಕಾರ್ಖಾನೆಗಳಿಗೂ ಮತ್ತು ಶಿಕ್ಸಣ ಜ್ಞಾನವನ್ನು ಕೊಡುವ ಶಿಕ್ಷಣ ಸಂಸ್ಥೆಗಳಿಗೂ ಇರುವ ವೆತ್ಯಾಸವನ್ನು ಮನಗಂಡು ಅರಿತು ಮುನ್ನಡೆಯುವ ತುರ್ತು ಅಗತ್ಯವಿದೆ. ನಾವು – ದೇಶದ ಪ್ರಜೆಗಳು ಯಾಂತ್ರಿಕ ಶಾಲೆಯಿಂದ ಶಿಕ್ಸಣ ಪಡೆದು ಬಂದುದರ ಫಲವಾಗಿ – ಕೊಲೆಗಾರರು , ಲಂಚಗಾರರು, ರೇಪಿಸ್ಟುಗಳು, ಸ್ವಾರ್ಥಕ್ಕಾಗಿ ದೇಶವನ್ನು ಬಲಿಕೊಡುವವರು, ಸಂವಿಧಾನ ಅರಿವೇ ಇಲ್ಲದವರು,ಏಲ್ಲಾ ರೀತಿಯ ಹುದ್ದೆಗಳಲ್ಲಿ – ಜಾತಿ ನೆಂಟರಿಷ್ಟರನ್ನು ಕೂಡಿಹಾಕುವವರು , ಕಾನೂನು ಪಾಲನೆಗೆ ನಾವೇ ಮಾಡಿರುವುದುಎಂಬುದನು ಮರೆತು ಮಹತ್ವ ಕೊಡದೆ ನ್ಯಾಯಾಲಯವೆಂಬ ಕೊನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿದವರು – ಒಂದೇ ಮಾತಿನಲ್ಲಿ ಹೇಳುವುದಾದರೆ ದೇವಮಾನವರು ಮತ್ತು ಮಾನವರಿಗೆ ಅನಾನುಕೂಲವಾಗಿ ದಾನವರಿಗೆ ಮಾತ್ರ ಅನುಕೂಲವಾಗುವ ವಾಸ್ತವ ಸ್ಥಿತಿ – ನಮ್ಮೆಲ್ಲರ ಕೊಡುಗೆ – ನಮಗೆ ಊಟ.
ದೇವರಂಥ ಮಕ್ಕಳು ದೇವಮಾನವರಾಗಿ ಬಾಳುವಂತೆ ಮಾಡಲು ಯಾವುದೇ ರೀತಿಯ ಕಷ್ಟ ತೊಂದರೆ ಹಣದ ಪೋಲು ಕಂಡಿತಾ ಇಲ್ಲವೇ ಇಲ್ಲ. ಶಿಕ್ಷಣವೆಂಬ ನಾಮಾಂಕಿತದಲ್ಲಿ – ದೇಶದ ಸಂಪತ್ತು, ಸಮಯ , ಶ್ರಮ ಸಕಲವೂ ನೀರಿನ ಮೇಲೆ ಇಟ್ಟ ಹೋಮದಂತಾಗಿದೆ .
ಹುಟ್ಟು ಮತ್ತು ಸಾವಿನ ಮದ್ಯೆ ಇರುವ ದಾರಿ ತೋರಿಸಬಲ್ಲ, ದೇವರ ಬಗ್ಗೆ ಸ್ಪಷ್ಟ ಅರಿವು ಮೂಡಿಸಬಲ್ಲ, ದೇಶದ ಕಾನೂನನ್ನು ನೂರಕ್ಕೆ ನೂರು ಪಾಲಿಸಬಲ್ಲ , ತಪ್ಪು ಮಾಡಿದರೆ ಯಾ ತಪ್ಪು ಆದರೆ ಒಪ್ಪಿಕೊಂಡು ಶಿಕ್ಷೆಗೆ ತಲೆಬಾಗ ಬಲ್ಲ, ಇನ್ನೊಬ್ಬರು ಹೊರಹಾಕೀದ ತ್ಯಾಜ್ಜ ತ್ಯಜಿಸಬಲ್ಲ , ನಡೆ ನುಡಿ ನಡವಳಿಕೆ ಶುದ್ದೀಕರಿಸಬಲ್ಲ – ಮಾನವ ಜನಾಂಗದ ಸೃಷ್ಟಿಯೇ ನಿಜವಾದ ಶಿಕ್ಸಣ – ಅದುವೇ – ಆನಲೈನ್ ಶಿಕ್ಸಣ – ಬೆಳಕಿನ ಶಿಕ್ಸಣ – ಆನಲೈನ್ ಬದುಕಿಗಾಗಿ

See also  Women Bulletin-ಮಹಿಳಾ ಬುಲೆಟಿನ್


ಅವ್ಯಕ್ತ ವಚನಗಳು
ಆನಲೈನ್ ಶಿಕ್ಷಣ ಆನಲೈನ್ ಬದುಕು
ಆಫ್ ಲೈನ್ ಶಿಕ್ಷಣ ಆಫ್ ಲೈನ್ ಬದುಕು
ಆನಲೈನ್ ಆಫ್ ಲೈನ್ ನಿನಗೆ ಬಿಟ್ಟುದಯ್ಯ ……………….avyaktha

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?