ದೇವರ ಮಕ್ಕಳು ಜೀವರಾಶಿಗಳು
ಅರಸರ ಮಕ್ಕಳು ಪ್ರಜೆಗಳು
ಸ್ವಾರ್ಥರ ಮಕ್ಕಳು ನಿಕಟವರ್ತಿಗಳೆಂದ – ಅವ್ಯಕ್ತ
ನ್ಯಾಯಾಂಗ ಶಾಸಕಾಂಗ ಕಾರ್ಯಂಗ ಭ್ರಷ್ಟಾಚಾರ
ವ್ಯಾಪಾರಿಗಳ ಅಧಿಕಾರಿಗಳ ಪ್ರತಿನಿದಿಗಳ ಭ್ರಷ್ಟಾಚಾರ
ದೈವ ದೇವಸ್ಥಾನ ಭ್ರಷ್ಟಾಚಾರಗಳ ಪಿತಾಮಹವೆಂದ – ಅವ್ಯಕ್ತ
ಪ್ರಜಾಪದ್ಧತಿ ಅವಧಿ ಪಟ್ಟ
ಅರಸು ಪದ್ಧತಿ ಜೀವಿತ ಪಟ್ಟ
ಸಮ್ಮಿಲನ ಪದ್ಧತಿ ದೈವ ಇಚ್ಚೆಯೆಂದ – ಅವ್ಯಕ್ತ
ಪ್ರತಿಮೆ ಪ್ರತಿಷ್ಠೆ ಪ್ರತಿಸ್ಟಾಚಾಯರು
ಚೈತನ್ಯ ಪ್ರತಿಷ್ಠೆ ಮಾನವರು
ಪ್ರತಿಮೆ ಚೈತನ್ಯ ಆರಿಸಯ್ಯ – ಅವ್ಯಕ್ತ
ಅರಸು ಪದ್ಧತಿ ಅರಸು ಬಲಿದಾನ
ಪ್ರಜಾಪದ್ಧತಿ ಪ್ರಜೆ ಬಲಿದಾನ
ಕುತಂತ್ರ ಪದ್ಧತಿ ಸಮಾಜ ಬಲಿದಾನ – ಅವ್ಯಕ್ತ
ದುಡ್ಡಿಗೆ ಪೂಜೆ ಮಾಲ್ಪರು ಮಧ್ಯಮರು
ಪೂಕ್ಕಟೆ ಪೂಜೆ ಮಾಲ್ಪರು ಉತ್ತಮರು
ನಿರಂತರ ಪೂಜೆ ಮಾಲ್ಪರು ಅತ್ಯುತಮರೆಂದ – ಅವ್ಯಕ್ತ
ರುಚಿಗೆ ತಿಂಬವ ರೋಗಿ
ಹಸಿವಿಗೆ ತಿಂಬವ ನಿರೋಗಿ
ಅರಿತು ತಿಂಬವ ಬಾಳುತಿಹನು – ಅವ್ಯಕ್ತ
ದೇವರಿಲ್ಲದ ದೇವಾಲಯ ದೈವವಿಲ್ಲದ ದೈವಾಲಯ
ವಿದ್ಯೆ ಕೊಡದ ವಿದ್ಯಾಲಯ ನ್ಯಾಯ ಕೊಡದ ನ್ಯಾಯಾಲಯ
ಕಲಿಯುಗದ ಮಾನವನ ಆವಿಸ್ಕಾರವೆಂದ ಅವ್ಯಕ್ತ
ಸ್ವಾರ್ಥ ಮಂತ್ರ ಕನಿಷ್ಠ
ತ್ಯಾಗ ಮಂತ್ರ ಉತ್ತಮ
ಮಂತ್ರ ಆಯ್ಕೆ ನಿನ್ನದಯ್ಯಾ – ಅವ್ಯಕ್ತ
ದೇವಾ ನೀ ಪರ ಕಾಯದೊಳಿದ್ದು ಮಾತಾಡುತಿರೆ
ಸುಜ್ಞಾನಿ ತಲೆ ತೂಗುತಿಹನು ಜ್ಞಾನಿ ಮೂಕನಾಗಿಹನು
ಅಜ್ಞಾನಿ ನಿಬ್ಬೆರಗಾಗಿ ಅಪಹಾಸ್ಯ ಮಾಡುತಿಹನು …….ಅವ್ಯಕ್ತ
ನಿನ್ನ ಮಿಗಿಲಾದ ಜ್ಯೋತಿಸ್ಯರಿಲ್ಲವೆಂಬರು ಪೋಪರಲ್ಲಿಗೆ
ನಿನ್ನ ಮಿಗಿಲಾದ ವೈದ್ಯರಿಲ್ಲವೆಂಬರು ಪೋಪರಲ್ಲಿಗೆ
ಮಾರು ವೇಸದಿ ಜೋತಿಷಿಯಾಗಿ ವೈದ್ಯರಾಗಿ ನೀನೆ ಬಂದೆಯಾ………. ಅವ್ಯಕ್ತ
ರೋಗಿ ವೈದ್ಯರ ಅನ್ನದಾತ
ವೈದ್ಯ ರೋಗಿಯ ಜೀವದಾತ
ಜೀವನ ಹಿಂಡಿದ ಜೀವದಾತ ವೈದ್ಯನೇ ……….ಅವ್ಯಕ್ತ
ಮಸ್ತಕದ ವೈದ್ಯ ಸ್ಮಶಾನದಿಂದ ಎದ್ದು ಬರುತಿಹನು
ಯಾಂತ್ರಿಕ ವೈದ್ಯ ಸ್ಮಶಾನದತ್ತ ದಾಪುಗಾಲು ಹಾಕುತಿಹನು
ಮಸ್ತಕ ಯಾಂತ್ರಿಕ ವೈದ್ಯ ನಿಟ್ಟುಸಿರು ಬಿಡುತಿಹನು ………….ಅವ್ಯಕ್ತ
ನರಪ್ರಾಣಿಗಳನ್ನು ಬಕುತರನ್ನಾಗಿಸದೆ
ದೈವ ದೇವಸ್ಥಾನಗಳ ಜೀರ್ಣೋದಾರ ಮಲ್ಪಾಒದೆ
ಜನರಿಗೆ ಭೂಮಿಗೆ ಭಾರವಾಗಿಹ ದೈವ ದೇವಸ್ಥಾನಗಳ ನೋಡ ……….ಅವ್ಯಕ್ತ
ಭಕುತರು ದೇವರಲ್ಲಿಗೆ ಪೋಪರು
ಭಕುತರ ಭಕುತರಲ್ಲಿಗೆ ದೇವರು ಪೋಪರು
ಭಕುತನಗುವೆಯೋ ಭಕುತರ ಭಕುತನಗುವೆಯೋ ……………..ಅವ್ಯಕ್ತ
ಪತಿ ನಂಬದ ಸತಿ ಬಾಳು
ಸತಿ ನಂಬದ ಪತಿ ಬಾಳು
ಸುಖ ಶಾಂತಿ ನೆಮ್ಮದಿ ಬಾಳಿಗಿಟ್ಟ ಕಿಚೆಂದ …………………ಅವ್ಯಕ್ತ
ಪತಿ ಕೈಗೊಂಬೆಯಾದ ಸತಿ
ಸತಿ ಕೈಗೊಂಬೆಯಾದ ಪತಿ
ಜೀವಂತ ಶವಗಳೆಂದ …………………ಅವ್ಯಕ್ತ
(ಶುಭಾಕರ ಹೆಗ್ಗಡೆ ,ಇಚಿಲಂಪಾಡಿ ಬೀಡು )